ಸುರೇಶ್ ಗೌಡ ಕಾರು ಅಪಘಾತ 
ರಾಜ್ಯ

ಮಂಡ್ಯ: ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ಸುರೇಶ್ ಗೌಡಗೆ ಗಂಭೀರ ಗಾಯ; ಕಾರು ಸಂಪೂರ್ಣ ನಜ್ಜು-ಗುಜ್ಜು

ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದ ಬಳಿ ರಾತ್ರಿ 12 ಗಂಟೆ ವೇಳೆಗೆ ಈ ಅಪಘಾತದ ಘಟನೆ ನಡೆದಿದೆ. ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಅವರು ಮದ್ದೂರಿನ ಹೊಸಗಾವಿ ಗ್ರಾಮಕ್ಕೆ ಹೋಗಿ ವಾಪಸ್ ಬರುತ್ತಿದ್ದರು.

ಮಂಡ್ಯ: ನಾಗಮಂಗಲದ ಮಾಜಿ ಶಾಸಕ ಕೆ.ಸುರೇಶ್ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ರಾತ್ರಿ ಅಪಘಾತಕ್ಕೆ ಒಳಗಾಗಿದೆ. ಅದೃಷ್ಟವಶಾತ್ ಸುರೇಶ್ ಗೌಡ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕನಿಗೂ ತೀವ್ರ ಗಾಯಗಳಾಗಿವೆ. ಇಬ್ಬರನ್ನೂ ತಕ್ಷಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದ ಬಳಿ ರಾತ್ರಿ 12 ಗಂಟೆ ವೇಳೆಗೆ ಈ ಅಪಘಾತದ ಘಟನೆ ನಡೆದಿದೆ. ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಅವರು ಮದ್ದೂರಿನ ಹೊಸಗಾವಿ ಗ್ರಾಮಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ಈ ಸಮಯದಲ್ಲಿ ಅಪಘಾತ ಸಂಭವಿಸಿದೆ.

ನಾಗಮಂಗಲಕ್ಕೆ ತೆರಳುವ ದಾರಿಯಲ್ಲಿ ತಡರಾತ್ರಿ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಗೆ ಹೋಗಿ ದೊಡ್ಡ ಅಪಘಾತಕ್ಕೀಡಾಗಿದೆ. ಕಾರು ಪಲ್ಟಿಯಾಗಿ ಸಂಪೂರ್ಣ ಹಾನಿಯಾಗಿದ್ದು, ರಕ್ತದ ಮಡುವಿನಲ್ಲಿದ್ದ ಇಬ್ಬರನ್ನೂ ಸ್ಥಳೀಯರು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು.

ಸುರೇಶ್ ಗೌಡ ತಲೆ, ಮುಖ, ಕೈ-ಕಾಲುಗಳಲ್ಲಿ ಗಂಭೀರ ಗಾಯಗಳಾಗಿವೆ. ಚಾಲಕನ ಸ್ಥಿತಿಯೂ ಗಂಭೀರವಾಗಿದೆ. ಇಬ್ಬರನ್ನೂ ಮೊದಲು ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉನ್ನತ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಸುರೇಶ್ ಗೌಡ ಅವರು ನಾಗಮಂಗಲ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿದ್ದರು. ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿರುವ ಅವರು ಪ್ರದೇಶದಲ್ಲಿ ಜನಪ್ರಿಯ ನಾಯಕರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಂಜಾನ್ ನಡುವೆಯೇ ಅಫ್ಘಾನಿಸ್ತಾನದ ಮೇಲೆ ಪಾಕ್ ದಾಳಿ: ಹಲವು ನಾಗರಿಕರ ಸಾವು

ವಿದೇಶಿ ವಿಶ್ವವಿದ್ಯಾಲಯ ಮಾದರಿ ಅನುಸರಿಸಿ, ಅತಿಥಿ ಉಪನ್ಯಾಸಕರಿಂದ ಸಿಬ್ಬಂದಿ ಕೊರತೆ ನೀಗಿಸಿ: ವಿಸಿಗಳಿಗೆ CM ಸಲಹೆ

ಏಪ್ರಿಲ್ ಅಂತ್ಯದ ವೇಳೆಗೆ ಬೆಂಗಳೂರಿನ ಎಲ್ಲಾ ರಸ್ತೆ ಕಾಮಗಾರಿ ಪೂರ್ಣ: ತೆರಿಗೆ ಪಾವತಿ ಮಾಡದವರ ಆಸ್ತಿ ಹರಾಜು; ಡಿ.ಕೆ.ಶಿವಕುಮಾರ್

ನಾಯಕತ್ವ ಜಟಾಪಟಿ: ಶೀಘ್ರದಲ್ಲೇ ಹೈಮಾಂಡ್ ನಿರ್ಧಾರ; ಸತೀಶ್ ಜಾರಕಿಹೊಳಿ

ಸಿಎಂ ಕುರ್ಚಿ ಕದನ: ಸಮಸ್ಯೆ ಪರಿಹಾರವಾಗಲಿದೆ ಎಂಬ ಖರ್ಗೆ ಭರವಸೆ ಸಂತಸ ತಂದಿದೆ; ಡಿ.ಕೆ.ಶಿವಕುಮಾರ್

SCROLL FOR NEXT