ಪತಿ ಕುಟುಂಬಸ್ಥರ ವಿರುದ್ಧವೇ ದೂರು ದಾಖಲಿಸಿದ ಮಹಿಳೆ 
ರಾಜ್ಯ

ಅನೈತಿಕ ಸಂಬಂಧ ಶಂಕೆ: 9 ತಿಂಗಳ ಗರ್ಭಿಣಿ ಮೇಲೆ ಪತಿ ಹಲ್ಲೆ, ಪೊಲೀಸ್ ದೂರು ದಾಖಲು!

ಅನೈತಿಕ ಸಂಬಂಧ ಆರೋಪ ಮಾಡಿ ಗರ್ಭಿಣಿ ಪತ್ನಿಯ ಮೇಲೆ‌ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ​ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಅನೈತಿಕ ಸಂಬಂಧ ಶಂಕೆ ಮೇರೇಗೆ ಪತಿಮಹಾಶಯನೋರ್ವ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು.. ಅನೈತಿಕ ಸಂಬಂಧ ಆರೋಪ ಮಾಡಿ ಗರ್ಭಿಣಿ ಪತ್ನಿಯ ಮೇಲೆ‌ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ​ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು 8 ವರ್ಷಗಳ ಹಿಂದೆ ಜ್ಯೋತಿ ಹಾಗೂ ಅನುರಾಗ ಪಾಂಡೆ ಅನ್ನೋರು ಉತ್ತರ ಪ್ರದೇಶದಲ್ಲಿ ಮದುವೆಯಾಗಿದ್ದರು. ಅನುರಾಗ್ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರಿಂದ ಜ್ಯೋತಿಯನ್ನು ಕೂಡ ಇಲ್ಲಿಗೆ ಕರೆದುಕೊಂಡು ಬಂದಿದ್ದರು.

ನಾಲ್ಕು ವರ್ಷಗಳ ಕಾಲ ಪತ್ನಿ ಜೊತೆ ಚೆನ್ನಾಗಿದ್ದ ಪತಿ ನಂತರ ಕಿರುಕುಳ ನೀಡಲು ಶುರಮಾಡಿದ್ದರು ಎಂಬ ಆರೋಪಿಸಲಾಗಿದೆ.

ಅನೈತಿಕ ಸಂಬಂಧ ಶಂಕೆ

ಪತಿ ಅನುರಾಗ್ ಗೆ ಪತ್ನಿ ಜ್ಯೋತಿ ಮೇಲೆ ಅನುಮಾನ ಇತ್ತು. ಅನೈತಿಕ ಸಂಬಂಧ ಆರೋಪ ಮಾಡಿ ಪತ್ನಿ‌ಯ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ಈ ಹಿಂದೆ ಮೊದಲು ಗರ್ಭ ಧರಿಸಿದ್ದಾಗಲೂ ಆಕೆಯನ್ನು ಅನುಮಾನದಿಂದ ಕಂಡು ಹಲ್ಲೆ ಮಾಡಿದ್ದ. ಬಳಿಕ ಗಂಡು ಮಗು ಹುಟ್ಟಿದ ಮೇಲೆ ಕೆಲ ವರ್ಷ ಸುಮ್ಮನಿದ್ದ. ಕೊನೆಗೆ ಮತ್ತೆ ಅನುಮಾನದಿಂದ ಕಿರುಕುಳ ನೀಡಲು ಶುರುಮಾಡಿದ್ದ. ಎರಡನೇ ಬಾರಿ ಗರ್ಭಿಣಿ ಆದ ಮೇಲೆ ಮತ್ತೆ ಅನುಮಾನ ಶುರುವಾಗಿತ್ತಂತೆ.

9 ತಿಂಗಳ ಗರ್ಭಿಣಿ ಮೇಲೆ ಕುಟುಂಬಸ್ಥರಿಂದ ಹಲ್ಲೆ

ಇದೀಗ 9 ತಿಂಗಳ ಗರ್ಭಿಣಿಯಾದ ಮೇಲೆ ಅತ್ತೆ, ಮಾವ, ಪತಿಯಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಇದರಿಂದ ಗಾಬರಿಯಾದ ಜ್ಯೋತಿ ತವರು ಮನೆಗೆ ಹೋಗಿದ್ದಳು. ಎರಡನೇ ಮಗು ಜನಿಸಿದ ಮೇಲೆ ಮತ್ತೆ ಬೆಂಗಳೂರಿಗೆ ಬಂದಿದ್ದಳು. ಈಗ ಮತ್ತೆ ಹೊಡೆದು ದೈಹಿಕ ಹಿಂಸೆ ನೀಡುತ್ತಿರೋದಾಗಿ ದೂರಿನಲ್ಲಿ ತಿಳಿಸಿದ್ದಾಳೆ.

ಮಾವ ರಾಮಪ್ರಸಾದ್, ಅತ್ತೆ ರಾಣಿ, ಪತಿ ಅನುರಾಗ ಮೇಲೆ ಜ್ಯೋತಿ ದೂರು ನೀಡಿದ್ದಾಳೆ. ನನ್ನ ಮೇಲೆ ಹಲ್ಲೆ ಮಾಡಿ ಮನೆಯಿಂದ ಆಚೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ.

ಜ್ಯೋತಿ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ರೀತಿಯ ಕುಟುಂಬ ಹಿಂಸಾಚಾರದ ಪ್ರಕರಣಗಳು ಮಹಿಳೆಯರ ಸುರಕ್ಷತೆಗೆ ದೊಡ್ಡ ಆತಂಕವಾಗಿವೆ. ಮಹಿಳೆಯರು ಇಂತಹ ಸಂದರ್ಭಗಳಲ್ಲಿ ತಕ್ಷಣ ಪೊಲೀಸರಿಗೆ ದೂರು ನೀಡಬೇಕು ಮತ್ತು ಸಹಾಯ ಪಡೆಯಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದ ಯುವಕ ದಾರುಣ ಅಂತ್ಯ

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel