ಹಿಂದೂ ಮುಖಂಡೆ, ಅನ್ಸಾರಿ ದರ್ಗಾ 
ರಾಜ್ಯ

ಬೆಳಗಾವಿ: ದರ್ಗಾ ಮುಂದೆ ಪ್ರಚೋದನಕಾರಿ ಘೋಷಣೆ; ಏಳು ಜನರ ವಿರುದ್ಧ ಪ್ರಕರಣ ದಾಖಲು; Video

ಜನವರಿ 18ರಂದು ಅಖಂಡ ಹಿಂದೂ ಸಮ್ಮೇಳನದ ಭಾಗವಾಗಿ ಮೆರವಣಿಗೆ ನಡೆಸಲಾಗಿತ್ತು.

ಬೆಳಗಾವಿ: ಮಚ್ಚೆ ಗ್ರಾಮದಲ್ಲಿ ನಡೆದ ಮೆರವಣಿಗೆ ವೇಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಮಹಾರಾಷ್ಟ್ರ ಮೂಲದ ಹಿಂದೂ ಮುಖಂಡೆ ಸೇರಿದಂತೆ ಏಳು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜನವರಿ 18ರಂದು ಅಖಂಡ ಹಿಂದೂ ಸಮ್ಮೇಳನದ ಭಾಗವಾಗಿ ಮೆರವಣಿಗೆ ನಡೆಸಲಾಗಿತ್ತು.

ದೂರಿನ ಪ್ರಕಾರ, ಸಮಾವೇಶಕ್ಕೂ ಮೊದಲು ಮೆರವಣಿಗೆ ನಡೆಸಲಾಯಿತು. ಅನ್ಸಾರಿ ದರ್ಗಾ ಬಳಿ ಮೆರವಣಿಗೆ ತಲುಪಿದಾಗ, ವಾಹನದ ಮೇಲೆ ನಿಂತಿದ್ದ ಹಿಂದೂ ಮುಖಂಡೆ ವಾಹನವನ್ನು ನಿಲ್ಲಿಸಲು ಹೇಳಿ ಇತರ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೆ ಹಿಂದೂ ಮುಖಂಡೆ ಸಮಾವೇಶದ ವೇಳೆ ಪ್ರಚೋದನಕಾರಿ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಮಾವೇಶದ ಆಯೋಜಕರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಜೊತೆ ರಷ್ಯಾ ಗೌಪ್ಯ ಮಾಹಿತಿ ಹಂಚಿಕೆ: ವಿಶ್ವದಲ್ಲೇ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ನಮ್ಮದು, ಭಯವಿಲ್ಲ ಎಂದ ಅಮೆರಿಕಾ

LPG Price Hike: ದೇಶದ ನಾಗರಿಕರಿಗೆ ತಟ್ಟಿದ ಬಿಸಿ, ಇರಾನ್ ಯುದ್ಧ ಮಧ್ಯೆ ಎಲ್ ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

ಕೇಂದ್ರದಿಂದ ಅಸಹಕಾರ, ಮಲತಾಯಿ ಧೋರಣೆ, ಆದರೂ ವಿತ್ತೀಯ ಶಿಸ್ತು ಪಾಲನೆ: CM ಸಿದ್ದರಾಮಯ್ಯ

UPSC ಪರೀಕ್ಷೆ ಫಲಿತಾಂಶ ಪ್ರಕಟ: ಕಿರಣ್ ಕಾಮತೆ ರಾಜ್ಯಕ್ಕೆ ಟಾಪರ್; ಕರ್ನಾಟಕದ 22 ಅಭ್ಯರ್ಥಿಗಳು ಪಾಸ್

SCROLL FOR NEXT