ಗೃಹ ಸಚಿವ ಜಿ ಪರಮೇಶ್ವರ 
ರಾಜ್ಯ

ಬಳ್ಳಾರಿ ಗುಂಡಿನ ದಾಳಿ ಪ್ರಕರಣವನ್ನು ಸಿಐಡಿ/ಎಸ್‌ಐಟಿಗೆ ವಹಿಸಲು ಚಿಂತನೆ: ಗೃಹ ಸಚಿವ ಜಿ ಪರಮೇಶ್ವರ

ಆರಂಭದಲ್ಲಿ ಯಾವುದೇ ಗದ್ದಲ ಇರಲಿಲ್ಲ. ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುವವರೆಗೂ ಯಾವುದೇ ಗದ್ದಲ ಇರಲಿಲ್ಲ. ನಾವು ಅದನ್ನೂ ತನಿಖೆ ಮಾಡುತ್ತೇವೆ ಎಂದರು.

ಬೆಂಗಳೂರು: ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾದ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಭಾನುವಾರ ತಿಳಿಸಿದ್ದಾರೆ.

ಜನವರಿ 1 ರಂದು ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಬಿಜೆಪಿ ಶಾಸಕ ಜಿ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ಬ್ಯಾನರ್ ಅಳವಡಿಸುವ ವಿಚಾರವಾಗಿ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿ ಘರ್ಷಣೆ ಭುಗಿಲೆದ್ದಿತ್ತು. ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಗನ್ ಮ್ಯಾನ್ ನಡೆಸಿದ ಫೈರಿಂಗ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವಿಗೀಡಾಗಿದ್ದಾರೆ.

ಈ ಘಟನೆಯಲ್ಲಿ ಗುಂಡು ಹಾರಿಸಲಾಗಿದ್ದು, ಖಾಸಗಿ ವ್ಯಕ್ತಿಗಳ ಬಂದೂಕುಗಳ ಬಳಕೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

'ನಾನು ಇದನ್ನೇ ಮೊದಲು ಹೇಳಿದ್ದೆ, ಭದ್ರತೆಗಾಗಿ ನೇಮಿಸಿಕೊಂಡಿದ್ದ ಖಾಸಗಿ ಗನ್‌ಮ್ಯಾನ್‌ಗಳ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಬ್ಯಾಲಿಸ್ಟಿಕ್ ತಜ್ಞರ ವರದಿಯು ಯಾವ ಬಂದೂಕಿನಿಂದ ಗುಂಡು ಹಾರಿಸಲಾಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ತನಿಖಾ ವರದಿಯನ್ನು ನೀಡುವಂತೆ ನಾನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳಿಗೆ ಹೇಳಿದ್ದೇನೆ. ಪ್ರಕ್ರಿಯೆ ನಡೆಯುತ್ತಿದೆ. ಪೊಲೀಸ್ ಬಂದೂಕಿನಿಂದ ಗುಂಡು ಹಾರಿಲ್ಲ ಎಂದು ಎಡಿಜಿಪಿ ನನಗೆ ಹೇಳಿದ್ದರು' ಎಂದು ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದರು.

ಈ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಅಥವಾ ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ಹಸ್ತಾಂತರಿಸಲಾಗುತ್ತದೆಯೇ ಎಂದು ಕೇಳಿದಾಗ, ಆ ಆಯ್ಕೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವರು ಹೇಳಿದರು.

'ನಾವು ಕೂಡ ಇದರ ಬಗ್ಗೆ ಯೋಚಿಸುತ್ತಿದ್ದೇವೆ. ಈ ವಿಷಯವನ್ನು ಸಿಐಡಿಗೆ ವಹಿಸುವ ಸಾಧ್ಯತೆಗಳಿವೆ. ನಾನು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತೇನೆ. ಅಗತ್ಯವಿದ್ದರೆ ನಾವು ತನಿಖೆಯನ್ನು ವರ್ಗಾಯಿಸುತ್ತೇವೆ' ಎಂದು ಅವರು ಹೇಳಿದರು.

ಬಳ್ಳಾರಿಗೆ ಯಾತ್ರೆ ನಡೆಸುವ ಬಗ್ಗೆ ಬಿಜೆಪಿಯ ಘೋಷಣೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, 'ಯಾತ್ರೆ ನಡೆಸುವುದು ದೊಡ್ಡ ವಿಷಯವಲ್ಲ. ಆದರೆ, ಕ್ರಮ ಕೈಗೊಳ್ಳುವುದು ಮುಖ್ಯ, ಅದನ್ನು ಪೊಲೀಸರು ಮಾಡುತ್ತಾರೆ' ಎಂದು ಹೇಳಿದರು.

'ಖಾಸಗಿ ಗನ್‌ಮ್ಯಾನ್‌ಗಳು ಇದರಲ್ಲಿ ಭಾಗಿಯಾಗಿದ್ದಾರೆಂದು ತಿಳಿದುಬಂದರೆ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಎರಡೂ ಕಡೆಯಿಂದ ನಮಗೆ ದೂರುಗಳು ಬಂದಿವೆ. ಬಂದೂಕು ಅಥವಾ ಹ್ಯಾಂಡ್ ಗ್ರೆನೇಡ್‌ಗಳನ್ನು ಬಳಸಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಾರೆ' ಎಂದು ಅವರು ಹೇಳಿದರು.

ಆರಂಭದಲ್ಲಿ ಯಾವುದೇ ಗದ್ದಲ ಇರಲಿಲ್ಲ. ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುವವರೆಗೂ ಯಾವುದೇ ಗದ್ದಲ ಇರಲಿಲ್ಲ. ನಾವು ಅದನ್ನೂ ತನಿಖೆ ಮಾಡುತ್ತೇವೆ ಎಂದರು.

ಈಮಧ್ಯೆ, ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಖಾಸಗಿ ಗನ್‌ಮ್ಯಾನ್ ಬಲ್ಜಿತ್ ಸಿಂಗ್ ಮತ್ತು ಗುರುಚರಣ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bangladesh Unrest: ಬಾಂಗ್ಲಾದಲ್ಲಿ ಮುಂದುವರಿದ ಹಿಂದುಗಳ ನರಮೇಧ, 24 ಗಂಟೆಗಳಲ್ಲಿ ಇಬ್ಬರ ಹತ್ಯೆ

ಟ್ರಂಪ್ ಹೇಳಿಕೆಯ 'ಆಡಿಯೋ ಕ್ಲಿಪ್': ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ!

ಇರಾನ್‌ನಲ್ಲಿ ಆರ್ಥಿಕ ಪ್ರತಿಭಟನೆ: ಕನಿಷ್ಠ 35 ಮಂದಿ ಸಾವು, 1,200 ಜನರ ಬಂಧನ

ತಾಯಿಗೆ ಬಿಗ್ 'ಸರ್ಪ್ರೈಸ್ ಗಿಫ್ಟ್' ನೀಡಿದ 17 ವರ್ಷದ ಮಗ! ಇಮೋಷನಲ್ Video ವೈರಲ್! ನೆಟ್ಟಿಗರು ಫಿದಾ

ಹಿಂದುಳಿದ ಸಮುದಾಯಗಳ ಹರಿಕಾರ: ಅರಸು ದಾಖಲೆ ಮುರಿದ ವೀರ; ಕಾಂಗ್ರೆಸ್ ಗೆ ಸಮಾಜವಾದಿ ಸ್ಪರ್ಶ ಕೊಟ್ಟ ಸಿದ್ದರಾಮಯ್ಯ!

SCROLL FOR NEXT