ಮೊಹಮ್ಮದ್ ಶಬ್ಬೀರ್ 
ರಾಜ್ಯ

ಬೆಂಗಳೂರು: ಖಾರದ ಪುಡಿ ಎರಚಿ ರೌಡಿಶೀಟರ್ ಮೊಹಮ್ಮದ್ ಶಬ್ಬೀರ್ ಭೀಕರ ಹತ್ಯೆ

ಹಳೇ ದ್ವೇಷದ ಹಿನ್ನೆಲೆ ನಟೋರಿಯಸ್ ರೌಡಿ ಶೀಟರ್​​ ಒಬ್ಬನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆ ನಟೋರಿಯಸ್ ರೌಡಿ ಶೀಟರ್​​ ಒಬ್ಬನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಂಗಮ್ಮನಪಾಳ್ಯ ನಿವಾಸಿ 28 ವರ್ಷದ ಮೊಹಮ್ಮದ್ ಶಬ್ಬೀರ್ ಎಂಬಾತನನ್ನು 6 ಜನ ದುಷ್ಕರ್ಮಿಗಳ ತಂಡ ನಡು ರಸ್ತೆಯಲ್ಲಿಯೇ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದೆ. ಸೋಮವಾರ ರಾತ್ರಿ ತಮ್ಮ ಸ್ನೇಹಿತನನ್ನ ಮಾತಾಡಿಸಿ ಮೊಹಮ್ಮದ್ ಶಬ್ಬೀರ್ ಸ್ನೇಹಿತರ ಜೊತೆ ಆಟೋದಲ್ಲಿ ವಾಪಸ್ ಆಗುತ್ತಿದ್ದನು. ಈ ವೇಳೆ ಮಂಗಮ್ಮನಪಾಳ್ಯ ಮುಖ್ಯ ರಸ್ತೆಯ ತಿರುವಿನಲ್ಲಿ ಆರು ಮಂದಿ ದುಷ್ಕರ್ಮಿಗಳು ಖಾರದ ಪುಡಿ ಏಕಾಏಕಿ ಎರಚಿ ಮಚ್ಚು, ಲಾಂಗ್ ನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶಬ್ಬೀರ್ ಸ್ಥಳದಲ್ಲೇ ಮೃತಪಟ್ಟಿದ್ದರೆ ಉಳಿದ ಐವರಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿ, ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್; ನಾಳೆಯೇ ಪ್ರಮಾಣವಚನ ಸಾಧ್ಯತೆ

IPL 2026: ಶಾಸಕರ ಟಿಕೆಟ್ ದಾಹಕ್ಕೆ ಫೈನಲ್ ಪಂದ್ಯ ಬೆಂಗಳೂರಿನಿಂದ ಅಹಮದಾಬಾದ್‌ಗೆ ಶಿಫ್ಟ್; ಡಿಕೆಶಿ ಹೇಳಿದ್ದೇನು?

ತಮಿಳುನಾಡು ಚುನಾವಣೆಗೆ ಮೊದಲೇ TVK ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಕಾಂಗ್ರೆಸ್ ಯೋಚಿಸಿತ್ತು: ಕಾರ್ತಿ ಚಿದಂಬರಂ

ಭಾರತ- ವಿಯೆಟ್ನಾಂ ನಡುವೆ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಒಪ್ಪಂದ!

ಪಂಜಾಬ್​ನಲ್ಲಿ ಅವಳಿ ಸ್ಫೋಟದ ಬೆನ್ನಲ್ಲೇ ಕಚ್ ಕರಾವಳಿಯಲ್ಲಿ ಶಂಕಿತ ಪಾಕ್ ದೋಣಿ ಪತ್ತೆ!

SCROLL FOR NEXT