ಸಂಗ್ರಹ ಚಿತ್ರ 
ರಾಜ್ಯ

Passport ಪರಿಶೀಲನೆಗೆ Body cameras ಕಡ್ಡಾಯ..!

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಅರ್ಜಿದಾರರು ನೀಡಿದ ವಸತಿ ವಿಳಾಸಕ್ಕೆ ಖುದ್ದಾಗಿ ಭೇಟಿ ನೀಡಲೇಬೇಕು.

ಬೆಂಗಳೂರು: ಪಾಸ್‌ಪೋರ್ಟ್ ಪೊಲೀಸ್ ಪರಿಶೀಲನೆ ನೆಪದಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುವುದು ಹಾಗೂ ಲಂಚಕ್ಕೆ ಬೇಡಿಕೆ ಇಡುವ ಪ್ರಕರಣಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ.

ಪಾಸ್‌ಪೋರ್ಟ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರುವ ಉದ್ದೇಶದಿಂದ, ಪರಿಶೀಲನೆಗೆ ತೆರಳುವ ಪೊಲೀಸ್ ಸಿಬ್ಬಂದಿಗೆ ಇನ್ನು ಮುಂದೆ ದೇಹದ ಮೇಲೆ ಅಳವಡಿಸಬಹುದಾದ ಕ್ಯಾಮೆರಾಗಳ (Body-worn cameras) ಬಳಕೆಯನ್ನು ಕಡ್ಡಾಯಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯದ ಡಿಜಿ & ಐಜಿಪಿ ಎಂ.ಎ.ಸಲೀಂ ಅವರು ಈ ಆದೇಶ ಹೊರಡಿಸಿದ್ದು, ಆದೇಶದಲ್ಲಿ ಏನೆಲ್ಲ ಹೊಸ ನಿಯಮಗಳನ್ನು (ಮಾರ್ಗಸೂಚಿಗಳು) ಪಾಲಿಸುವಂತೆ ತಿಳಿಸಲಾಗಿದೆ ಅನ್ನುವ ಮಾಹಿತಿ ಇಲ್ಲಿದೆ...

  • ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಅರ್ಜಿದಾರರು ನೀಡಿದ ವಸತಿ ವಿಳಾಸಕ್ಕೆ ಖುದ್ದಾಗಿ ಭೇಟಿ ನೀಡಲೇಬೇಕು.

  • ಅಲ್ಲಿ ನೆರೆಹೊರೆಯವರು ಮತ್ತು ನಿವಾಸಿಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಬೇಕು. ಪರಿಶೀಲನೆಯ ನೆಪದಲ್ಲಿ ಯಾವುದೇ ಕಾರಣಕ್ಕೂ ಅರ್ಜಿದಾರರನ್ನು ಪೊಲೀಸ್ ಠಾಣೆಗೆ ಕರೆಸುವಂತಿಲ್ಲ.

  • ಪೊಲೀಸರು ಪರಿಶೀಲನೆಗಾಗಿ ಮನೆಗೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮೊದಲು ಅರ್ಜಿದಾರರಿಗೆ ಎಸ್‌ಎಂಎಸ್ (SMS) ಅಥವಾ ಫೋನ್ ಕರೆ ಮೂಲಕ ಮುಂಚಿತವಾಗಿ ಕಡ್ಡಾಯವಾಗಿ ಮಾಹಿತಿ ನೀಡಬೇಕು.

  • ಪರಿಶೀಲನಾ ಪ್ರಕ್ರಿಯೆ ಆರಂಭದಿಂದ ಹಿಡಿದು ಅದು ಪೂರ್ಣಗೊಳ್ಳುವವರೆಗೂ ಸಿಬ್ಬಂದಿ ಕಡ್ಡಾಯವಾಗಿ ತಮ್ಮ ಸಮವಸ್ತ್ರದ ಮೇಲೆ 'ಬಾಡಿ ವಾರ್ನ್ ಕ್ಯಾಮೆರಾ'ವನ್ನು ಆನ್ ಮಾಡಿರಬೇಕು. ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ರೆಕಾರ್ಡ್ ಆಗಬೇಕು.

  • ಸೂಕ್ತ ಹಾಗೂ ಸ್ಪಷ್ಟವಾದ ಪುರಾವೆಗಳಿಲ್ಲದೆ ಅರ್ಜಿದಾರರ ವಿರುದ್ಧ ಯಾವುದೇ 'ಪ್ರತಿಕೂಲ ವರದಿಗಳನ್ನು' (Adverse reports) ಸಲ್ಲಿಸುವಂತಿಲ್ಲ.

  • ಲಂಚದ ಉದ್ದೇಶದಿಂದ ಕಿರುಕುಳ ನೀಡುವುದು, ಅನಗತ್ಯ ವಿಳಂಬ ಮಾಡುವುದು ಅಥವಾ ಸಾರ್ವಜನಿಕರಿಗೆ ಅನಾನುಕೂಲತೆ ಉಂಟುಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

  • ಈ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಕರ್ತವ್ಯ ಲೋಪವೆಸಗಿದರೆ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

  • ಘಟಕ ಅಧಿಕಾರಿಗಳು ವೈಯಕ್ತಿಕವಾಗಿ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ವಾರಕ್ಕೊಮ್ಮೆ ವರದಿಗಳನ್ನು ಕಚೇರಿಗೆ ಸಲ್ಲಿಸಬೇಕು

  • ವಿಶೇಷ ಕಾರ್ಯಾಚರಣಾ ಅಡಚಣೆಗಳಿದ್ದಲ್ಲಿ ಸಂಬಂಧಿತ ಎಸ್‌ಪಿಯಿಂದ ಪೂರ್ವ ಲಿಖಿತ ಅನುಮತಿ ಪಡೆಯಬೇಕು.

ಈ ನಿರ್ದೇಶನಗಳ ಕಟ್ಟುನಿಟ್ಟಿನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಘಟಕ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕೈಗೊಂಡ ಕ್ರಮ ಕುರಿತ ವರದಿಯನ್ನು ರಾಜ್ಯ ಪೊಲೀಸ್ ಮುಖ್ಯಸ್ಥರ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT