ರಾಜನಾಥ್ ಸಿಂಗ್ 
ರಾಜ್ಯ

6ನೇ ತಲೆಮಾರಿನ ಏರೋ ಎಂಜಿನ್‌ಗಳತ್ತ ಗಮನ ಹರಿಸುವ ಸಮಯ ಇದು: ರಾಜನಾಥ್ ಸಿಂಗ್

ಬೆಂಗಳೂರಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಗ್ಯಾಸ್ ಟರ್ಬೈನ್ ಸಂಶೋಧನಾ ಸಂಸ್ಥೆ(GTRE)ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಣಾ ಸಚಿವರು ಮಾತನಾಡಿದರು.

ಬೆಂಗಳೂರು: ಐದನೇ ತಲೆಮಾರಿನ ಏರೋಸ್ಪೇಸ್ ಎಂಜಿನ್‌ಗಳನ್ನು ಮೀರಿ ಆರನೇ ತಲೆಮಾರಿನ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಒತ್ತಿ ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಮುಂದಿನ ತಲೆಮಾರಿನ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲು 25-30 ವರ್ಷಗಳನ್ನು ತೆಗೆದುಕೊಳ್ಳುತ್ತವೆ ಎಂದ ರಕ್ಷಣಾ ಸಚಿವರು, ದೇಶದ ಕಾರ್ಯತಂತ್ರದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಿಜ್ಞಾನಿಗಳು ಈ ಸಮಯದ ಮಿತಿಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ನಾವು ಈಗಾಗಲೇ 20 ವರ್ಷಗಳನ್ನು ಕಳೆದಿದ್ದೇವೆ, ಇನ್ನೂ ಕೇವಲ ಐದರಿಂದ ಏಳು ವರ್ಷಗಳಲ್ಲಿ ನಾವು ಗುರಿ ತಲುಪಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.

ಬೆಂಗಳೂರಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಗ್ಯಾಸ್ ಟರ್ಬೈನ್ ಸಂಶೋಧನಾ ಸಂಸ್ಥೆ(GTRE)ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಆರನೇ ಭಾರತ-ಫ್ರಾನ್ಸ್ ವಾರ್ಷಿಕ ರಕ್ಷಣಾ ಮಾತುಕತೆಗೆ ಒಂದು ದಿನ ಮೊದಲು ಅವರು ಸ್ಥಳೀಯ ಮಿಲಿಟರಿ ಅನಿಲ ಟರ್ಬೈನ್ ಎಂಜಿನ್ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಪರಿಶೀಲಿಸಿದರು.

"ನಾವು ಸುಧಾರಿತ ಮಧ್ಯಮ ಯುದ್ಧ ವಿಮಾನದ ವಿನ್ಯಾಸ ಮತ್ತು ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದ್ದೇವೆ. ಏರೋ ಎಂಜಿನ್‌ಗಳ ಕ್ಷೇತ್ರದಲ್ಲಿ ಪರಿಣತಿಯನ್ನು ಸಾಧಿಸಲು ನಾವು ಹಿಂದೆ ಹಲವಾರು ಪ್ರಯತ್ನಗಳನ್ನು ಮಾಡಿದ್ದೇವೆ. ಈಗ, ಆ ಪ್ರಯತ್ನಗಳನ್ನು ಪೂರ್ಣಗೊಳಿಸುವ ಸಮಯ ಬಂದಿದೆ. ನಾವು ನಮ್ಮನ್ನು ಕೇವಲ ಐದನೇ ತಲೆಮಾರಿನ ಎಂಜಿನ್‌ಗಳಿಗೆ ಸೀಮಿತಗೊಳಿಸಬಾರದು. ನಾವು ಸಾಧ್ಯವಾದಷ್ಟು ಬೇಗ ಸುಧಾರಿತ ತಂತ್ರಜ್ಞಾನಗಳೊಂದಿಗೆ ಆರನೇ ತಲೆಮಾರಿನ ಎಂಜಿನ್ ಗಳ ಅಭಿವೃದ್ಧಿಯನ್ನು ಪ್ರಾರಂಭಿಸಬೇಕು" ಎಂದರು.

ದೇಶೀಯ ರಕ್ಷಣಾ ತಂತ್ರಜ್ಞಾನಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆಗೆ ಸಾಕ್ಷಿಯಾಗಿ ಕೇಂದ್ರ ಸಚಿವರು ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿದರು. "ಸಂವಹನ ವ್ಯವಸ್ಥೆಗಳು, ಕಣ್ಗಾವಲು ಉಪಕರಣಗಳು ಅಥವಾ ದಾಳಿ ಶಸ್ತ್ರಾಸ್ತ್ರಗಳಾಗಿರಲಿ, ಆಪರೇಷನ್ ಸಿಂಧೂರ್ ನಲ್ಲಿ ಬಳಕೆಯಾದ ಎಲ್ಲವೂ ಸ್ವದೇಶಿ ನಿರ್ಮಿತವಾಗಿತ್ತು. ಇದು ನಮ್ಮ ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸಿತು ಮತ್ತು ನಾಗರಿಕರಲ್ಲಿ ಹೆಮ್ಮೆಯನ್ನು ತುಂಬಿತು" ಎಂದು ಅವರು ಹೇಳಿದರು.

ಭಾರತ-ಫ್ರಾನ್ಸ್ ವಾರ್ಷಿಕ ರಕ್ಷಣಾ ಮಾತುಕತೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿರುವ 6ನೇ ಭಾರತ-ಫ್ರಾನ್ಸ್ ವಾರ್ಷಿಕ ರಕ್ಷಣಾ ಮಾತುಕತೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್‌ ರಕ್ಷಣಾ ಸಚಿವೆ ಕ್ಯಾಥರೀನ್ ವೌಟ್ರಿನ್ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರದ ಕುರಿತು ಚರ್ಚಿಸಲಿದ್ದಾರೆ.

ಅಕ್ಟೋಬರ್ 12, 2025 ರಂದು ಫ್ರಾನ್ಸ್‌ ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ ವೌಟ್ರಿನ್ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. ಎರಡೂ ದೇಶಗಳು ಮತ್ತೊಂದು ದಶಕದವರೆಗೆ ದ್ವಿಪಕ್ಷೀಯ ರಕ್ಷಣಾ ಸಹಕಾರ ಒಪ್ಪಂದವನ್ನು ನವೀಕರಿಸುವ ನಿರೀಕ್ಷೆಯಿದೆ ಮತ್ತು ಹ್ಯಾಮರ್ ಕ್ಷಿಪಣಿಗಳ ಜಂಟಿ ತಯಾರಿಕೆಯ ಕುರಿತು ಇಬ್ಬರು ಸಚಿವರು ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿಂದೂ ಮನೆ ಮೇಲೆ ನಿರಂತರ ಕಲ್ಲು ತೂರಾಟ: ಚಿಕ್ಕಮಗಳೂರಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ, ಭದ್ರತೆ ಹೆಚ್ಚಳ

JEE ಮುಖ್ಯ ಪರೀಕ್ಷೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್; ಪಡೆದು ಅಂಕ ಎಷ್ಟು ಗೊತ್ತಾ?

ಸಿಎಂ ಸಿದ್ದರಾಮಯ್ಯ ಬಣದ 20 ಶಾಸಕರ ವಿದೇಶ ಪ್ರವಾಸ: ಆಸ್ಟ್ರೇಲಿಯಾಗೆ ಹಾರಲು ಸಜ್ಜು!

ಕರ್ನಾಟಕ-ಗೋವಾ ಗಡಿಯಲ್ಲಿ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಹಾರಾಷ್ಟ್ರ ಎಸ್‌ಐಟಿ ಹೇಳಿದ್ದೇನು?

'ವೋಟ್ ಚೋರಿ ಕಹಾ ಹೈ? ಕಾಂಗ್ರೆಸ್ ಪಾರ್ಟಿ ಮೇ ಹೈ! ರಾಹುಲ್ ಗಾಂಧಿ ಪೂರ್ವಜರು ಚುನಾವಣಾ ಅಕ್ರಮದ ಪಿತಾಮಹರು'

SCROLL FOR NEXT