ಮಾರಕಾಸ್ತ್ರ ತೆಗೆಯುತ್ತಿರುವ ವ್ಯಕ್ತಿ 
ರಾಜ್ಯ

ಓವರ್ ಟೇಕ್ ವಿಚಾರಕ್ಕೆ ಜಗಳ: ನಡುರಸ್ತೆಯಲ್ಲಿ ಮಾರಕಾಸ್ತ್ರ ತೋರಿಸಿ ದಂಪತಿಗೆ ಬೆದರಿಸಿದ ಬೈಕ್ ಸವಾರ, Video ವೈರಲ್

ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕಾಡುಗೊಡಿ ಪೊಲೀಸರು ಬೈಕ್‌ ಸವಾರನಿಗಾಗಿ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು Road Rage ಪ್ರಕರಣ ವರದಿಯಾಗಿದೆ. ಓವರ್ ಟೇಕ್ ಮಾಡಿದ್ದೂ ಅಲ್ಲದೆ, ಕಾರು ಚಾಲಕನಿಗೇ ಬೈಕ್ ಸವಾರನೊಬ್ಬ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕಾಡುಗೊಡಿ ಪೊಲೀಸರು ಬೈಕ್‌ ಸವಾರನಿಗಾಗಿ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ದಂಪತಿ ಕಾರಿನಲ್ಲಿ ಹೋಗುವಾಗ ಬಹಳ ಹತ್ತಿರದಿಂದ ಆರೋಪಿ ಓವರ್ ಟೇಕ್ ಮಾಡಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ನಂತರ ನೆಕ್ಸಸ್ ಶಾಂತಿನಿಕೇತನ್ ಅಪಾರ್ಟ್‌ಮೆಂಟ್‌ನ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದ್ದಾಗ, ಬೈಕ್ ನಿಲ್ಲಿಸಿ ಬಂದ ಸವಾರ ನಡುರಸ್ತೆಯಲ್ಲಿಯೇ ದಂಪತಿಯೊಂದಿಗೆ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಆಕ್ರೋಶಗೊಂಡ ಸವಾರ ಸೊಂಟದ ಬಳಿ ಇಟ್ಟುಕೊಂಡಿದ್ದ ಮಾರಕಾಸ್ತ್ರವನ್ನು ತೋರಿಸಿ, ನಿಮ್ಮನ್ನು ಇಲ್ಲಿಯೇ ಮುಗಿಸುತ್ತೇನೆ ಎಂದು ಧಮ್ಮಿ ಹಾಕಿದ್ದಾನೆ. ಬೈಕ್ ಸವಾರನ ಹುಚ್ಚಾಟ ಕಾರಿನಲ್ಲಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋವನ್ನು ಕಾರು ಚಾಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋವನ್ನು ನಗರದ ಪೊಲೀಸರಿಗೆ ಟ್ಯಾಗ್ ಮಾಡಿದ್ದಾನೆ.

ಈ ವಿಡಿಯೋ ವೈರಲ್ ಆದ ಹಿನ್ನೆಲೆ ಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಆರೋಪಿ ಪತ್ತೆಗಾಗಿ ಎರಡು ತಂಡ ರಚಿಸಿದ್ದಾರೆ. ಬೈಕ್‌ ನೋಂದಣಿ ಸಂಖ್ಯೆ ಆಧರಿಸಿ ಸವಾರನಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

E20 ಪೆಟ್ರೋಲ್ ನಲ್ಲಿ ಹೆಚ್ಚು ಕ್ಲೋರೈಡ್ ಮಟ್ಟ ತೋರಿಸಿದ್ದ SIAM; ಸಚಿವಾಲಯಕ್ಕೆ ಕಳುಹಿಸಿದ್ದ ಪತ್ರ ವಾಪಸ್

"ಜನ ನಾಯಗನ್ ಬಜೆಟ್': ಮಹಿಳೆಯರು, ಯುವಜನತೆಗೆ ದಳಪತಿ ವಿಜಯ್ ಬಂಪರ್ ಗಿಫ್ಟ್; ಶಾಲಾ ಶಿಕ್ಷಣಕ್ಕೆ ಅತಿ ಹೆಚ್ಚು ಅನುದಾನ

ಇಥಿಯೋಪಿಯನ್ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥ ಟೆವೊಲ್ಡೆ Air India ನೂತನ CEO