ಸುದ್ದಿ ಮುಖ್ಯಾಂಶಗಳು online desk
ರಾಜ್ಯ

News wrap 28-02-2026 | HDK ಸಿಎಂ ಆಗೋದು ನನ್ನ ಕೈಲಿಲ್ಲ- HDD; ಕರ್ನಾಟಕದ ವಿರುದ್ಧ ಜಮ್ಮು-ಕಾಶ್ಮೀರಕ್ಕೆ ರಣಜಿ ಟ್ರೋಫಿ ಗೆಲುವು

ಕರ್ನಾಟಕದ ವಿರುದ್ಧ ಜಮ್ಮು-ಕಾಶ್ಮೀರಕ್ಕೆ ರಣಜಿ ಟ್ರೋಫಿ ಗೆಲುವು

ರಣಜಿ ಟ್ರೋಫಿ ಟೂರ್ನಿಯಲ್ಲಿ ಈ ವರೆಗೂ ಮೂರು ಬಾರಿ ಕ್ವಾರ್ಟರ್ ಫೈನಲ್ ತಲುಪಿ ಗೆಲುವಿನಿಂದ ವಂಚಿತವಾಗಿದ್ದ ಜಮ್ಮು-ಕಾಶ್ಮೀರ ತಂಡ ಅಂತಿಮವಾಗಿ ಕರ್ನಾಟಕದ ವಿರುದ್ಧ ರಣಜಿ ಟ್ರೋಫಿಯನ್ನು ಈ ಬಾರಿ ತನ್ನದಾಗಿಸಿಕೊಂಡಿದೆ. ಫೆಬ್ರವರಿ 28, 2026 ರಂದು ಕೆಎಸ್‌ಸಿಎ ರಾಜನಗರ ಕ್ರೀಡಾಂಗಣದಲ್ಲಿ, ಎಂಟು ಬಾರಿ ಟ್ರೋಫಿ ಗೆದ್ದ ಕರ್ನಾಟಕವನ್ನು ಸೋಲಿಸಿ ತನ್ನ ಮೊದಲ ರಣಜಿ ಟ್ರೋಫಿ ಕಿರೀಟವನ್ನು ಜಮ್ಮು-ಕಾಶ್ಮೀರ ಪಡೆದುಕೊಂಡಿದೆ. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 291 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ ನಂತರ ಜೆ & ಕೆ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಜೆ & ಕೆ ಈಗ ಭಾರತೀಯ ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಪ್ರಶಸ್ತಿಯನ್ನು ಗೆದ್ದ 19ನೇ ವಿಭಿನ್ನ ತಂಡವಾಗಿದೆ. ಜೆ & ಕೆ ತಂಡದ ಗೆಲುವು ಆಟದ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಮತ್ತಷ್ಟು ಸೂಚಿಸುತ್ತದೆ.

ರಾಜ್ಯದಲ್ಲಿ ಮತ್ತೊಂದು ಬೃಹತ್ ಜಿಎಸ್ ಟಿ ವಂಚನೆ ಜಾಲ ಬಯಲು

ರಾಜ್ಯದಲ್ಲಿ ಮತ್ತೊಂದು ಬೃಹತ್ ಜಿಎಸ್ ಟಿ ವಂಚನೆ ಜಾಲ ಬಯಲಾಗಿದ್ದು, ಬೃಹತ್ ನಕಲಿ Input Tax Credit ಜಾಲದ ಮಾಸ್ಟರ್‌ಮೈಂಡ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ವಲಯ ಘಟಕದ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಅಧಿಕಾರಿಗಳು 593 ಕೋಟಿ ರೂ. ಮೌಲ್ಯದ ವಂಚನೆ ಇನ್‌ವಾಯ್ಸ್‌ಗಳನ್ನು ಒಳಗೊಂಡ ಜಾಲವನ್ನು ಪತ್ತೆ ಮಾಡಿದ್ದಾರೆ. ಇದು ರಾಜ್ಯಗಳಾದ್ಯಂತ ಕಾರ್ಯನಿರ್ವಹಿಸುತ್ತಿರುವ ಶೆಲ್ ಸಂಸ್ಥೆಗಳ ಅತ್ಯಾಧುನಿಕ ಜಾಲವನ್ನು ಬಹಿರಂಗಪಡಿಸಿದೆ. ಬೆಂಗಳೂರು ಮೂಲದ ಸಂಸ್ಥೆಯಾದ ಮೆಸ್ಸರ್ಸ್ ಸ್ಟಾರ್ ಟ್ಯಾಕ್ಸ್ ಕನ್ಸಲ್ಟೆಂಟ್‌ ಈ ವಂಚನೆಯ ಮೂಲವಾಗಿದ್ದು, ಈ ಸಂಸ್ಥೆ ದೊಡ್ಡ ಪ್ರಮಾಣದ ತೆರಿಗೆ ವಂಚನೆಯನ್ನು ಆಯೋಜಿಸುತ್ತಿದೆ ಎಂದು ಶಂಕಿಸಲಾಗಿದೆ.

ಕಠ್ಮಂಡುವಿಗೆ ತೆರಳಬೇಕಿದ್ದ ವಿಮಾನ ಬೆಂಗಳೂರಿಗೆ ವಾಪಸ್: ಪ್ರಯಾಣಿಕರಿಂದ ಪ್ರತಿಭಟನೆ, ಆಕ್ರೋಶ

ಬೆಂಗಳೂರಿನಿಂದ ಕಠ್ಮಂಡುವಿಗೆ ತೆರಳಿದ್ದ ವಿಮಾನ ನಿಗದಿತ ಸ್ಥಳದಲ್ಲಿ ಲ್ಯಾಂಡ್ ಆಗದೇ ಬೆಂಗಳೂರಿಗೆ ಮರಳಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದು ಗೊಂದಲಕ್ಕೆ ಕಾರಣವಾಯಿತು. ಸತತ ಎರಡನೇ ದಿನ ಈ ರೀತಿಯ ಘಟನೆ ಪುನರಾವರ್ತನೆಯಾಗಿದೆ. ಗುರುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನಿಂದ ಕಠ್ಮಂಡುವಿಗೆ ವಿಮಾನ ತೆರಳಿತ್ತು. ಆದಾಗ್ಯೂ, ಪ್ರಯಾಣಿಕರಿಗೆ ಏನಾಯಿತು ಎಂಬುದನ್ನು ಸ್ಪಷ್ಟವಾಗಿ ತಿಳಿಸದೆ ಕಠ್ಮಂಡುವಿನಲ್ಲಿ ಲ್ಯಾಂಡ್ ಆಗದೆ ವಾಪಸ್ಸಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಶುಕ್ರವಾರ ಬೆಳಿಗ್ಗೆ ಅದೇ ವಿಮಾನ ಮತ್ತೆ ಟೇಕ್ ಆಫ್ ಆಗಿದೆ. ಆದರೂ ಮತ್ತೊಮ್ಮೆ ಕಠ್ಮಂಡುವಿನಲ್ಲಿ ಲ್ಯಾಂಡಿಂಗ್ ಮಾಡದೆ ಲಖನೌ ಕಡೆಗೆ ತಿರುಗಿಸಲಾಗಿದೆ. ಲಖನೌದಲ್ಲಿ ಲ್ಯಾಂಡಿಂಗ್ ಆದ ನಂತರ ಹಲವು ಗಂಟೆಗಳ ಕಾಲ ವಿಮಾನದೊಳಗೆ ಕುಳಿತುಕೊಳ್ಳುವಂತೆ ಮಾಡಲಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಯಕತ್ವ ಬದಲಾವಣೆ; ಶಾಸಕರಿಂದ ಹೈಕಮಾಂಡ್ ಭೇಟಿ ನಿರ್ಧಾರದ ಬಗ್ಗೆ DKS ಹೇಳಿದ್ದೇನು?

ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಕುರಿತು ಚರ್ಚೆಗಳು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದ್ದು, ಗೊಂದಲ ಬಗೆಹರಿಸುವಂತೆ 34ಕ್ಕೂ ಹೆಚ್ಚು ಶಾಸಕರು ಹೈಕಮಾಂಡ್ ಭೇಟಿಗೆ ನಿರ್ಧರಿಸಿರುವ ಬೆನ್ನಲ್ಲೇ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಗುರುವಾರದಂದು ಸಭೆ ಸೇರಿದ್ದ ಸಚಿವರು, ಶಾಸಕರು ದೆಹಲಿಗೆ ಹೋಗಿ ನಿಮ್ಮ ಪರವಾಗಿ ಮನವಿ ಮಾಡುತ್ತಾರಂತೆ ಎಂಬ ಮಾಧ್ಯಮಗಳ ಪ್ರಶ್ನೆಗೆ "ದಯವಿಟ್ಟು ಬೇಡ ಎಂದು ಮನವಿ ಮಾಡುತ್ತೇನೆ. ನಿಮ್ಮ ಸಮಸ್ಯೆಗಳು ಇದ್ದರೆ, ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರೆ, ಅಧಿಕಾರ, ಹುದ್ದೆ ಬೇಕು ಎಂದರೆ ಹೋಗಿ ಮನವಿ ಮಾಡಿಕೊಳ್ಳಿ. ನನ್ನ ವಿಚಾರಕ್ಕೆ ಹೋಗುವುದು ಬೇಡ" ಎಂದು ತಿಳಿಸಿದರು.

HDK ಸಿಎಂ ಆಗೋದು ನನ್ನ ಕೈಲಿ ಇಲ್ಲ- HDD

ಜೆಡಿಎಸ್ ನಾಯಕ ಕೇಂದ್ರ ಸಚಿವರಾಗಿರುವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ನನ್ನ ಕೈಯಲ್ಲಿಲ್ಲ. ಅದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತೀರ್ಮಾನ ಮಾಡಬೇಕು ಎಂದು ಮಾಜಿ ಪ್ರಧಾನ ಮಂತ್ರಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.

ವಿಜಯಪುರದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಜೆಡಿಎಸ್ ಬೆಳ್ಳಿಹಬ್ಬದ ಜನತಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಜೆಡಿಎಸ್ ಪಕ್ಷ ಎನ್ ಡಿಎ ಮೈತ್ರಿಕೂಟಕ್ಕೆ ನೀಡುವ ಶಕ್ತಿಯನ್ನು ಗುರುತಿಸಿ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಬುದ್ಧಿವಂತಿಕೆ, ರಾಜಕೀಯ ಜಾಣ್ಮೆ ಮತ್ತು ಪ್ರಬುದ್ಧತೆ ಮೋದಿ ಮತ್ತು ಅಮಿತ್ ಶಾ ಅವರಿಗಿದೆ. 2028ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Israel attack on Iran: ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನ್ ನ 53 ಶಾಲಾ ವಿದ್ಯಾರ್ಥಿನಿಯರ ಸಾವು!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಮದ್ಯಪ್ರಾಚ್ಯಕ್ಕೆ ಬೆಂಗಳೂರು ಸೇರಿ ದೇಶದ ಹಲವು ವಿಮಾನಗಳ ಹಾರಾಟ ರದ್ದು!

ಇರಾನ್ ಮೇಲೆ ಅಮೆರಿಕ ದಾಳಿಗೆ 'ಆಪರೇಷನ್ ಎಪಿಕ್ ಫ್ಯೂರಿ' ಎಂದು ಹೆಸರು; ಇಸ್ಲಾಮಿಕ್ ಸರ್ಕಾರ ಉರುಳಿಸುವುದು ನಮ್ಮ ಗುರಿ ಎಂದ ಟ್ರಂಪ್

2015ರ ಬಳಿಕ ಮತ್ತೆ ಕೆಎಲ್ ರಾಹುಲ್ ಬೌಲಿಂಗ್ ಮೋಡಿ: ರಣಜಿ ಫೈನಲ್​ನ ಕೊನೆಯ ದಿನ ಕೈಚಳಕ, Video!

ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ: ರಾಜಧಾನಿ ತೊರೆದ ಅಯತೊಲ್ಲಾ ಖಮೇನಿ

SCROLL FOR NEXT