ಮೆಟ್ರೊ 
ರಾಜ್ಯ

ಮೆಟ್ರೊ ಪ್ರಯಾಣಿಕರಿಗೆ ಗುಡ್ ನ್ಯೂಸ್: 2026ರಲ್ಲಿ ಹೊಸ ಮಾರ್ಗಗಳಲ್ಲಿ ಸಂಚಾರ ಆರಂಭ

ಮೇ ತಿಂಗಳಿನಲ್ಲಿ ಪಿಂಕ್ ಲೈನ್ ಮೊದಲ ಹಂತ ಆರಂಭವಾದರೆ, ಡಿಸೆಂಬರ್​​ ವೇಳೆಗೆ ಬ್ಲೂ ಲೈನ್ ಮೊದಲ ಹಂತವೂ ಕಾರ್ಯಾಚರಣೆ ಆರಂಭಿಸಲಿದೆ.

ಬೆಂಗಳೂರು: ವಾಹನ ದಟ್ಟಣೆ ಸಮಸ್ಯೆಗೆ ಸಿಲುಕಿರುವ ಸಿಲಿಕಾನ್​ ಸಿಟಿ ಬೆಂಗಳೂರು ಮಂದಿಗೆ ನಮ್ಮ ಮೆಟ್ರೋ ಗುಡ್​​ನ್ಯೂಸ್​​ ಕೊಟ್ಟಿದ್ದು, ಎರಡು ಹೊಸ ಮಾರ್ಗಗಗಳು ಈ ವರ್ಷದಿಂದಲೇ ಕಾರ್ಯಾರಂಭ ಮಾಡಲಿವೆ. ಈಗಾಗಲೇ ಸೇವೆ ಒದಗಿಸುತ್ತಿರುವ ಗ್ರೀನ್, ಪರ್ಪಲ್ ಮತ್ತು ಯಲ್ಲೋ ಮಾರ್ಗಗಳ ಜೊತೆ ಮತ್ತೆರಡು ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ.

ಹೊಸ ಮಾರ್ಗಗಳು

2026ರ ಅಂತ್ಯದ ಒಳಗೆ ಪಿಂಕ್​ ಮತ್ತು ಬ್ಲೂ ಲೈನ್​​ಗಳಲ್ಲಿ ಮೆಟ್ರೋ ರೈಲುಗಳು ವಾಣಿಜ್ಯ ಸಂಚಾರ ನಡೆಸಲಿವೆ. ಮೇ ತಿಂಗಳಿನಲ್ಲಿ ಪಿಂಕ್ ಲೈನ್ ಮೊದಲ ಹಂತ ಆರಂಭವಾದರೆ, ಡಿಸೆಂಬರ್​​ ವೇಳೆಗೆ ಬ್ಲೂ ಲೈನ್ ಮೊದಲ ಹಂತವೂ ಕಾರ್ಯಾಚರಣೆ ಆರಂಭಿಸಲಿದೆ.

ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಪಿಂಕ್ ಲೈನ್​​ 21.25 ಕಿ.ಮೀ. ವಿಸ್ತೀರ್ಣವಿದ್ದು, ಆ ಪೈಕಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ.ಯ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್​​ಗಳು ಮೇನಲ್ಲಿ ಆರಂಭವಾಗಲಿದೆ. ನವೆಂಬರ್​​ನಲ್ಲಿ ತಾವರೆಕೆರೆಯಿಂದ ನಾಗವಾರ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್​​ಗಳ ಕಾರ್ಯಾಚರಣೆ ಆರಂಭವಾಗಲಿದೆ. ಪಿಂಕ್ ಲೈನ್​​ಗಾಗಿ ಈಗಾಗಲೇ BEMLನಿಂದ ಒಂದು ಚಾಲಕರಹಿತ ರೈಲು ಆರಂಭವಾಗಲಿದೆ.

ಬ್ಲೂ ಲೈನ್​​ನ ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರಂ ಮಾರ್ಗ ಈ ವರ್ಷ ಡಿಸೆಂಬರ್​​ ವೇಳೆಗೆ ಓಪನ್ ಆಗಲಿದೆ. ಇದು 17.75 ಕಿ.ಮೀ. ಮಾರ್ಗದಲ್ಲಿ, 13 ಸ್ಟೇಷನ್​​ಗಳಿವೆ. ಬ್ಲೂ ಮಾರ್ಗವು ಒಟ್ಟು 58.19 ಕಿ.ಮೀ. ವಿಸ್ತೀರ್ಣವಿದ್ದು, ಮೊದಲ ಹಂತ 2026ರ ವರ್ಷಾಂತ್ಯದ ವೇಳೆಗೆ ಕಾರ್ಯಾರಂಭವಾದರೆ, 2027ರಲ್ಲಿ ಎರಡನೇ ಹಂತ ಓಪನ್​​ ಆಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್

ದೀದಿಗೆ ಮತ್ತೊಂದು ಶಾಕ್; ಮಮತಾ ನೇತೃತ್ವದ TMC ಬಣದ 12 ಬ್ಯಾಂಕ್ ಖಾತೆ ಫ್ರೀಜ್ ಮಾಡಿದ ಪೋಲೀಸರು!

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ ಚೌಧರಿ