ಅರಣ್ಯಾಧಿಕಾರಿಗಳಿಂದ ಹೆಬ್ಬಾವು ರಕ್ಷಣೆ 
ರಾಜ್ಯ

ಒಂದೇ ದಿನದಲ್ಲಿ 6 ಹೆಬ್ಬಾವುಗಳ ರಕ್ಷಣೆ: ಹೊಸ ದಾಖಲೆ ಬರೆದ ಕಾರವಾರ ಅರಣ್ಯ ಸಿಬ್ಬಂದಿ!

ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಕಠಿಣಕೋಣ ಗ್ರಾಮದ ನಿವಾಸಿ ವಿಜಯ ತಳೇಕರ ಅವರ ಮನೆಯ ಆವರಣದಲ್ಲಿ ಕೆಲವು ದಿನಬಳಕೆಯ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು.

ಕಾರವಾರ: ​ಕಾರವಾರದ ಮನೆಯೊಂದರಲ್ಲಿ ಪ್ರತ್ಯಕ್ಷವಾಗಿದ್ದ ಬೃಹತ್ ಗಾತ್ರದ 6 ಹೆಬ್ಬಾವುಗಳನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಅರಣ್ಯಾಧಿಕಾರಿಗಳಾದ ಗೋಪಾಲ್ ನಾಯಕ್ ಡಿ ಮತ್ತು ರಾಜೇಶ್ ನಾಯಕ್ ಮನೆಯೊಂದರ ಆವರಣದಲ್ಲಿದ್ದ ಆರು ಭಾರತೀಯ ರಾಕ್ ಹೆಬ್ಬಾವುಗಳನ್ನು ರಕ್ಷಿಸಿದರು.

ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಕಠಿಣಕೋಣ ಗ್ರಾಮದ ನಿವಾಸಿ ವಿಜಯ ತಳೇಕರ ಅವರ ಮನೆಯ ಆವರಣದಲ್ಲಿ ಕೆಲವು ದಿನಬಳಕೆಯ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು. ಈ ವಸ್ತುಗಳ ಅಡಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವುಗಳು ಅಡಗಿ ಕುಳಿತಿದ್ದನ್ನು ಗಮನಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ನಾವು ಮೊದಲು ಒಂದು ರಾಕ್ ಹೆಬ್ಬಾವನ್ನು ನೋಡಿದ್ದೇವೆ. ಅದು 12 ಅಡಿಗಿಂತ ಕಡಿಮೆ ಉದ್ದ ಮತ್ತು 40 ಕೆಜಿ ತೂಕವಿತ್ತು. ನಂತರ ಕೆಲವು ಪೈಪ್‌ಗಳನ್ನು ಸರಿಸಿದಾಗ ಇನ್ನೊಂದು ಕಂಡುಬಂತು. ಪೈಪ್ ಗಳನ್ನು ಸರಿಸಿದಾಗ ನಮಗೆ ಆಶ್ಚರ್ಯವಾಗುವಂತೆ, ಅಲ್ಲಿ ಹಾವುಗಳು ಸುರುಳಿ ಸುತ್ತಿ ಮಲಗಿದ್ದವು. ಸಾಮಾನ್ಯವಾಗಿ ನಾವು ಒಂದೇ ಬಾರಿಗೆ ಎರಡಕ್ಕಿಂತ ಹೆಚ್ಚು ಹಾವುಗಳನ್ನು ನೋಡಿರಲಿಲ್ಲ, ಆದರೆ ಇಲ್ಲಿ ಆರು ಹೆಬ್ಬಾವುಗಳಿದ್ದುದ್ದನ್ನು ನಮಗೆ ನಂಬಲು ಸಾಧ್ಯವಾಗಲಿಲ್ಲ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ರಾಕ್ ಹೆಬ್ಬಾವುಗಳು ವಿಷಕಾರಿಯಲ್ಲದ ಜಾತಿಯಾಗಿದ್ದು, ಅರಣ್ಯ ಪ್ರದೇಶಗಳು ಮತ್ತು ಕೆರೆಗಳಿಂದ ತೆರವುಗೊಳಿಸಿದ ನಂತರ ಮಳೆಗಾಲದಲ್ಲಿ ಕಾರವಾರ ಪಟ್ಟಣದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್