ಬೆಂಗಳೂರು ಟ್ರಾಫಿಕ್ (ಸಂಗ್ರಹ ಚಿತ್ರ) 
ರಾಜ್ಯ

ಬ್ರ್ಯಾಂಡ್ ಬೆಂಗಳೂರು ಇಮೇಜ್ ಗೆ ಮತ್ತೊಂದು ಪೆಟ್ಟು: ಜಗತ್ತಿನ ಟ್ರಾಫಿಕ್​ ದಟ್ಟಣೆಯಲ್ಲಿ ಸಿಲಿಕಾನ್ ಸಿಟಿಗೆ 2ನೇ ಸ್ಥಾನ; ಮೊದಲ ನಗರ ಯಾವುದು?

2025ರ ಮೇ 17ರಂದು ನಗರದಲ್ಲಿ ಪ್ರಯಾಣದ ಅನುಭವ ತುಂಬಾ ಕೆಟ್ಟದಾಗಿತ್ತು ಎಂದು ಗುರುತಿಸಲಾಗಿದೆ. ದಟ್ಟಣೆಯ ಮಟ್ಟವು ಶೇ 101ರಷ್ಟಿತ್ತು. ಆ ದಿನ ಸಂಜೆ 6ಕ್ಕೆ ದಟ್ಟಣೆ ಪ್ರಮಾಣವು ಶೇ 183ಕ್ಕೆ ಏರಿತು. 2.5 ಕಿ.ಮೀ. ಕ್ರಮಿಸಲು 15 ನಿಮಿಷ ತೆಗೆದುಕೊಂಡಿದೆ .

ಬೆಂಗಳೂರು: ಐಟಿ ಕ್ಷೇತ್ರ ಸೇರಿದಂತೆ ಮತ್ತಿತರ ಸಾಧನೆಗಳ ಮೂಲಕ ಈಗಾಗಲೇ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು, ಇದೀಗ ಸಂಚಾರ ದಟ್ಟಣೆಯಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟಾಮ್‌ಟಾಮ್‌ ಸಂಚಾರ ಸೂಚ್ಯಂಕ ಬಿಡುಗಡೆ ಮಾಡಿರುವ ವರದಿಯಂತೆ ವಿಶ್ವದಲ್ಲಿ ಅತಿಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ಐಟಿ ಕ್ಷೇತ್ರ ಸೇರಿದಂತೆ ಮತ್ತಿತರ ಸಾಧನೆಗಳ ಮೂಲಕ ಈಗಾಗಲೇ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು, ಇದೀಗ ಸಂಚಾರ ದಟ್ಟಣೆಯಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟಾಮ್‌ಟಾಮ್‌ ಸಂಚಾರ ಸೂಚ್ಯಂಕ ಬಿಡುಗಡೆ ಮಾಡಿರುವ ವರದಿಯಂತೆ ವಿಶ್ವದಲ್ಲಿ ಅತಿಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮೆಕ್ಸಿಕೊ ಮೊದಲ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ ಸರಾಸರಿ ದಟ್ಟಣೆಯು ಶೇ 74.4ರಷ್ಟಿದೆ. 2024ಕ್ಕೆ ಹೋಲಿಸಿದರೆ 2025ರಲ್ಲಿ ಶೇ 1.7ರಷ್ಟು ಹೆಚ್ಚಾಗಿದೆ. ಚಾಲಕರು 15 ನಿಮಿಷಗಳಲ್ಲಿ ಸರಾಸರಿ 4.2 ಕಿ.ಮೀ. ದೂರವನ್ನಷ್ಟೇ ಕ್ರಮಿಸಲು ಸಾಧ್ಯವಾಗಿದೆ. 10 ಕಿ.ಮೀ. ಸಾಗಲು ಸರಾಸರಿ 36 ನಿಮಿಷ ಒಂಬತ್ತು ಸೆಕೆಂಡ್ಸ್‌ ತೆಗೆದುಕೊಂಡಿತ್ತು. ದಟ್ಟಣೆ ಸಮಯದಲ್ಲಿ ಗಂಟೆಗೆ ಸರಾಸರಿ 13.9 ಕಿ.ಮೀ.ಗೆ ಇಳಿದಿತ್ತು ಎಂದು ವರದಿ ತಿಳಿಸಿದೆ.

2025ರ ಮೇ 17ರಂದು ನಗರದಲ್ಲಿ ಪ್ರಯಾಣದ ಅನುಭವ ತುಂಬಾ ಕೆಟ್ಟದಾಗಿತ್ತು ಎಂದು ಗುರುತಿಸಲಾಗಿದೆ. ದಟ್ಟಣೆಯ ಮಟ್ಟವು ಶೇ 101ರಷ್ಟಿತ್ತು. ಆ ದಿನ ಸಂಜೆ 6ಕ್ಕೆ ದಟ್ಟಣೆ ಪ್ರಮಾಣವು ಶೇ 183ಕ್ಕೆ ಏರಿತು. 2.5 ಕಿ.ಮೀ. ಕ್ರಮಿಸಲು 15 ನಿಮಿಷ ತೆಗೆದುಕೊಂಡಿದೆ ಎಂದು ಉಲ್ಲೇಖಿಸಲಾಗಿದೆ. 2024ರಲ್ಲಿ 10 ಕಿಮೀ ಪ್ರಯಾಣಿಸಲು 34 ನಿಮಿಷ 10 ಸೆಕೆಂಡುಗಳು ಬೇಕಾಗುತ್ತಿತ್ತು. ಒಂದು ವರ್ಷದಲ್ಲಿ 1.59 ನಿಮಿಷ ಹೆಚ್ಚಳವಾಗಿದೆ. ಇನ್ನು, 2025ರಲ್ಲಿ ಬೆಂಗಳೂರಿನ ಒಟ್ಟಾರೆ ಸರಾಸರಿ ವಾಹನ ವೇಗ ಪ್ರತಿ ಗಂಟೆಗೆ 16.6 ಕಿಮೀ ದಾಖಲಾಗಿದೆ. ಅದರಲ್ಲೂ ಪೀಕ್‌ ಅವರ್‌ಗಳಾದ ಬೆಳಗ್ಗೆ 14.6 ಕಿಮೀ ಮತ್ತು ಸಂಜೆ 13.2 ಕಿಮೀಗಳಾಗಿವೆ ಎಂದು ಹೇಳಲಾಗಿದೆ.

ನಗರದ ನಿವಾಸಿಗಳು 2025 ರಲ್ಲಿ ಸಂಚಾರದಲ್ಲಿ ಸಿಲುಕಿಕೊಂಡು ಸುಮಾರು 168 ಗಂಟೆಗಳನ್ನು (ಸುಮಾರು 7 ದಿನಗಳು) ವ್ಯಯಿಸುತ್ತಾರೆ. ಚೆನ್ನೈ ಮತ್ತು ಹೈದರಾಬಾದ್ ಪಟ್ಟಿಯಲ್ಲಿ ಸಾಕಷ್ಟು ಕೆಳಮಟ್ಟದಲ್ಲಿವೆ, ಅಂಕಿ ಅಂಶಗಳು ಬೆಂಗಳೂರಿಗಿಂತ ಹೆಚ್ಚು ಆರೋಗ್ಯಕರವಾಗಿವೆ. 32 ನೇ ಸ್ಥಾನದಲ್ಲಿರುವ ಚೆನ್ನೈ ಶೇ.58.6 ರಷ್ಟು ಪಡೆದುಕೊಂಡಿದೆ.

ಬೆಂಗಳೂರು ಅಲ್ಲದೇ ಭಾರತದ ಆರು ನಗರಗಳು ಜಾಗತಿಕವಾಗಿ ಅಗ್ರ 35 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪುಣೆ ಶೇಕಡ 71.1 ರಷ್ಟು ದಟ್ಟಣೆಯೊಂದಿಗೆ ಐದನೇ ಸ್ಥಾನದಲ್ಲಿದೆ. ಮುಂಬೈ ಶೇ 63.2 (18ನೇ ಸ್ಥಾನ), ನವದೆಹಲಿ ಶೇ 60.2(23ನೇ ಸ್ಥಾನ), ಕೋಲ್ಕತ್ತ ಶೇ 58.9(29ನೇ ಸ್ಥಾನ), ಜೈಪುರ ಶೇ 58.7 (30ನೇ ಸ್ಥಾನ) ಮತ್ತು ಚೆನ್ನೈ ಶೇ 58.6ರಷ್ಟು(32ನೇ ಸ್ಥಾನ) ಜನದಟ್ಟಣೆಯನ್ನು ಹೊಂದಿದೆ.

ಬೆಂಗಳೂರು ವಿಶ್ವದ ಪ್ರಮುಖ ಐಟಿ ನಗರವಾಗಿರುವುದರ ಜೊತೆಗೆ, ಸಂಚಾರ ದಟ್ಟಣೆಯಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ನಗರಾಭಿವೃದ್ಧಿ ಹಾಗೂ ಸಂಚಾರ ನಿರ್ವಹಣೆಯ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭುಗಿಲೆದ್ದ ಬಂಡಾಯ, ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಶಶಿತರೂರ್: ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ, ಪಕ್ಷದ ಚುನಾವಣಾ ಸಭೆಗೆ ಗೈರು!

ಕೇರಳದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ, ತಿರುವನಂತಪುರವನ್ನು ಭಾರತದ ಉತ್ತಮ ನಗರವನ್ನಾಗಿ ಮಾಡುತ್ತೇವೆ: ಪ್ರಧಾನಿ ಮೋದಿ

ಆಕಸ್ಮಿಕ ಗುಂಡು ಹಾರಿ ಪತ್ನಿ ಸಾವು, ನೊಂದು ಆತ್ಮಹತ್ಯೆಗೆ ಶರಣಾದ ಕಾಂಗ್ರೆಸ್ ಸಂಸದನ ಅಳಿಯ!

'ಸುಷ್ಮಾ ಸ್ವರಾಜ್ ಪಾದ ಪೂಜೆ ಮಾಡಿ ನೀರು ಕುಡಿದು ರಾಜಕೀಯ ಲಾಭ ಗಿಟ್ಟಿಸಿಕೊಂಡ ರೆಡ್ಡಿ ಅಮಿತ್ ಶಾ ತುಪಕ್ ಅಂತಾ ಉಗ್ದಿದ್ದನ್ನು ಮರೆತಂತಿದೆ'

Rajasthan: ಜೈಲು ಹಕ್ಕಿಗಳ ನಡುವೆ ಮೊಳಕೆಯೊಡೆದ ಪ್ರೀತಿ, ಕೊಲೆ ಅಪರಾಧಿಗಳ ಮದುವೆಗೆ ಸಿಕ್ತು ಪೆರೋಲ್!

SCROLL FOR NEXT