ತುಮಕೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಜತೆ ಯಾವಾಗಲೂ ಸಿಹಿ ಸುದ್ದಿನೇ ಇರುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಅವರು ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆ.ಎನ್.ರಾಜಣ್ಣ ಅವರ ಮನೆಗೆ ತೆರಳಿ ಔತಣ ಕೂಟದಲ್ಲಿ ಭಾಗವಹಿಸಿದ್ದರು.
ಕೋಳಿ ಸಾರು, ಕಾಲುಸೂಪು, ಇಡ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನನಗೆ ಹುಷಾರು ಇರಲಿಲ್ಲ, ಜ್ವರ ಬಂದಿತ್ತು, ಹಾಗಾಗಿ ಬಾಯಿ ಕೆಟ್ಟು ಹೋಗಿತ್ತು. ರಾಜಣ್ಣ ಮನೆಯಲ್ಲಿ ನಾನ್ ವೆಜ್ ಊಟ ಕೋಳಿ ಸಾರು, ಕಾಲುಸೂಪು, ನಾಟಿ ಚಿಕನ್, ಇಡ್ಲಿ ಸವಿದದ್ದು ಖುಷಿಯಾಯಿತು ಎಂದು ಹೇಳಿದರು.
ಹೈಕಮಾಂಡ್ ಜೊತೆ ಮಾತನಾಡುತ್ತೇನೆ
ರಾಜಣ್ಣ ಅವರಿಗೆ ಮಂತ್ರಿ ಸ್ಥಾನದ ಸಿಹಿ ಸುದ್ದಿ ಕೊಡುವಿರಾ ಎಂದು ಕೇಳಿದಾಗ, ಹೈಕಮಾಂಡ್ ಜೊತೆ ಮಾತನಾಡುವುದಾಗಿ ತಿಳಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿರುವ ವಿಚಾರ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ ಎಂದರು.