ಬೆಂಗಳೂರು: ನಗರದ 10 ವರ್ಷದ ಪರಿಣಿತಾ ಬಿ, ಯುವ ಲೇಖಕಿಯಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಈಗಾಗಲೇ ಸ್ಥಾನ ಗಳಿಸಿದ್ದಾಪೆ. ಆಕೆ ಸದ್ಯ ಬಸವನಗುಡಿಯ ಎನ್ ಇಟಿ ಪಬ್ಲಿಕ್ ಶಾಲೆಯಲ್ಲಿ 4 ನೇ ತರಗತಿಯಲ್ಲಿ ಓದುತ್ತಿದ್ದು ಸುಬ್ಬು ಪಬ್ಲಿಕೇಷನ್ಸ್ ಪ್ರಕಟಿಸಿದ 'ಟೇಲ್ಸ್ ಬೈ ಪರಿ' ಎಂಬ ಪುಸ್ತಕವನ್ನು ಬರೆದಿದ್ದಾರೆ.
ಅವರ ತಂದೆ ಕೆ ಬಾಲಾಜಿ, ಬೆಸ್ಕಾಮ್‌ನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿದ್ದಾರೆ, ಅವರ ತಾಯಿ ಡಾ. ಅನುಷಾ ಆರ್ ಗುಪ್ತಾ ದಂತವೈದ್ಯರು. ಟಿಎನ್‌ಐಇ ಜೊತೆ ಮಾತನಾಡಿದ ಪರಿಣಿತ ತಂದೆ ಬಾಲಾಜಿ, “ನಾವು ಪರಿಣಿತಾಗೆ ಹಾಡುಗಳು ಮತ್ತು ಮಕ್ಕಳ ಕಥೆಗಳನ್ನು ಹೇಳುತ್ತಿದ್ದೆವು, ಆಗ ಅವಳು ತಮ್ಮದೇ ಆದ ಕಥೆಯನ್ನು ಬರೆಯಲು ನಿರ್ಧರಿಸಿದಳು. ಆಕೆ ಎಂಟು ವರ್ಷದವಳಿದ್ದಾಗ, ವಿಭಿನ್ನ ಪದಗಳ ಅರ್ಥವನ್ನು ಕಲಿಯಲು ಪ್ರಾರಂಭಿಸಿ ಪುಸ್ತಕ ಬರೆಯುವುದಾಗಿ ನಮಗೆ ಹೇಳಿದಳು. ಕಥೆಗಳ ಪುಸ್ತಕವಾಗಿ ಪ್ರಕಟಿಸಬೇಕಾದರೆ ಕನಿಷ್ಠ 30 ಪುಟಗಳನ್ನು ಬರೆಯಲು ನಾನು ಆಕೆಗೆ ಹೇಳಿದ್ದೆ ಎಂದು ತಿಳಿಸಿದ್ದಾರೆ.
ಶಾಲೆಯ ನಂತರ ಅವಳು ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿ 9 ವರ್ಷದವಳಿದ್ದಾಗ ಪುಸ್ತಕ ಬರೆಯಲು ಪ್ರಾರಂಭಿಸಿದಳು. ಆದಾಗ್ಯೂ, ಅವಳು ಅದನ್ನು ಬರೆಯುವುದನ್ನು ಪೂರ್ಣಗೊಳಿಸಿದಾಗ, ಪ್ರಕಾಶಕರನ್ನು ಹುಡುಕುವಲ್ಲಿ ನಮಗೆ ಸವಾಲುಗಳು ಎದುರಾದವು. ಅಂತಿಮವಾಗಿ, ಹುಬ್ಬಳ್ಳಿಯ ಸುಬ್ಬು ಪಬ್ಲಿಕೇಷನ್ಸ್ ಪುಸ್ತಕವನ್ನು ಪ್ರಕಟಿಸಲು ನಿರ್ಧರಿಸಿತು.
ಪರಿಣಿತಾ ಸಂಪಾದಕರು ಮತ್ತು ಸಚಿತ್ರಕಾರರೊಂದಿಗೆ ಕುಳಿತು ಅಗತ್ಯವಿರುವ ಚಿತ್ರಗಳ ಪ್ರಕಾರವನ್ನು ವಿವರಿಸಿದಳು. ನಾವು ಇಂಟರ್ನೆಟ್‌ನಿಂದ ಚಿತ್ರಗಳನ್ನು ಆಯ್ಕೆ ಮಾಡಲಿಲ್ಲ. ಅವೆಲ್ಲವುದಳನ್ನು ಪರಿಣಿತಾ ರಚಿಸಿದ್ದಾರೆ. ಬಹಳಷ್ಟು ಮಕ್ಕಳು ಪುಸ್ತಕವನ್ನು ಖರೀದಿಸಿದ್ದಾರೆ ಮತ್ತು ಅವರ ಕೆಲಸವನ್ನು ಮೆಚ್ಚಿದ್ದಾರೆ ಎಂದು ತಿಳಿಸಿದ್ದಾರೆ.