ರಾಜ್ಯ

'ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟಿದ್ದೀರಿ, ಹಿಂದೂಗಳಿಗೆ ಏಕೆ ತಡೆ?: ಬಾಗಲಕೋಟೆ ಕಲ್ಲೆಸೆತ ಪ್ರದೇಶದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ; Video

ಇತ್ತ ನಿಷೇದಾಜ್ಞೆ ಉಲ್ಲಂಘಿಸಿ ಶಿವಭವಾನಿ ದೇವಸ್ಥಾನದಲ್ಲಿ ಹಿಂದು ಮುಖಂಡರು ಸಭೆ ನಡೆಸಿದ್ದಾರೆ. ಮತ್ತೊಂದೆಡೆ ಹಿಂದೂ ಸಂಘಟನೆ ಯುವ ಕಾರ್ಯಕರ್ತರು ಅಂಗಡಿಗಳನ್ನು ಬಂದ್ ಮಾಡಿಸಲು ಮುಂದಾಗಿದ್ದಾರೆ.

ಬಾಗಲಕೋಟೆ: ಬಾಗಲಕೋಟೆಯ ನವನಗರ ಪ್ರದೇಶದ ಕಿಲಾ ಓಣಿಯಲ್ಲಿರುವ ಮಸೀದಿಯ ಬಳಿ ಫೆಬ್ರವರಿ 19ರ ರಾತ್ರಿ 10ಗಂಟೆ ಸುಮಾರಿಗೆ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟದ ಬಳಿಕ ಉಂಟಾಗಿದ್ದ ಬಿಗುವಿನ ವಾತಾವರಣ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಘಟನೆ ಖಂಡಿಸಿ ಹಿಂದು ಸಂಘಟನೆಗಳ ಕಾರ್ಯಕರ್ತರು ನಿನ್ನೆ ಬೀದಿಗಿಳಿದಿದ್ದರು. ನಿನ್ನೆ ಶುಕ್ರವಾರ ಮಸೀದಿಯಲ್ಲಿ ನಮಾಜ್ ಇದ್ದುದರಿಂದ ಪಂಕಾ ಮಸೀದಿ ಹಾಗೂ ಕೊತ್ತಲೇಶ್ವರ ದೇವಸ್ಥಾನದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಇದುವರೆಗೆ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.

ಹಿಂದೂ ಮುಖಂಡರ ಸಭೆ

ಇತ್ತ ನಿಷೇದಾಜ್ಞೆ ಉಲ್ಲಂಘಿಸಿ ಶಿವಭವಾನಿ ದೇವಸ್ಥಾನದಲ್ಲಿ ಹಿಂದು ಮುಖಂಡರು ಸಭೆ ನಡೆಸಿದ್ದಾರೆ. ಮತ್ತೊಂದೆಡೆ ಹಿಂದೂ ಸಂಘಟನೆ ಯುವ ಕಾರ್ಯಕರ್ತರು ಅಂಗಡಿಗಳನ್ನು ಬಂದ್ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ತಡೆದ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ತರಕಾರಿ ಮಾರುಕಟ್ಟೆ ಪಕ್ಕದ ಮಾಂಸದ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ತಕ್ಷಣವೇ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ.

ನಿನ್ನೆ ಅಪರಾಹ್ನ ಡಿಸಿ ಕಚೇರಿಯಲ್ಲಿ ಎರಡು ಗುಂಪಿನ ಮುಖಂಡರನ್ನು ಶಾಂತಿ ಸಭೆಗೆ ಕರೆಯಲಾಗಿತ್ತು. ಸಭೆಗೆ ಹಿಂದು ಮುಖಂಡರು ಆಗಮಿಸಿದರು. ಡಿಸಿ ಕಚೇರಿಗೆ ಬಂದ ಮುಸ್ಲಿಂ ಮುಖಂಡರು ಸಭೆಯಿಂದ ಹೊರಗುಳಿದಿದ್ದರು. ಇದರಿಂದ ರೊಚ್ಚಿಗೆದ್ದ ಹಿಂದು ಸಂಘಟನೆ ನಾಯಕರು ಶಾಂತಿ ಸಭೆ ಬಹಿಷ್ಕರಿಸಿದ್ದಾರೆ.

ಶಾಂತಿ ಸಭೆ ಬಹಿಷ್ಕರಿಸಿ ಹೊರಬಂದ ಹಿಂದೂ ಮುಖಂಡರು ಎಲ್ಲಾ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಗಡುವು ನೀಡಿದ್ದಾರೆ. ಫೆಬ್ರುವರಿ 22 ರಂದು ಸರ್ವ ಸಮಾಜದ ಸಭೆ ಕರೆಯುತ್ತೇವೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಹಿಂದೂ ಮುಖಂಡರ ಆಕ್ಷೇಪ

ಕಳೆದ ರಾತ್ರಿ ಕೊತ್ತಲೇಶ್ವರ ದೇವಸ್ಥಾನದ ಬಳಿ ಹಾಕಲಾಗಿರುವ ಬ್ಯಾರಿಕೇಡ್ ತೆರವುಗೊಳಿಸುವಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದರು ‘ನಾವು ಗಣಪತಿ ದೇವಸ್ಥಾನಕ್ಕೆ ಹೇಗೆ ಹೋಗುವುದು ಹೇಗೆ, ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟಿದ್ದೀರಿ. ನಮಗೆ ಹಿಂದೂಗಳಿಗೆ ಏಕೆ ತಡೆ ಎಂದು ಬ್ಯಾರಿಕೇಡ್ ಒದ್ದು ತಳ್ಳಿ ಹೋಗಲು ಪ್ರಯತ್ನಿಸಿದ್ದಾರೆ. ಆಗ ತಡೆದ ಪೊಲೀಸರ ಜೊತೆಗೆ ವಾಗ್ವಾದ ನಡೆದಿದೆ.

ಪ್ರದೇಶದಲ್ಲಿ ಹೆಚ್ಚಿನ ಭದ್ರತೆಗೆ ಗದಗ ಎಸ್ಪಿ ,ವಿಜಯಪುರ ಎಎಸ್ಪಿ, ಬೆಳಗಾವಿ ಪೊಲೀಸ್ ಅಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೆಬನಾನ್ ಮೇಲೆ ಇಸ್ರೇಲ್ ದಾಳಿಗೆ ಪ್ರತೀಕಾರ; ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಇರಾನ್ ಹಿಂದೆ ಸರಿಯಿತು: ಉಪ ವಿದೇಶಾಂಗ ಸಚಿವ

4ನೇ ಪಂದ್ಯವನ್ನೂ ಸೋತ KKR: ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಟ್ಟ LSG ಆಟಗಾರ ಮುಕುಲ್ ಚೌಧರಿ!

ಲೆಬನಾನ್‌ನಲ್ಲಿ ಹತ್ಯಾಕಾಂಡ ನಿಲ್ಲಿಸದಿದ್ದರೆ ಹುಷಾರ್: ಇಸ್ರೇಲ್ ದಾಳಿ ವಿರುದ್ಧ ಪಾಕಿಸ್ತಾನ ಆಕ್ರೋಶ!

ಶಿವಮೊಗ್ಗ: ತಡೆಗೋಡೆ ನಿರ್ಮಾಣದ ವೇಳೆ ಭೀಕರ ದುರಂತ; ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವು

ಈಗ ಯುದ್ಧಗಳನ್ನು ಕೇವಲ ಗುಂಡು ಹಾರಿಸಿ ಗೆಲ್ಲಲು ಸಾಧ್ಯವಿಲ್ಲ; 'ಹೈಬ್ರಿಡ್' ಸಿದ್ಧತೆ ಅತ್ಯಗತ್ಯ ಏಕೆ? ಜನರಲ್ ಉಪೇಂದ್ರ ದ್ವಿವೇದಿ

SCROLL FOR NEXT