ಸಂತೋಷ್ ಲಾಡ್ 
ರಾಜ್ಯ

ಅಂಬಾನಿ ಕಂಪನಿಗೆ 1 ಲಕ್ಷ ಕೋಟಿ ರೂ ಲಾಭ ಯಾಕೆ ಮಾಡಿಕೊಡಬೇಕು! ಅವರು ದೇಶಕ್ಕೆ ಏನು ಮಾಡಿದ್ದಾರೆ? Jio ಏಕೆ ಮೊದಲ ಸ್ಥಾನದಲ್ಲಿದೆ? BSNL ಕತೆ ಏನಾಯ್ತು?

ದೇಶ ಮುಖ್ಯ ದೇಶ ಮುಖ್ಯ ಅಂತಾ ಹೇಳಿ ಏನು ಮಾಡ್ತಿದ್ದೀರಾ. ದಿನ ಬೆಳಗ್ಗೆ ಎದ್ರೆ ಭಾರತ್ ಮಾತಾ ಕಿ ಜೈ ಅಂತಾ ಹೇಳಿಕೊಂಡು ಓಡಾಡಿಬಿಟ್ರೆ ಸಾಕಾ ಎಂದಿದ್ದಾರೆ.

ಬೆಂಗಳೂರು: ವಿದೇಶಕ್ಕೆ ಹೋಗಿ ಶಾಸಕರು ರಾಜ್ಯದ ರಾಜಕಾರಣ ಮಾಡಲು ಸಾಧ್ಯವೇ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಾಡುವಾಗ ಅವರ ಶಾಸಕರು ಎಲ್ಲಿಗೆ ಹೋಗಿದ್ದರು. ಅವರ ಪ್ರವಾಸದ ಬಗ್ಗೆ ಹೇಳಬೇಕಾ? ವಿದೇಶಕ್ಕೆ ಹೋಗಿರುವ ನಮ್ಮ ಹತ್ತಿಪ್ಪತ್ತು ಶಾಸಕರಿಂದ ಅಲ್ಲಿ ಹೋಗಿ ರಾಜಕಾರಣ ಮಾಡಲು ಸಾಧ್ಯವೇ? ಅವರೇನೂ ಅಲ್ಲಿಗೆ ಹೋಗಿ ಮತಗಳನ್ನು ಹಾಕುತ್ತಾರಾ? ಎಂದ ಲಾಡ್‌, ಸರ್ಕಾರದಿಂದ ಅಥವಾ ವೈಯಕ್ತಿಕವಾಗಿ ವಿದೇಶ ಪ್ರವಾಸಕ್ಕೆ ಹೋಗಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಂಬಾನಿಯವರು 1 ಲಕ್ಷ ಕೋಟಿ ರೂಪಾಯಿ ಲಾಭ ಮಾಡಿಕೊಟಿದ್ದಾರೆ. ಅಂಬಾನಿ ದೇಶಕ್ಕೆ ಏನು ಮಾಡಿದ್ದಾರೆ. ಪುಟಿನ್ ಕರ್ಕೊಂಡು ಬಂದು ಫೋಟೋ ತೆಗೆಸಿಕೊಂಡ್ರಿ ಏನು ಲಾಭ ಬಂತು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ಇರಾನ್ ನಿಂದ ಆಯಿಲ್ ತಗೋಬಾರದು, ಅಂದ್ರು ರಷ್ಯಾದಿಂದ ತಗೊಬಾರ್ದು ಅಂತಾ ಹೇಳಿದ್ರು. ದೇಶ ಮುಖ್ಯ ದೇಶ ಮುಖ್ಯ ಅಂತಾ ಹೇಳಿ ಏನು ಮಾಡ್ತಿದ್ದೀರಾ. ದಿನ ಬೆಳಗ್ಗೆ ಎದ್ರೆ ಭಾರತ್ ಮಾತಾ ಕಿ ಜೈ ಅಂತಾ ಹೇಳಿಕೊಂಡು ಓಡಾಡಿಬಿಟ್ರೆ ಸಾಕಾ ಎಂದಿದ್ದಾರೆ.

2014 ರಲ್ಲಿ ಬಿಎಸ್ ಎನ್ ಎಲ್ 35 ಸಾವಿರ ಟವರ್ ಗಳು ಇತ್ತು. ಬಿಎಸ್ ಎನ್ ಎಲ್ ಟಾಪ್ ರ್ಯಾಂಕ್ ನಲ್ಲಿತ್ತು. ಜಿಯೊ ಬಂತು, 35 ಸಾವಿರ ಟವರ್ ಗಳನ್ನು ಅಂಬಾನಿಯವರಿಗೆ ಕೊಟ್ಟುಬಿಟ್ಟಿದ್ದಾರೆ. ಜಿಯೋ ಬಂದ ಮೇಲೆ ಬಿಎಸ್ ಎನ್ ಎಲ್ ಎಲ್ಲಿಗೆ ಹೋಯ್ತು, ಇದಕ್ಕೆ ಯಾರು ಉತ್ತರ ಕೊಡ್ತಾರೆ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೀತ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

CJP ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲುಗಳ ರದ್ದತಿ: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ 1.10 ಲಕ್ಷ ಫಾರಂ-7 ಅರ್ಜಿ ಸ್ವೀಕೃತಿ, 40.88 ಲಕ್ಷ ನೋಟಿಸ್ ವಿಚಾರಣೆ ಪೂರ್ಣ: ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!