Congress ಎಂಎಲ್ ಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನಡುವೆ ಜಟಾಪಟಿ 
ರಾಜ್ಯ

ಸಭೆಯಿಂದ ಎದ್ದು ಹೋಗ್ತೀನೀ?: SC-STಗೆ ಅನ್ಯಾಯ; ಸಚಿವ ಸಂತೋಷ್ ಲಾಡ್ ಮುಂದೆ Congress MLC ಗುಡುಗು, Video!

ಧಾರವಾಡದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ SC-ST ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು Congress ಎಂಎಲ್ ಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನಡುವೆ ಜಟಾಪಟಿ ನಡೆದ ಪ್ರಸಂಗ ನಡೆಯಿತು.

ಧಾರವಾಡ: ಧಾರವಾಡದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ SC-ST ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು Congress ಎಂಎಲ್ ಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನಡುವೆ ಜಟಾಪಟಿ ನಡೆದ ಪ್ರಸಂಗ ನಡೆಯಿತು. ಸಚಿವ ಸಂತೋಷ್​ ಲಾಡ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ಪರಿಶೀಲನೆ ವೇಳೆ ಸಚಿವ ಲಾಡ್ ಹಾಗೂ ಎಂಎಲ್​ಸಿ FH ಜಕ್ಕಪ್ಪ ನಡುವೆ ವಾಗ್ವಾದ ನಡೆಯಿತು.

ಸಭೆಯಲ್ಲಿ ಮಾತನಾಡಿದ ಜಕ್ಕಪ್ಪ ನಾನು SC-ST ಸಮಾಜದ ಪರ ದ್ವನಿ ಎತ್ತುತ್ತಿದ್ದೇನೆ ಎಂದರು. ಈ ವೇಳೆ ಸಚಿವರು ಹಾಗೂ ಎಂಎಲ್​ಸಿ ನಡುವೆ ವಾಗ್ದಾಳಿ ನಡೆಯಿತು. ಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಜಕ್ಕಪ್ಪನವರ ಆರೋಪಿಸಿದರು. ಎಲ್ಲರಿಗೂ ಮಾತನಾಡಲು ಅವಕಾಶ ನೀಡಲಾಗುತ್ತಿದೆ. ವಾದ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವ ಲಾಡ್ ಹೇಳಿದರು.

ಈ ವೇಳೆ ಮಾತಿಗೆ ಮಾತು ಬೆಳೆದು ಸಭೆಯಿಂದ ಹೊರ ನಡೆಯುವುದಾಗಿ ಜಕ್ಕಪ್ಪನವರ ಹೇಳಿದರು. ಸಭೆಯಿಂದ‌ ಹೊರ ಹೋಗುವಂತೆ‌ ನಾನು ಹೇಳಿಲ್ಲ. ಹೋಗಬೇಕು ಅನಿಸಿದರೆ ಹೋಗಬಹುದು ಎಂದು ಲಾಡ್ ಹೇಳಿದರು. ಈ ವೇಳೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ನಾಯಕರ ಮಧ್ಯಸ್ಥಿಕೆ ವಹಿಸಿ ವಾಗ್ವಾದ ತಿಳಿಗೊಳಿಸಿದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ 9 ಸಂಕಲ್ಪಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ಜನತೆಗೆ ಕರೆ-Video

Sri Guru Bhairavaikya Mandir: ಆದಿಚುಂಚನಗಿರಿಯಲ್ಲಿ ಶ್ರೀ ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಏನಿದರ ವಿಶೇಷತೆ?-Video

ಬೆಂಗಳೂರು HAL ಏರ್ ಪೋರ್ಟ್ ಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ ಕೋರಿ 18 ಪ್ರಮುಖ ಬೇಡಿಕೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ: ಅವು ಹೀಗಿದೆ...

ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವದಿಂದಲೇ ಅಬ್ದುಲ್‌ ಜಬ್ಬಾರ್ ಕಿತ್ತೊಗೆದ ಕಾಂಗ್ರೆಸ್..!

ಭಾರತದ ಬುಡಕ್ಕೇ ಬಂದ ಟ್ರಂಪ್: Hormuz ಬಳಿಕ Malacca ಮೇಲೂ ಅಮೆರಿಕ ಕಣ್ಣು, ಮೋದಿಗೆ ಹೊಸ ತಲೆನೋವು..!

SCROLL FOR NEXT