ಹೆಚ್ ಡಿ ದೇವೇಗೌಡ 
ರಾಜ್ಯ

ನೈಸ್‌ ಯೋಜನೆ: ಡಿ.ಕೆ ಶಿವಕುಮಾರ್ ಆಕ್ಷೇಪ ಸ್ವಾಗತಾರ್ಹ; ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡೋಣ- ದೇವೇಗೌಡ

ಈ ಇಳಿ ವಯಸ್ಸಿನಲ್ಲಿ ನನ್ನನ್ನು ಪ್ರತಿವಾದಿಯಾಗಿಸಿ ಅರ್ಜಿ ಹಾಕಿರುವುದು ಎಷ್ಟು ಸರಿ ಎಂದು ನಾನು ಪ್ರಶ್ನಿಸಿದ್ದೆ. ಡಿ.ಕೆ ಶಿವಕುಮಾರ್ ಸಹ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆಯೇ ಎಂಬುದನ್ನು ನೋಡಬೇಕು ಎಂದಿದ್ದಾರೆ.

ಬೆಂಗಳೂರು: ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಹಾಕಿರುವ ನೈಸ್‌ ಕಂಪನಿಯ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಿಲುವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸ್ವಾಗತಿಸಿದ್ದಾರೆ. ‌

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಇಳಿ ವಯಸ್ಸಿನಲ್ಲಿ ನನ್ನನ್ನು ಪ್ರತಿವಾದಿಯಾಗಿಸಿ ಅರ್ಜಿ ಹಾಕಿರುವುದು ಎಷ್ಟು ಸರಿ ಎಂದು ನಾನು ಪ್ರಶ್ನಿಸಿದ್ದೆ. ಡಿ.ಕೆ.ಶಿಕುಮಾರ್ ಸಹ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಅವರು ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆಯೇ ಎಂಬುದನ್ನು ನೋಡಬೇಕು ಎಂದಿದ್ದಾರೆ.

ಈ ಯೋಜನೆ ಬಗ್ಗೆ ಮುಖ್ಯಮಂತ್ರಿ ಅವರಿಗೆ ಈ ಹಿಂದೆಯೇ ಪತ್ರ ಬರೆದಿದ್ದೆ. ಎಷ್ಟು ಭೂಮಿ ತೆಗೆದುಕೊಂಡಿದ್ದಾರೆ ಮತ್ತು ಎಷ್ಟು ಬಳಕೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಕೋರಿದ್ದೆ. ಈ ವಿಚಾರದಲ್ಲಿ ಅಶೋಕ್‌ ಖೇಣಿ ವಿರುದ್ಧ ಸರ್ಕಾರವು ಕ್ರಮ ತೆಗೆದುಕೊಂಡರೆ ಸಂತೋಷ ಎಂದು ಹೇಳಿದ್ದಾರೆ.

ಈ ಸಂಬಂಧ ಸ್ಪಷ್ಟನೆ ನೀಡಿರುವ ನೈಸ್ ಸಂಸ್ಥೆ, ‘ದೇವೇಗೌಡ ಅವರ ಹೇಳಿಕೆ ವಾಸ್ತವಕ್ಕೆ ವಿರುದ್ಧವಾಗಿದೆ. ನೈಸ್ ಸಂಸ್ಥೆಯು ಸರ್ಕಾರ ಹಾಗೂ ರೈತರ ವಿರುದ್ಧ ಯಾವುದೇ ಹೊಸ ಕ್ರಮ ತೆಗೆದುಕೊಂಡಿಲ್ಲ’ ಎಂದು ಹೇಳಿದೆ. ನ್ಯಾಯಾಲಯದ ನಿರ್ದೇಶನದ ಮೇಲೆಯೇ ಮುಂದಿನ ಹೆಜ್ಜೆ ಇಡಲಾಗುತ್ತಿದೆ ಎಂದು ತಿಳಿಸಿದೆ. ಬಳ್ಳಾರಿ ಗಲಾಟೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಹೆಚ್.ಡಿ ದೇವೇಗೌಡರು, ಈ ಬಗ್ಗೆ ನಾನು ಮಾತನಾಡಲ್ಲ ಹೆಚ್ ಡಿ ಕುಮಾರಸ್ವಾಮಿ 2 ಬಾರಿ ಸಿಎಂ ಆಗಿದ್ದಾಗ ಸಾಕಷ್ಟು ಕ್ರಮ ಕೈಗೊಂಡಿದ್ದರು. ಹೆಚ್.ಡಿ.ಕೆ ವಿರೋಧ ಪಕ್ಷದ ನಾಯಕನಾಗಿಯೂ ಹೋರಾಡಿದ್ದರು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಬಂಗಾಳದಲ್ಲಿ CAA, UCC ತ್ವರಿತ ಅನುಷ್ಠಾನ; ಮಾತುವಾ, ನಮಸುದ್ರರಿಗೆ ಪೌರತ್ವ ನೀಡುತ್ತೇವೆ: ಪ್ರಧಾನಿ ಮೋದಿ

ಚಲಿಸುತ್ತಿದ್ದ ಐಶಾರಾಮಿ ಕಾರಿನಲ್ಲೇ 'ದಮ್ ಮಾರೋ ದಮ್'; ಸಿಗರೇಟ್ ರಸ್ತೆಗೆಸೆದ Yuzvendra Chahal? Video Viral

ಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?

ಇಸ್ಲಾಮಾಬಾದ್‌ಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕ್‌ನ ಐದು ಎಫ್-16 ಎಸ್ಕಾರ್ಟ್; Video ನೋಡಿ

SCROLL FOR NEXT