ನಿಡಸೋಸಿ ಶ್ರೀ  
ರಾಜ್ಯ

ಇಸ್ಲಾಂ, ಕ್ರೈಸ್ತ, ಹಿಂದೂ ಧರ್ಮಗಳಲ್ಲ, ಅವೆಲ್ಲವೂ ಮತಗಳು: ನಿಡಸೋಸಿ ಶ್ರೀ

ಧರ್ಮ ಎಂದರೆ ಧಾರಣೆ ಮಾಡುವುದು, ಧರ್ಮ ಎಂಬುದು ಸೂಕ್ಷ್ಮ ಪದ, ದೇಶದಲ್ಲಿ ಧರ್ಮದ ಬಗ್ಗೆ ಗೊಂದಲಗಳು ನಡೆಯುವುದಕ್ಕೆ ಕಾರಣ ನಾವು ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ಎಂದರು.

ಇಸ್ಲಾಂ, ಕ್ರೈಸ್ತ, ಹಿಂದೂ, ಬೌದ್ಧ ಇತ್ಯಾದಿಗಳು ಧರ್ಮಗಳಲ್ಲ, ಬದಲಿಗೆ ಮತಗಳಾಗಿವೆ. ಇವು ಧರ್ಮದ ಆಳವಾದ ತತ್ವಗಳಿಗಿಂತ, ಮಾನವ ನಿರ್ಮಿತ ಸಂಪ್ರದಾಯಗಳನ್ನು ಹೆಚ್ಚಾಗಿ ಪಾಲಿಸುತ್ತವೆ; ಇವುಗಳನ್ನು ಧರ್ಮ ಎಂದು ಹೇಳುತ್ತಿರುವುದಕ್ಕೆ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ನಿಡುಸೋಸಿ ಪಂಚಮ ಶಿವಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗ ಸ್ವಾಮೀಜಿ ಹೇಳಿದ್ದಾರೆ.

ಸಿದ್ದೇಶ್ವರ ಸ್ವಾಮಿಗಳ 3ನೇ ವರ್ಷದ ಗುರುನಮನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೈಸ್ತ ಧರ್ಮವು ಸಮಾನತೆ ಮತ್ತು ವಿಶ್ವಶಾಂತಿಯ ಸಂದೇಶವನ್ನು ನೀಡುತ್ತದೆ. ಶ್ರೀಗಳು ಹಿಂದೂ ಧರ್ಮದಲ್ಲಿರುವ ತಾರತಮ್ಯವನ್ನು ಟೀಕಿಸಿ, ಸಮಾನತೆ ಸಂದೇಶ ಸಾರುವ ಕ್ರೈಸ್ತ ಧರ್ಮವನ್ನು ಬೆಂಬಲಿಸುತ್ತಾರೆ ಎಂದು ಹೇಳಿದರು.

ಧರ್ಮ ಎಂದರೆ ಧಾರಣೆ ಮಾಡುವುದು, ಧರ್ಮ ಎಂಬುದು ಸೂಕ್ಷ್ಮ ಪದ, ದೇಶದಲ್ಲಿ ಧರ್ಮದ ಬಗ್ಗೆ ಗೊಂದಲಗಳು ನಡೆಯುವುದಕ್ಕೆ ಕಾರಣ ನಾವು ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು. ನಾವು ನಮ್ಮ ಸ್ವಭಾವಕ್ಕೆ ತಕ್ಕಂತೆ ಜಾತಿ, ಮತಗಳನ್ನು ಮಾಡಿಕೊಂಡಿದ್ದೇವೆ, ಆದರೆ ನಾವೆಲ್ಲರೂ ದಯೆ ಧರ್ಮವನ್ನು ಪಾಲಿಸಬೇಕು ಎಂದರು.

ಇಸ್ಲಾಂ, ಹಿಂದೂ, ಕ್ರೈಸ್ತ ಮುಂತಾದವುಗಳು ನಿಜವಾದ ಧರ್ಮಗಳಲ್ಲ, ಆದರೆ ಮಾನವರಿಂದ ಸೃಷ್ಟಿಸಲ್ಪಟ್ಟ 'ಮತಗಳು', ಹಿಂದೂ ಧರ್ಮದಲ್ಲಿ ತಾರತಮ್ಯ ಹೆಚ್ಚಿದೆ. ಸಮಾನತೆ ಮತ್ತು ವಿಶ್ವ ಶಾಂತಿಯ ಸಂದೇಶವನ್ನು ಸಾರುವ ಕ್ರೈಸ್ತ ಧರ್ಮವು ಜಗತ್ತನ್ನು ಆವರಿಸಬೇಕು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಡಿಎ ಹಿಂದೆಂದೂ ಮಾಡಲಾಗದ ಐತಿಹಾಸಿಕ ಯೋಜನೆಗಳನ್ನು ಹಮ್ಮಿಕೊಂಡಿದೆ: ಡಿಕೆ ಶಿವಕುಮಾರ್

2026 ರಲ್ಲಿ "ರಾಜಕೀಯ ಬಡ್ತಿ": ಗೃಹ ಸಚಿವ ಪರಮೇಶ್ವರ ಹೇಳಿಕೆ ಹಿಂದಿನ ಮರ್ಮ ಏನು?

ವಿಜಯಪುರ: ಪ್ರತಿಭಟನೆ ತಡೆಯಲು ಮುಂದಾದ PSI, ಪೇದೆಗೆ ಸ್ವಾಮೀಜಿ ಕಪಾಳಮೋಕ್ಷ!

ಗುವಾಹಟಿ-ಕೋಲ್ಕತ್ತಾ ನಡುವೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ; ಶೀಘ್ರದಲ್ಲೇ ಪ್ರಧಾನಿ ಮೋದಿ ಚಾಲನೆ

ಶಬರಿಮಲೆ ದೇಗುಲದಲ್ಲಿ 'ಚಿನ್ನ ಕಳ್ಳತನ' ಪ್ರಕರಣ: ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿಯಿಂದ SIT ವಶಕ್ಕೆ ಪಡೆದ ಚಿನ್ನವೆಷ್ಟು ಗೊತ್ತಾ? ಕೋರ್ಟಿಗೆ ಮಾಹಿತಿ

SCROLL FOR NEXT