ನ್ಯಾಯಾಲಯ (ಸಂಗ್ರಹ ಚಿತ್ರ) online desk
ರಾಜ್ಯ

ಲಂಚ ಪ್ರಕರಣ: ACP, ಇನ್ಸ್‌ಪೆಕ್ಟರ್'ಗೆ ಜಾಮೀನು ನಿರಾಕರಿಸಿದ ಲೋಕಾಯುಕ್ತ ಕೋರ್ಟ್‌

ಭ್ರಷ್ಟಾಚಾರ ಎಂಬುದು ಪೊಲೀಸ್ ಠಾಣೆಗಳಲ್ಲಿನ ಅಧಿಕೃತ ಕರ್ತವ್ಯಗಳ ಭಾಗವಾಗಿ ಹೋಗಿದೆ. ಈ ರೀತಿಯ ಸಾರ್ವಜನಿಕ ಸೇವೆ ಇನ್ನು ಮುಂದೆ ಅಗತ್ಯವಿಲ್ಲ.

ಬೆಂಗಳೂರು: ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯವು ಚಿಕ್ಕಜಲ ಪೊಲೀಸ್ ಠಾಣೆಯ ಪಿಎಸ್ಐ ಶಿವಣ್ಣ ಮತ್ತು ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಎಚ್.ವಿ. ಕೃಷ್ಣಮೂರ್ತಿ ಅವರ ಜಾಮೀನು ಅರ್ಜಿಗಳನ್ನು ನಿರಾಕರಿಸಿದೆ.

ಅಲ್ಪಾವಧಿಯಲ್ಲಿಯೇ ಸಿಕ್ಕಿಬಿದ್ದ ಪೊಲೀಸ್ ಠಾಣೆಯ ಐದನೇ ಅಧಿಕಾರಿ ಎಂಬುದು ದಾಖಲೆಗಳಿಂದ ತಿಳಿದುಬಂದಿದ್ದು, ಇದು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದರಿಂದ ನಾಗರಿಕರು ವ್ಯವಸ್ಥೆಯ ಮೇಲಿನ ಭರವಸೆ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನ್ಯಾಯಾಧೀಶ ಕೆ ಎಂ ರಾಧಾಕೃಷ್ಣ ಹೇಳಿದ್ದಾರೆ.

ಭ್ರಷ್ಟಾಚಾರ ಎಂಬುದು ಪೊಲೀಸ್ ಠಾಣೆಗಳಲ್ಲಿನ ಅಧಿಕೃತ ಕರ್ತವ್ಯಗಳ ಭಾಗವಾಗಿ ಹೋಗಿದೆ. ಈ ರೀತಿಯ ಸಾರ್ವಜನಿಕ ಸೇವೆ ಇನ್ನು ಮುಂದೆ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಪಿಎಸ್ಐ ಶಿವಣ್ಣ ಡಿಸೆಂಬರ್ 23, 2025 ರಂದು ದೂರುದಾರರಿಂದ ರೂ. 2 ಲಕ್ಷ ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿತರಾಗಿದ್ದಾರೆ. ‘ಬಿ’ ವರದಿ ದಾಖಲಿಸಲು ರೂ. 1 ಲಕ್ಷ ಮತ್ತು ರೌಡಿ ಶೀಟ್ ಮುಚ್ಚಲು ರೂ. 1 ಲಕ್ಷ ಪಡೆದಿದ್ದಾರೆ, ಈ ಹಣದಲ್ಲಿ 50,000 ತನ್ನ ಬಳಿ ಇಟ್ಟುಕೊಂಜು ಇನ್ಸ್‌ಪೆಕ್ಟರ್‌ಗೆ 1.50 ಲಕ್ಷ ನೀಡಿದ್ದಾರೆಂಬುದು ದಾಖಲೆಯಿಂದ ತಿಳಿದುಬಂದಿದೆ.

ಮತ್ತೊಂದು ಪ್ರಕರಣದಲ್ಲಿ ನಗರದ ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಎಚ್.ವಿ. ಕೃಷ್ಣ ಮೂರ್ತಿ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಡಿಸೆಂಬರ್ 24 ರಂದು ದೂರುದಾರ-ಹೋಟೆಲಿಯರ್‌ನಿಂದ 30,000 ರೂ.ಗಳನ್ನು ಸ್ವೀಕರಿಸಿದ ನಂತರ ಲೋಕಾಯುಕ್ತ ಪೊಲೀಸರು ಕೃಷ್ಣ ಮೂರ್ತಿ ಅವರನ್ನು ಬಂಧಿಸಿದ್ದರು. ಸಮಯ ಮಿತಿಯನ್ನು ಮೀರಿ ವ್ಯವಹಾರ ನಡೆಸಲು ಅವಕಾಶ ನೀಡಲು 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.

ಆದರೆ. ವಿಚಾರಣೆ ವೇಳೆ ಅಧಿಕಾರಿ ತಾನು ಲಂಚ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಆದರೆ, ಸಾಕ್ಷಿಗಳ ಆಧಾರದ ಮೇಲೆ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bangladesh: ಹಿಂದೂ ಪತ್ರಕರ್ತನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

ಬಾಂಗ್ಲಾದೇಶದಲ್ಲಿ ಮತ್ತೊಂದು ಕ್ರೌರ್ಯ: ಹಿಂದೂ ವಿಧವೆ ಮೇಲೆ ಗ್ಯಾಂಗ್ ರೇಪ್, ಮರಕ್ಕೆ ಕಟ್ಟಿ ಕೂದಲಿಗೆ ಕತ್ತರಿ! Video

ಕೋಲ್ಕತ್ತಾದಲ್ಲಿ SIR:ವಿಚಾರಣೆಗೆ ಹಾಜರಾಗುವಂತೆ ಭಾರತದ ಸ್ಟಾರ್ ಕ್ರಿಕೆಟಿಗ Mohammed Shamiಗೆ ಸಮನ್ಸ್

KSRTC ಪ್ರಯಾಣಿಕರಿಗೆ ಸಿಹಿಸುದ್ದಿ, ಶೇ.5 ರಿಂದ 15ರಷ್ಟು ಟಿಕೆಟ್ ದರ ರಿಯಾಯಿತಿ!

ಪುಟ್ಟಪರ್ತಿ ಸಾಯಿಬಾಬಾ ಪರಮ ಭಕ್ತರಾಗಿದ್ದ ವೆನೆಜುವೆಲಾ ಮಾಜಿ ಅಧ್ಯಕ್ಷ Nicolas Maduro, ಹಳೆ ಫೋಟೋಗಳು ವೈರಲ್!

SCROLL FOR NEXT