ಸಿಎಂ ಸಿದ್ದರಾಮಯ್ಯ 
ರಾಜ್ಯ

Karnataka Budget 2026-27: ಈ ಬಾರಿ 'ಕಟ್ಟುನಿಟ್ಟಿನ ಬಜೆಟ್'; ಹಣ ಹಂಚಿಕೆ ಬಗ್ಗೆ ಸಿಎಂ ಸುಳಿವು

ಕಾಂಗ್ರೆಸ್ ಸರ್ಕಾರವು ಗೃಹ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ನಿಂದ ಡಿವೈಎಸ್‌ಪಿ ಹುದ್ದೆಯವರೆಗೆ ನೇಮಕಾತಿಯಲ್ಲಿ ಶೇಕಡಾ 3 ರಷ್ಟು ಮತ್ತು ಕ್ರೀಡಾಪಟುಗಳಿಗೆ ಇತರ ಇಲಾಖೆಗಳಲ್ಲಿ ಶೇಕಡಾ 2 ರಷ್ಟು ಕೋಟಾವನ್ನು ನೀಡಿದೆ.

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ಬಜೆಟ್'ಗೆ ಸಿದ್ಧತೆಗಳನ್ನು ಆರಂಭಿಸಿದ್ದು,ಈ ನಡುವೆ ಈ ಬಾರಿಯ ಬಜೆಟ್ ಹಂಚಿಕೆ ಕಟ್ಟುನಿಟ್ಟಿನಿಂದ ಕೂಡಿರಲಿದೆ ಎಂಬ ಸುಳಿವನ್ನು ಶುಕ್ರವಾರ ನೀಡಿದ್ದಾರೆ.

ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಏಳು ದಿನಗಳ ರಾಜ್ಯಮಟ್ಟದ ಕರ್ನಾಟಕ ಕ್ರೀಡಾಕೂಟ 2025-26 ಅನ್ನು ಉದ್ಘಾಟಿಸಿದ ಜಿಲ್ಲಾ ಸಚಿವರೂ ಆಗಿರುವ ಪರಮೇಶ್ವರ್, ತುಮಕೂರಿನಲ್ಲಿ ಹಾಕಿ ಕ್ರೀಡಾಂಗಣ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳವನ್ನು ಸ್ಥಾಪಿಸಲು 25 ಕೋಟಿ ರೂ.ಗಳನ್ನು ನೀಡುವಂತೆ ಸಿಎಂಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, "ಅಷ್ಟು ನೀಡಲು ಸಾಧ್ಯವಿಲ್ಲ, ಆದರೆ ಮಂಗಳೂರಿಗೆ ನೀಡಿದಷ್ಟು ಮೊತ್ತವನ್ನು (6 ಕೋಟಿ ರೂ) ತುಮಕೂರಿಗೆ ಮಂಜೂರು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಸರ್ಕಾರವು ಗೃಹ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ನಿಂದ ಡಿವೈಎಸ್‌ಪಿ ಹುದ್ದೆಯವರೆಗೆ ನೇಮಕಾತಿಯಲ್ಲಿ ಶೇಕಡಾ 3 ರಷ್ಟು ಮತ್ತು ಕ್ರೀಡಾಪಟುಗಳಿಗೆ ಇತರ ಇಲಾಖೆಗಳಲ್ಲಿ ಶೇಕಡಾ 2 ರಷ್ಟು ಕೋಟಾವನ್ನು ನೀಡಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದವರಿಗೆ 6 ಕೋಟಿ ರೂ., 4 ಕೋಟಿ ರೂ. ಮತ್ತು 3 ಕೋಟಿ ರೂ. ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಕ್ರೀಡೆಯಿಂದ ಜೀವನದಲ್ಲಿ ಶಿಸ್ತು, ಸಂಯಮ, ಸಮಯಪ್ರಜ್ಞೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಇದರ ರೂವಾರಿಯಾಗಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಅಭಿನಂದನೆಗಳು. ನಾನು ವಿದ್ಯಾರ್ಥಿದೆಸೆಯಲ್ಲಿ ಕಬ್ಬಡ್ಡಿ ಪಟುವಾಗಿದ್ದೆ, ಅದರೊಂದಿಗೆ ಫುಟ್ ಬಾಲ್, ಕ್ರಿಕೆಟ್ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದೆ. ಅದರಿಂದ ಈಗಾಗಲೂ ಆಗಾಗ್ಗೆ ಏಕದಿನ ಕ್ರಿಕೆಟ್, ಟಿ.-20 ಕ್ರಿಕೆಟ್ ನೋಡುತ್ತೇನೆ. ಕೆಲಸದೊತ್ತಡದ ನಡುವೆಯೂ ಅಂತರರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸುವುದನ್ನು ತಪ್ಪಿಸುವುದಿಲ್ಲ ಎಂದು ತಿಳಿಸಿದರು.

ಕ್ರೀಡೆಯಲ್ಲಿ ಸೋಲು - ಗೆಲುವು ಮುಖ್ಯವಲ್ಲ, ಕ್ರೀಡಾಸ್ಪೂರ್ತಿ ಮುಖ್ಯ. ಪ್ರತಿ ಕ್ರೀಡಾಪಟುವು ಇದನ್ನು ಪಾಲಿಸಬೇಕು. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು, ಕಠಿಣ ಶ್ರಮ ಅತ್ಯಗತ್ಯ. ಪರಿಶ್ರಮದಿಂದ ಗುರಿ ಸಾಧಿಸಲು ಉತ್ತಮ ತರಬೇತಿ ಅಗತ್ಯ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯ ನಿಯಮವನ್ನು ಜಾರಿಗೊಳಿಸಿದೆ.

ಪೊಲೀಸ್ ಇಲಾಖೆಯಲ್ಲಿ ಪೇದೆ ಹುದ್ದೆಯಿಂದ ಆರಕ್ಷಕ ಉಪಾಧೀಕ್ಷಕರ ಹುದ್ದೆಯ ವರೆಗೆ ಶೇ.3 ರಷ್ಟು ಮೀಸಲಾತಿಯನ್ನು ಸರ್ಕಾರ ನೀಡುತ್ತಿದೆ. ಒಲಂಪಿಕ್ಸ್ , ಪ್ಯಾರಾ ಒಲಂಪಿಕ್ಸ್ , ಏಷಿಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್, ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತರಾದ/ಭಾಗವಹಿಸುವ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ವಿವಿಧ ಇಲಾಖೆಗಳಲ್ಲಿ ಶೇ.2 ರ ಮೀಸಲಾತಿಯನ್ನು ನೀಡಲಾಗುತ್ತಿದೆ. ಒಲಂಪಿಕ್ಸ್ ನಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.

ತುಮಕೂರು ಜಿಲ್ಲೆಗೆ ಹಾಕಿ ಕ್ರೀಡಾಂಗಣ, ವಿಶ್ವದರ್ಜೆಯ ಈಜುಕೊಳದ ಬೇಡಿಕೆಯಿದ್ದು, ಕ್ರೀಡೆಗಾಗಿ ಹೆಚ್ಚಿನ ಅನುದಾನ ನೀಡಲಾಗುವುದು. ತುಮಕೂರು ಜಿಲ್ಲೆಯಿಂದ ಉತ್ತಮ ಕ್ರೀಡಾಪಟುಗಳು ಹೊರಬಂದು, ವಿಶ್ವಮಟ್ಟದಲ್ಲಿ ನಾಡಿನ ಕೀರ್ತಿಯನ್ನು ಹೆಚ್ಚಿಸಲೆಂದು ಹಾರೈಸುತ್ತೇನೆಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದೋರ್: ಕಲುಷಿತ ನೀರು ಸೇವನೆಯಿಂದ ಸಾವು, ಕುಟುಂಬಸ್ಥರನ್ನು ಭೇಟಿಯಾದ ರಾಹುಲ್ ಗಾಂಧಿ! Video

ಬೆಂಗಳೂರಿನಲ್ಲಿ 'ಬಹು ಅಂಗಾಂಗ ಕಸಿ' ಆಸ್ಪತ್ರೆ: ಐದು ವರ್ಷಗಳಲ್ಲಿ 4,000 ಕೋಟಿ ರೂ. ವೆಚ್ಚದ ಗುರಿ- ಸಿಎಂ ಸಿದ್ದರಾಮಯ್ಯ

'ಫೈರಿಂಗ್ ಘಟನೆ' ಸಿಬಿಐ ತನಿಖೆಗೆ ಆಗ್ರಹ: ಬಳ್ಳಾರಿಯಲ್ಲಿ ಬಿಜೆಪಿ ಬಲಪ್ರದರ್ಶನ, ಬೃಹತ್ ಪ್ರತಿಭಟನೆ!

ದರ ನಿಗದಿಯಲ್ಲಿನ ವೈಪರೀತ್ಯಗಳಿಂದಾಗಿ ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ: ಸಂಸದ ತೇಜಸ್ವಿ ಸೂರ್ಯ

ದೆಹಲಿಯಲ್ಲಿ ಖರ್ಗೆ- ಡಿಕೆಶಿ ಭೇಟಿ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

SCROLL FOR NEXT