ಸಂಗ್ರಹ ಚಿತ್ರ 
ರಾಜ್ಯ

Tejas Aircraft: ತೇಜಸ್ ಯುದ್ಧ ವಿಮಾನ ಹಾರಾಟ ಸಂಪೂರ್ಣ ಸ್ಥಗಿತ; ಪರಿಶೀಲನೆಗೆ IAF ಮುಂದು..!

ತೇಜಸ್‌ ವಿಮಾನವನ್ನು ವ್ಯಾಪಕವಾದ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲು ವಾಯುಪಡೆ ಮುಂದಾಗಿದ್ದು, ಇದರಿಂದಾಗಿ ಭಾರತೀಯ ವಾಯುಪಡೆಯಲ್ಲಿನ ಸುಮಾರು 30 ಸಿಂಗಲ್-ಸೀಟ್ ತೇಜಸ್ ಜೆಟ್‌ಗಳ ಸಂಪೂರ್ಣ ಫ್ಲೀಟ್ ಗಳ ಬಳಕೆಯನ್ನು ಸ್ಥಗಿತಗೊಳಿಸಿದೆ.

ಬೆಂಗಳೂರು: ಫೆ.7ರಂದು ನಡೆದ ತೇಜಸ್‌ ವಿಮಾನ ಅಪಘಾತ ಘಟನೆಯ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ವಾಯುಪಡೆ (IAF) ತೇಜಸ್‌ ನ ಎಲ್ಲಾ ಸಿಂಗಲ್‌ ಸೀಟ್ ವಿಮಾನಗಳ ಬಳಕೆಯನ್ನು ಸ್ಥಗಿತಗೊಳಿಸಿದೆ.

ಇತ್ತೀಚೆಗೆ ತೇಜಸ್‌ ವಿಮಾನದಲ್ಲಿ ಹೆಚ್ಚುತ್ತಿರುವ ಸರಣಿ ಅಪಘಾತಗಳ ಬೆನ್ನಲ್ಲೇ, ತೇಜಸ್‌ ವಿಮಾನವನ್ನು ವ್ಯಾಪಕವಾದ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲು ವಾಯುಪಡೆ ಮುಂದಾಗಿದ್ದು, ಇದರಿಂದಾಗಿ ಭಾರತೀಯ ವಾಯುಪಡೆಯಲ್ಲಿನ ಸುಮಾರು 30 ಸಿಂಗಲ್-ಸೀಟ್ ತೇಜಸ್ ಜೆಟ್‌ಗಳ ಸಂಪೂರ್ಣ ಫ್ಲೀಟ್ ಗಳ ಬಳಕೆಯನ್ನು ಸ್ಥಗಿತಗೊಳಿಸಿದೆ. ಈ ನಿರ್ಧಾರ ತೇಜಸ್‌ ನ ಮೂರನೇ ವಿಮಾನ ಅಪಘಾತದ ಬಳಿಕ ಬಂದಿದ್ದು, ಸಾಕಷ್ಟು ಕಳವಳವನ್ನು ಹುಟ್ಟಿಸಿದೆ.

2024ರಲ್ಲಿ ಮೊದಲ ಬಾರಿಗೆ ತೇಜಸ್‌ ಜೆಟ್‌ ಜೈಸಲ್ಮೇರ್ ಪ್ರದೇಶದಲ್ಲಿ ಮೊದಲ ಅಪಘಾತ ಸಂಭವಿಸಿತ್ತು. ಫೈರ್‌ ಪವರ್ ಪ್ರದರ್ಶನದಿಂದ ಹಿಂತಿರುಗುತ್ತಿದ್ದಾಗ ವೇಳೆ ಜೈಸೆಲ್ಮೇರ್‌ ನಲ್ಲಿ ತೇಜಸ್‌ ಯುದ್ದವಿಮಾನ ಅಪಘಾತಕ್ಕೀಡಾಗಿದ್ದು, ಈ ಸಮಯದಲ್ಲಿ ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿದ್ದರು.

ಬಳಿಕ ಇತ್ತೀಚೆಗೆ ಕಳೆದ ವರ್ಷ 2025 ನವೆಂಬರ್‌ ತಿಂಗಳಿನಲ್ಲಿ ದುಬೈ ಏರ್ ಶೋನಲ್ಲಿ ನಡೆದ ಏರೋಬ್ಯಾಟಿಕ್ ಪ್ರದರ್ಶನದ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ತೇಜಸ್‌ ವಿಮಾನ ಪತನಗೊಂಡಿದ್ದು, ಈ ದುರಂತದಲ್ಲಿ ಪೈಲೆಟ್‌ ಸಾವಿಗೀಡಾಗಿದ್ದರು.

ಇದಾದ ಬಳಿಕ ಮತ್ತೆ ಫೆ.7ರಂದು ಮತ್ತೊಂದು ಅಪಘಾತ ಸಂಭವಿಸಿದ್ದು, ಈ ಬೆನ್ನಲ್ಲೇ ಎಚ್ಚೆತ್ತ ಭಾರತೀಯ ವಾಯುಪಡೆ ಸುರಕ್ಷತಾ ದೃಷ್ಟಿಯಿಂದ ತೇಜಸ್‌ ವಿಮಾನಗಳ ತಾಂತ್ರಿಕ ಸ್ಥಿರತೆ ಹಾಗೂ ಸಾಮರ್ಥ್ಯದ ಪರಿಶೀಲನೆಗೆ ಮುಂದಾಗಿದೆ.

ಈ ಕುರಿತು HAL ಸೆಬಿಗೆ ಸ್ಪಷ್ಟನೆ ನೀಡಿದ್ದು, ಅಪಘಾತದ ವರದಿಗಳನ್ನು ನಿರಾಕರಿಸಿದೆ. ಸಣ್ಣ ತಾಂತ್ರಿಕ ಸಮಸ್ಯೆ" ಹೊರತುಪಡಿಸಿ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದೆ.

ತೇಜಸ್ Mk1 ಇತರೆ ಯುದ್ಧ ವಿಮಾನಗಳ ಪೈಕಿ ಅತ್ಯುತ್ತಮ ಸುರಕ್ಷತಾ ದಾಖಲೆಯನ್ನು ಹೊಂದಿದೆ ಎಂದು ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂತಾರಾ ಅಪಹಾಸ್ಯ ಪ್ರಕರಣ: 'ಸೂಪರ್ ಸ್ಟಾರ್ ಆದ್ರೇನು.. ನಾಲಿಗೆ ಮೇಲೆ ಹಿಡಿತ ಇರ್ಬೇಕು..': ನಟ ರಣವೀರ್ ಸಿಂಗ್ ಹೈಕೋರ್ಟ್ ಚಾಟಿ!

ಪಶ್ಚಿಮ ಬಂಗಾಳ SIR ಪರಿಶೀಲನೆ: ಜಾರ್ಖಂಡ್-ಒಡಿಶಾ ನ್ಯಾಯಾಧೀಶರ ನಿಯೋಜನೆಗೆ ಸುಪ್ರೀಂ ಕೋರ್ಟ್ ಅನುಮತಿ

ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಮೃತಪಟ್ಟ ಎಲ್ಲಾ ಏಳು ಮಂದಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ-Video

ಸಾಮೂಹಿಕ ಅತ್ಯಾಚಾರ: ಕೊನೆಗೂ ಮೌನ ಮುರಿದ ಸಂತ್ರಸ್ಥೆ, 'ನ್ಯಾಯಬೇಕು.. ನನ್ನಂತೆಯೇ ಸಾಕಷ್ಟು ಯುವತಿಯರಿಗೆ ದೌರ್ಜನ್ಯ'

T20 ವಿಶ್ವಕಪ್ 2026: ಜಿಂಬಾಬ್ವೆ ವಿರುದ್ಧ Shimron Hetmyer ಸಿಡಿಲಬ್ಬರದ ಬ್ಯಾಟಿಂಗ್, 17 ವರ್ಷಗಳ ಹಿಂದಿನ ಕ್ರಿಸ್ ಗೇಯ್ಲ್ ದಾಖಲೆ ಉಡೀಸ್!

SCROLL FOR NEXT