ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಶಾಲೆಯಲ್ಲಿ 'ಸೀಟ್ ಬ್ಲಾಕಿಂಗ್': 26,000 ರೂ ವಂಚನೆ ಆರೋಪ; FIR ದಾಖಲು

ಶಾಲೆಗೆ ಕಟ್ಟಡ ನಿರ್ಮಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿಲ್ಲ ಎಂಬುದು ಕೆಲ ದಿನಗಳ ಬಳಿಕ ಗೊತ್ತಾಯಿತು ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು: ಆನೇಕಲ್ ತಾಲೂಕಿನ ಗುಂಜೂರು ರಸ್ತೆಯಲ್ಲಿರುವ ಯುರೋ ಸ್ಕೂಲ್ ಗೆ ಮಗಳನ್ನು ಸೇರಿಸಲು ಯತ್ನಿಸಿದ ಪೋಷಕರು ಸೀಟು ಬ್ಲಾಕಿಂಗ್ ಮಾಡಲು 26,000 ರೂ. ಪಾವತಿಸಿದ ನಂತರ ಶಾಲಾ ಆಡಳಿತ ಮಂಡಳಿಯಿಂದ ವಂಚಿಸಿರುವುದಾಗಿ ಆರೋಪಿಸಿದ್ದಾರೆ.

ಶಾಲೆಗೆ ಕಟ್ಟಡ ನಿರ್ಮಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿಲ್ಲ ಎಂಬುದು ಕೆಲ ದಿನಗಳ ಬಳಿಕ ಗೊತ್ತಾಯಿತು ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ಪೋಷಕರು ಯುರೋ ಸ್ಕೂಲ್ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕ್ಯಾಂಪಸ್ ನಿರ್ಮಾಣ ಹಂತದಲ್ಲಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿಕೊಂಡು ವಂಚನೆ ಮಾಡಿರುವುದಾಗಿ ಅವರು ಆರೋಪಿಸಿದ್ದಾರೆ.

ಈ ಕುರಿತು TNIE ಜೊತೆಗೆ ಮಾತನಾಡಿದ ದೂರುದಾರ ಮಹಿಳೆ ಪಿ. ಇಂದು, "ಯುರೋ ಸ್ಕೂಲ್ ಪ್ರಸಿದ್ಧ ಬ್ರಾಂಡ್ ಆಗಿರುವುದಾಗಿ ನಂಬಿಕೆ ಇಟ್ಟಿದ್ದೇವು. ಹಾಗಾಗೀ ಅದರ ಹಿನ್ನೆಲೆ ವಿಚಾರಿಸಲಿಲ್ಲ. ನಮ್ಮ ಮಗಳಿಗಾಗಿ ಸೀಟ್ ಬ್ಲಾಕಿಂಗ್ ಮಾಡಿದ್ದೇವು. ನನ್ನ ಮಗು 2 ನೇ ತರಗತಿಯಲ್ಲಿದ್ದು, 2025 ರ ನವೆಂಬರ್‌ನಲ್ಲಿ 26,000 ರೂ. ಪಾವತಿಸಿದ್ದೇವೆ. ಆದರೆ, ಇದುವರೆಗೆ ಶಾಲಾ ಆಡಳಿತ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಅಧಿಕಾರಿಗಳಿಂದ ತಿಳಿದು ಬಂದಿದೆ ಎಂದರು.

ಕುಟುಂಬ ಈಗ ಮತ್ತೊಂದು ಶಾಲೆಗಾಗಿ ಹುಡುಕಾಟ ನಡೆಸುತ್ತಿದೆ. ಈ ಹಂತದಲ್ಲಿ ಮತ್ತೊಂದು ಶಾಲೆ ಹುಡುಕುವುದು ಕಷ್ಟ. ಏಕೆಂದರೆ ಹೆಚ್ಚಿನ ಸೀಟುಗಳು ಈಗಾಗಲೇ ಭರ್ತಿಯಾಗಿರುತ್ತವೆ" ಎಂದು ಅವರು ಹೇಳಿದರು.

ಈ ಸಂಬಂಧ ಶಾಲಾ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರಾದ ಅರುಣಿಕಾ ಸಾಹ್ನಿ ಅವರ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ, 1983 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318 ರ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಿಇಒ ಪ್ರತಿಕ್ರಿಯೆಗೆ ಸಿಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

'ದೇಶದ ಘನತೆಗೆ ಮಾಡಿದ ಭೀಕರ ದ್ರೋಹ': ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಜಡ್ಜ್‌ಗಳು ಸೇರಿ 270 ನಿವೃತ್ತ ಅಧಿಕಾರಿಗಳ ಖಂಡನೆ!

T20 World Cup 2026: ಬ್ರೂಕ್ ಭರ್ಜರಿ ಶತಕ; ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್​

ಪ್ರಧಾನಿ ಮೋದಿ ಇಸ್ರೇಲ್ ಭೇಟಿಗೂ: ಇಸ್ಲಾಮಿಕ್ ಉಗ್ರವಾದದ ವಿರುದ್ಧ ಷಡ್ಭುಜ ಕೂಟ ಘೋಷಿಸಿದ ನೆತನ್ಯಾಹು!

ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿಕೆ ಶಶಿಕಲಾರಿಂದ ಹೊಸ ಪಕ್ಷ ಸ್ಥಾಪನೆ; ರಾಮನಾಥಪುರಂನಲ್ಲಿ ಧ್ವಜ ಅನಾವರಣ

SCROLL FOR NEXT