ಕೇಂದ್ರ ಸಚಿವ ವಿ. ಸೋಮಣ್ಣ 
ರಾಜ್ಯ

ಬಳ್ಳಾರಿ ಫೈರಿಂಗ್: CID ಬೇಡ, ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಲಿ- ಕೇಂದ್ರ ಸಚಿವ ವಿ. ಸೋಮಣ್ಣ ಒತ್ತಾಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ದೇವರಾಜ ಅರಸು ಅವರ ಆಡಳಿತ ಅವಧಿಯನ್ನು ಮೀರಿಸುತ್ತಿದ್ದೀರಿ ಇಂತಹ ದಿನಗಳಲ್ಲಿ ಈ ಘಟನೆಯಿಂದ ನಿಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿಕೊಳ್ಳಬೇಡಿ ಎಂದು ಸಲಹೆಯನ್ನು ಸೋಮಣ್ಣ ನೀಡಿದರು.

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸ ಮುಂದೆ ಜ. 1ರಂದು ರಾತ್ರಿ ನಡೆದಿದ್ದ ಗುಂಡಿನ ದಾಳಿ ಹಾಗೂ ಕಾಂಗ್ರೆಸ್ ನ ಓರ್ವ ಕಾರ್ಯಕರ್ತ ಸಾವನ್ನಪ್ಪಿದ ಪ್ರಕರಣ ಕುರಿತು ಹಾಲಿ ಹೈ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು‌ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯನ್ನು ಸಿಐಡಿ ತನಿಖೆಗೆ ನೀಡುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಇದು ಸರಿಯಲ್ಲ. ನೀವು ನ್ಯಾಯಾಧೀಶರಿಂದ ತನಿಖೆ ಮಾಡಿಸದೇ ಇದ್ದರೆ ಸಿಬಿಐಗೆ ನೀಡಿ, ಇಲ್ಲದಿದ್ದರೆ ಬಳ್ಳಾರಿಯಿಂದಲೇ ಅಧಿಕಾರಕ್ಕೆ ಬಂದ ನಿಮಗೆ ನಿಮ್ಮ ಆಡಳಿತಕ್ಕೆ ಕೆಟ್ಟ ಹೆಸರು ಬರಲಿದೆ ಎಂದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ, ನೀವು ದೇವರಾಜ ಅರಸು ಅವರ ಆಡಳಿತ ಅವಧಿಯನ್ನು ಮೀರಿಸುತ್ತಿದ್ದೀರಿ ಇಂತಹ ದಿನಗಳಲ್ಲಿ ಈ ಘಟನೆಯಿಂದ ನಿಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ನೀವೇ ದ್ವೇಷ ಭಾಷಣ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೀರಿ. ಜನಾರ್ಧನ ರೆಡ್ಡಿ ಮನೆ ಸುಟ್ಟು ಹಾಕುವೆ ಎಂದು ಹೇಳಿರುವ ಶಾಸಕ ಭರತ್ ರೆಡ್ಡಿ ಅವರ ಮೇಲೆ ಕ್ರಮ ಜರುಗಿಸಬೇಕು. ಭರತ್ ರೆಡ್ಡಿ ಮೊದಲ ಬಾರಿಗೆ ಶಾಸಕನಾಗಿದ್ದಾನೆ. ಆತನಿಗೆ ಇನ್ನೂ ರಾಜಕೀಯ ನಡವಳಿಕೆ ತಿಳಿದಂತೆ ಇಲ್ಲ. ಬೇಕಿದ್ದರೆ ನನ್ನ ಬಳಿ ಆರು ತಿಂಗಳು ಬಂದರೆ ತರಬೇತಿ ನೀಡುವೆ. ಭರತ್ ರೆಡ್ಡಿ ಯಾವ ಶಾಲೆಯಲ್ಲಿ ಓದಿದ್ದಾನೋ ಗೊತ್ತಿಲ್ಲ ಆತನ ಮಾತುಗಳಲ್ಲಿ ಸಂಯವ ಇಲ್ಲ. ದ್ವೇಷದ ಮಾತುಗಳು ಬರುವುದು ಸರಿಯಲ್ಲ ಎಂದರು.

ಇನ್ನೂ ಜನಾರ್ಧನರೆಡ್ಡಿ ಅವರು ಝಡ್ ಪ್ಲಸ್ ಭದ್ರತೆ ಕುರಿತ ಪ್ರತಿಕ್ರಿಯಿಸಿದ ಸೋಮಣ್ಣ, ಈ ಕುರಿ ಕೇಂದ್ರದ ಗೃಹ ಸಚಿವರ ಬಳಿ ಮಾತನಾಡುವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bangladesh: ಹಿಂದೂ ಪತ್ರಕರ್ತನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

ಬಾಂಗ್ಲಾದೇಶದಲ್ಲಿ ಮತ್ತೊಂದು ಕ್ರೌರ್ಯ: ಹಿಂದೂ ವಿಧವೆ ಮೇಲೆ ಗ್ಯಾಂಗ್ ರೇಪ್, ಮರಕ್ಕೆ ಕಟ್ಟಿ ಕೂದಲಿಗೆ ಕತ್ತರಿ! Video

ಕೋಲ್ಕತ್ತಾದಲ್ಲಿ SIR:ವಿಚಾರಣೆಗೆ ಹಾಜರಾಗುವಂತೆ ಭಾರತದ ಸ್ಟಾರ್ ಕ್ರಿಕೆಟಿಗ Mohammed Shamiಗೆ ಸಮನ್ಸ್

KSRTC ಪ್ರಯಾಣಿಕರಿಗೆ ಸಿಹಿಸುದ್ದಿ, ಶೇ.5 ರಿಂದ 15ರಷ್ಟು ಟಿಕೆಟ್ ದರ ರಿಯಾಯಿತಿ!

ಪುಟ್ಟಪರ್ತಿ ಸಾಯಿಬಾಬಾ ಪರಮ ಭಕ್ತರಾಗಿದ್ದ ವೆನೆಜುವೆಲಾ ಮಾಜಿ ಅಧ್ಯಕ್ಷ Nicolas Maduro, ಹಳೆ ಫೋಟೋಗಳು ವೈರಲ್!

SCROLL FOR NEXT