ನಾಸೀರ್ ಹುಸೇನ್ 
ರಾಜ್ಯ

ಮೊಬೈಲ್ ಪಾಸ್‌ವರ್ಡ್ ನಿನ್ನ ಹೆಂಡ್ತಿಗೆ ಕೊಡ್ತೀಯಾ? ಖಬರಸ್ಥಾನ ಆಸ್ತಿ ಬೇರೆಯವರಿಗೆ ವರ್ಗಾವಣೆಯಾಗಿದ್ದು ಹೇಗೆ? ಸಂಸದ ನಾಸೀರ್ ಹುಸೇನ್

ಖಬರಸ್ಥಾನ ಆಸ್ತಿಗೆ ನಕಲು ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಕಂದಾಯ ಅಧಿಕಾರಿಯೇ ಕಾರಣರಾಗಿದ್ದಾರೆ. ಅವರ ಲಾಗಿನ್ ಮೂಲಕವೇ ಭೂ ಕಬಳಿಕೆಯ ಕೃತ್ಯ ನಡೆದಿದೆ ಎಂದು ಗೊತ್ತಾಗಿಯೂ ಎಫ್‌ಐಆರ್‌ನಲ್ಲಿ ಅವರ ಹೆಸರು ಸೇರಿಸಿಲ್ಲ

ಬಳ್ಳಾರಿ: ನಿನ್ನ ಮೊಬೈಲ್ ಪಾಸ್‌ವರ್ಡ್ ನಿನ್ನ ಹೆಂಡ್ತಿಗೆ ಕೊಡ್ತೀಯಾ? ಕೊಡೋದಿಲ್ಲ ತಾನೇ. ನಿನ್ನ ಲಾಗಿನ್ ಮೂಲಕ ಖಬರಸ್ಥಾನ ಆಸ್ತಿ ಬೇರೆಯವರಿಗೆ ವರ್ಗಾವಣೆಯಾಗಿದ್ದು ಹೇಗೆ? ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಕಂದಾಯ ಅಧಿಕಾರಿ ನಂದೀಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಖಬರಸ್ಥಾನ ಆಸ್ತಿಗೆ ನಕಲು ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಕಂದಾಯ ಅಧಿಕಾರಿಯೇ ಕಾರಣರಾಗಿದ್ದಾರೆ. ಅವರ ಲಾಗಿನ್ ಮೂಲಕವೇ ಭೂ ಕಬಳಿಕೆಯ ಕೃತ್ಯ ನಡೆದಿದೆ ಎಂದು ಗೊತ್ತಾಗಿಯೂ ಎಫ್‌ಐಆರ್‌ನಲ್ಲಿ ಅವರ ಹೆಸರು ಸೇರಿಸಿಲ್ಲ

ಅವರ ವಿರುದ್ಧ ಮುಂದಿನ ಕ್ರಮ ಜರುಗಿಸುವ ಯಾವ ನಿಲುವು ಸಹ ತೆಗೆದುಕೊಂಡಿಲ್ಲ ಏಕೆ ಎಂದು ಸದಸ್ಯರು ಸಭೆಯಲ್ಲಿ ಗದ್ದಲ ಎಬ್ಬಿಸಿದರು. ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಪಾಲಿಕೆ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಿಮಗೆ ಮಾಹಿತಿ ಇಲ್ಲದೇ ಸರ್ಕಾರದ ಆಸ್ತಿ ಹೇಗೆ ಕಬಳಿಕೆ ಆಗಲು ಸಾಧ್ಯ? ಎಂದು ಪ್ರಶ್ನಿಸಿದರು.

ಘಟನೆ ನಡೆದು 15 ದಿನಗಳಾದರೂ ಪ್ರಕರಣ ದಾಖಲಾಗಿಲ್ಲ. ನಾನೇ ಪೊಲೀಸರ ಜೊತೆ ಮಾತಾಡಿ ಪ್ರಕರಣ ದಾಖಲಿಸಿದೆ. ಇಷ್ಟಾಗಿಯೂ ತಪ್ಪಿತಸ್ಥರನ್ನು ಅಮಾನತು ಮಾಡಿಲ್ಲ. ನಿಮ್ಮ ನಡೆ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.

ನೀವು ಅಪರ ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಯಾಗಿ ಪಾಲಿಕೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಹೇಗೆ? ಎಂದು ಪ್ರಶ್ನಿಸಿದರು. ವಕ್ಫ್ ಆಸ್ತಿಯನ್ನೇ ಕಬಳಿಸಿದರೂ ಸುಮ್ಮನಿದ್ದೀರಿ ಎಂದಾದರೆ ಇನ್ನು ಪಾಲಿಕೆ ವ್ಯಾಪ್ತಿಯ ಅದೆಷ್ಟೋ ಸರ್ಕಾರಿ ಆಸ್ತಿ ಮಾಯವಾಗಿದೆಯೋ ನೋಡಬೇಕು ಎಂದರು.

ಸರ್ಕಾರಿ ಆಸ್ತಿ ಕಬಳಿಸುವ ಟೀಮ್‌ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದೆ. ಇದು ನಿಮಗೆ ಗೊತ್ತಿಲ್ಲವೇ? ಕಂದಾಯ ಅಧಿಕಾರಿ ಲಾಗಿನ್‌ನಿಂದಲೇ ಭೂ ಕಬಳಿಕೆಯಾಗಿದೆ ಎಂದು ಗೊತ್ತಿದ್ದೂ ಈವರೆಗೆ ಯಾಕೆ ಸುಮ್ಮನಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳಾ ಮೀಸಲಾತಿ ಮಸೂದೆ ವಿರೋಧಿಸುವವರು ಭಾರಿ ಬೆಲೆ ತೆರಬೇಕಾಗುತ್ತದೆ: ವಿಪಕ್ಷಗಳಿಗೆ ಪ್ರಧಾನಿ ಮೋದಿ ವಾರ್ನಿಂಗ್!

Parliament special session: ಕ್ಷೇತ್ರ ಪುನರ್ ವಿಂಗಡಣೆ-ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಕುರಿತು ಚರ್ಚೆಗೆ 15 ಗಂಟೆ ನಿಗದಿ; ನಾಳೆ ಸಂಜೆ 4 ಗಂಟೆಗೆ ಮತದಾನ..!

ಯೋಗೇಶ್ ಗೌಡ ಹತ್ಯೆ ಪ್ರಕರಣ: Congress MLA ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ಶಿಕ್ಷೆ ನಾಳೆ ಪ್ರಕಟ!

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ತಿಂಗಳ ಹಿಂದಷ್ಟೇ ಆರಂಭವಾಗಿದ್ದ ಶುದ್ಧ ತಿಂಡಿ ಹೋಟೆಲ್ ಸುಟ್ಟು ಭಸ್ಮ

ಯುದ್ಧದಿಂದ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ: ಪಶ್ಚಿಮ ಏಷ್ಯಾ, ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ಪ್ರಧಾನಿ ಮೋದಿ ಕರೆ

SCROLL FOR NEXT