ನಮ್ಮ ಮೆಟ್ರೋ ಸಾಂದರ್ಭಿಕ ಚಿತ್ರ 
ರಾಜ್ಯ

ನಮ್ಮ ಮೆಟ್ರೋ: ದೈನಂದಿನ ಪಾಸ್ 'ಬೇಡ್ವೆ ಬೇಡ', ಮಾಸಿಕ ಪಾಸ್' ಬೇಕು; ಹೆಚ್ಚಾದ ಬೇಡಿಕೆ!

ಸ್ಮಾರ್ಟ್ ಕಾರ್ಡ್ ಗಳಿಗಾಗಿ 50 ರೂ. ಭದ್ರತಾ ಠೇವಣಿ ಪಾವತಿ ಅಗತ್ಯವಿಲ್ಲದೆ ಅನಿಯಮಿತವಾಗಿ ಸಂಚರಿಸುವ ದಿನದ ಪಾಸ್ ಗಳನ್ನು ಜನವರಿ 15 ರಿಂದ BMRCL ಜಾರಿಗೊಳಿಸಿದೆ.

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಅನಿಯಮಿತವಾಗಿ ಪ್ರಯಾಣಿಸುವವರಿಗೆ ಮೊಬೈಲ್ ಕ್ಯೂರ್ ಆಧಾರಿತ 1,3 ಮತ್ತು ಐದು ದಿನಗಳ ಪ್ರಯಾಣದ ಪಾಸ್ ನ್ನು ಬಿಎಂಆರ್ ಸಿಎಲ್ ಪರಿಚಯಿಸಿದ್ದು, ಇದರ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.ಇಂತಹ ಕಿರು ಅವಧಿಯ ಪಾಸ್ ನೀಡುವುದರ ಬದಲು ರಿಯಾಯಿತಿ ದರದಲ್ಲಿ ತಿಂಗಳ ಪಾಸ್ ಅಗತ್ಯವಿದೆ ಎಂದು ಅನೇಕ ಮಂದಿ ಹೇಳಿದ್ದಾರೆ.

ಸ್ಮಾರ್ಟ್ ಕಾರ್ಡ್ ಗಳಿಗಾಗಿ 50 ರೂ. ಭದ್ರತಾ ಠೇವಣಿ ಪಾವತಿ ಅಗತ್ಯವಿಲ್ಲದೆ ಅನಿಯಮಿತವಾಗಿ ಸಂಚರಿಸುವ ದಿನದ ಪಾಸ್ ಗಳನ್ನು ಜನವರಿ 15 ರಿಂದ BMRCL ಜಾರಿಗೊಳಿಸಿದೆ. 1 ದಿನದ ಪಾಸ್ ರೂ. 250, ಮೂರು ದಿನದ ಪಾಸ್ ರೂ. 550 ಹಾಗೂ 5 ದಿನದ ಪಾಸ್ ಗೆ 850 ರೂ.ನಿಗದಿಪಡಿಸಲಾಗಿದೆ.

ಈ ಕ್ರಮವು ಸಂಪರ್ಕ ರಹಿತ ಮತ್ತು ಪೇಪರ್‌ ಲೆಸ್ ಪ್ರಯಾಣಕ್ಕೆ ಅನುಕೂಲವಾಗಿದ್ದು, ನಿಯಮಿತ ಕಚೇರಿಗೆ ಹೋಗುವವರಿಗೆ ಸ್ವಲ್ಪ ಮಟ್ಟಿಗೆ ದೈನಂದಿನ ಖರ್ಚುಗಳನ್ನು ಕಡಿಮೆ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ.

250 ಅಥವಾ 300 ರೂ. ದರದ ದೈನಂದಿನ ಪಾಸ್ ಗಳಿಂದ ದಿನನಿತ್ಯ ಓಡಾಡುವ ಪ್ರಯಾಣಿಕರಿಗೆ ಅನುಕೂಲವಾಗುವುದಿಲ್ಲ. ಮೆಟ್ರೋ ಹಾಗೂ ಬಸ್ ಗಳಲ್ಲಿ ಓಡಾಡುವಂತಹ ಪಾಸ್ ಗಳು ಬೆಂಗಳೂರಿಗರಿಗೆ ಅಗತ್ಯವಾಗಿದೆ ಎಂದು ಮೆಟ್ರೋದಲ್ಲಿ ಆಗಾಗ್ಗೆ ಓಡಾಡುವ ಪ್ರಯಾಣಿಕ ಎಸ್. ಪ್ರಭಾಕರನ್ ಹೇಳಿದರು.

ಎರಡು-ಮಾರ್ಗದ ಮೆಟ್ರೋ ಪ್ರಯಾಣಕ್ಕಾಗಿ ರೂ 100 ಕ್ಕಿಂತ ಹೆಚ್ಚು ಖರ್ಚು ಮಾಡಿದ್ದರೆ ಬಸ್, ಅಥವಾ ಪಾರ್ಕಿಂಗ್ ಗಾಗಿ ಮತ್ತೆ ಖರ್ಚು ಮಾಡಬೇಕಾಗುತ್ತದೆ. ಇದರಿಂದ ತಿಂಗಳ ವೆಚ್ಚ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಮತ್ತೊಬ್ಬ ಪ್ರಯಾಣಿಕರಾದ ಕಲಾಯ್ ಕೂಡಾ ಇದೇ ರೀತಿಯ ಮಾತುಗಳನ್ನಾಡಿದರು. ಪ್ರವಾಸಿಗರು ಅಥವಾ ನಗರಾದ್ಯಂತ ಟ್ರಿಪ್ ಮಾಡುವವರಿಗೆ ಮಾತ್ರ ದೈನಂದಿನ ಪಾಸ್ ಗಳು ಅನುಕೂಲವಾಗುತ್ತವೆ. ಕೆಲಸಕ್ಕೆ ಹೋಗುವ ಬಹುತೇಕ ಮಂದಿ ಕೆಲಸ ಬಿಟ್ಟರೆ ಮನೆಗೆ ಬರುತ್ತಾರೆ. ಅವರಿಗೆ ದಿನಕ್ಕೆ ರೂ. 250 ಕೊಟ್ಟು ಪಾಸ್ ಖರೀದಿಸುದು ತುಂಬಾ ದುಬಾರಿಯಾಗಿದೆ. ಅದರ ಬದಲು ಮಾಸಿಕ ಪಾಸ್ ನೀಡಿದರೆ ತುಂಬಾ ಅನುಕೂಲವಾಗಲಿದೆ ಎಂದರು. ಮಾಸಿಕ ಪಾಸ್ ಪರಿಚಯಿಸುವುದರಿಂದ ಪ್ರಯಾಣಿಕರ ಸ್ನೇಹಿಯಾಗಿರುತ್ತದೆ ಎಂದು ಮತ್ತೋರ್ವ ಪ್ರಯಾಣಿಕ ಶೇಖರನ್ ಹೇಳಿದರು.

ಮೆಟ್ರೋ ಸ್ಕೈವಾಕ್ ಉದ್ಘಾಟನೆ: ಇಂಟರ್‌ನ್ಯಾಷನಲ್ ಟೆಕ್ ಪಾರ್ಕ್ ಬೆಂಗಳೂರು (ಐಟಿಪಿಬಿ) ಶುಕ್ರವಾರ ವೈಟ್‌ಫೀಲ್ಡ್‌ನಲ್ಲಿ ನೇರಳೆ ಮಾರ್ಗದಲ್ಲಿರುವ ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣವನ್ನು ನೇರವಾಗಿ ಐಟಿಪಿಬಿ ಮತ್ತು ಪಾರ್ಕ್ ಸ್ಕ್ವೇರ್ ಮಾಲ್‌ಗೆ ಸಂಪರ್ಕಿಸುವ ಎಲಿವೇಟೆಡ್ ಪಾದಚಾರಿ ಕಾರಿಡಾರ್ 'ಐಟಿಪಿಬಿ ಮೆಟ್ರೋ ಸ್ಕೈವಾಕ್' ಅನ್ನು ಉದ್ಘಾಟಿಸಲಾಯಿತು. ಈ ಯೋಜನೆಯು ಐಟಿಪಿಬಿ ಜಂಕ್ಷನ್‌ನ ಸುತ್ತಮುತ್ತಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಸ್ಕೈವಾಕ್ ಅನ್ನು ಕ್ಯಾಪಿಟಾಲ್ಯಾಂಡ್ ಇಂಡಿಯಾ ಟ್ರಸ್ಟ್‌ನ ಸಿಇಒ ಗೌರಿ ಶಂಕರ್ ನಾಗಭೂಷಣಂ ಉದ್ಘಾಟಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

RCB ಅಭಿಮಾನಿಗಳಿಗೆ ಸಿಹಿ ಸುದ್ದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ಅನುಮತಿ

BBK 12 ವಿನ್ನರ್'ಗೆ ಸಿಕ್ಕ ವೋಟು 37 ಕೋಟಿ; ಯಾರಾಗ್ತಾರೆ Winner ಸಿಕ್ಕೇ ಬಿಡ್ತು ಸುಳಿವು!

ಯಾವುದೇ ದೇವಸ್ಥಾನ ಕೆಡವಿಲ್ಲ; ಕಾಶಿಗೆ ಕಳಂಕ ತರಲು ಕಾಂಗ್ರೆಸ್ ನಿಂದ AI ಬಳಕೆ: UP ಸಿಎಂ ಯೋಗಿ

ಬೆಂಗಳೂರು: ದೇವನಹಳ್ಳಿ ಬಳಿ ಭೀಕರ ಅಪಘಾತ; ಒಂದೇ ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ವಿದ್ಯಾರ್ಥಿಗಳು ಸಾವು

ದೇಶದ Gen Z ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ

SCROLL FOR NEXT