ಸಿಎಂ ಸಿದ್ದರಾಮಯ್ಯ 
ರಾಜಕೀಯ

ನಮಗೂ 'ಟೈಮ್' ಬರುತ್ತೆ: ದೇವೇಗೌಡರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

ಕಾಂಗ್ರೆಸ್ ಈ ಬಾರಿ 140 ಸ್ಥಾನ ಗಳಿಸಿದೆ. 2028ಕ್ಕೂ ನಾವೇ ಅಧಿಕಾರಕ್ಕೆ ಬರುವುದು ಎನ್ನುವ ಭರವಸೆ ನಮಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರು: ರೇವಣ್ಣ ಕುಟುಂಬ ಮುಗಿಸಿದ್ದೇವೆ ಅಂತ ಎಸ್​ಐಟಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಉಡುಗೊರೆ ಕೊಟ್ಟಿದ್ದಾರೆ. ನಮಗೂ ಟೈಮ್ ಬರುತ್ತೆ. ನಿಮ್ಮ ಆಟ ನಡೆಯಲ್ಲ ಅಂತ ಮಾಜಿ ಪ್ರಧಾನಿ ದೇವೇಗೌಡರು ಶನಿವಾರ ಕಿಡಿಕಾರಿದ್ದರು.

ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನಿನ ಪ್ರಕಾರ ಪ್ರಜ್ವಲ್ ರೇವಣ್ಣ ಅವರ ಬಂಧನವಾಗಿದ್ದು, ಸರ್ಕಾರ ಅದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಇದೊಂದೇ ಪ್ರಕರಣವಲ್ಲ. ಯಾವುದೇ ಪ್ರಕರಣದಲ್ಲಿಯೂ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಅಧಿಕಾರಿಗಳಿಗೆ ಸರ್ಕಾರ ಬಹುಮಾನ ಕೊಟ್ಟಿಲ್ಲ. ಅದೆಲ್ಲಾ ಸುಳ್ಳು. ನಮಗೂ ಸಮಯ ಬರುತ್ತದೆ ಎಂಬ ಹೆಚ್. ಡಿ.ದೇವೇಗೌಡರ ಮಾತಿನ ಅರ್ಥ ನಮಗೆ ಗೊತ್ತಿಲ್ಲ ಎಂದರು.

17 ಸ್ಥಾನ ಪಡೆದಿರುವವರು ಅಧಿಕಾರಕ್ಕೆ ಹೇಗೆ ಬರುತ್ತಾರೆ? ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದರು. ಕಾಂಗ್ರೆಸ್ ಈ ಬಾರಿ 140 ಸ್ಥಾನ ಗಳಿಸಿದೆ. 2028ಕ್ಕೂ ನಾವೇ ಅಧಿಕಾರಕ್ಕೆ ಬರುವುದು ಎನ್ನುವ ಭರವಸೆ ನಮಗಿದೆ. ಜಿಡಿಎಸ್ ಮತ್ತು ಬಿಜೆಪಿಯವರು ಮೈತ್ರಿ ಮಾಡಿಕೊಂಡರು ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.

ಗಣರಾಜ್ಯೋತ್ಸವದ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಪತ್ರ ವ್ಯವಹಾರವೆಲ್ಲಾ ಆಗಿದ್ದರೂ, ಕೇಂದ್ರ ಸರ್ಕಾರ ಆಯ್ಕೆ ಮಾಡಿಲ್ಲದಿರುವುದು ದುರದೃಷ್ಟಕರ ಸಂಗತಿ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಬೇಕೆಂದು ಸಂವಿಧಾನದ 176 ಮತ್ತು 163 ಪರಿಚ್ಛೇದದಲ್ಲಿ ಸ್ಪಷ್ಟವಾಗಿ ಹೇಳಿದೆ. ಸರ್ಕಾರ ಕೊಟ್ಟಿರುವ ಭಾಷಣವನ್ನು ಅವರು ಓದಲೇಬೇಕು. ನಾವು ಬರೆದುಕೊಟ್ಟಿರುವುದನ್ನು ಅವರು ಬದಲಾಯಿಸುವ ಸಾಧ್ಯತೆ ಇರುತ್ತದೆ ಎಂದರು.

ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ನಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಕೈಗಾರಿಕಾ ಸಚಿವರು ಪಾಲ್ಗೊಂಡಿದ್ದು, ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ವಾತಾವರಣವಿದೆ. ನಮ್ಮಲ್ಲಿ ಕೌಶಲ್ಯವಿರುವ ಮಾನವ ಸಂಪನ್ಮೂಲದ ಲಭ್ಯತೆಯಿದೆ. ಇದಕ್ಕೆ ತರಬೇತಿಯೂ ನೀಡಲಾಗುತ್ತಿದೆ, ತರಬೇತಿ ಪಡೆವರಿಗೆ ನೂರರಷ್ಟು ಕೆಲಸ ದೊರೆಯುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

45 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ: ಕರ್ನಾಟಕದ 3 ಸಾಧಕರಿಗೆ ಗೌರವ

ಮೈಸೂರು: ಕೌಟುಂಬಿಕ ಕಲಹ, ಇಬ್ಬರು ಮಕ್ಕಳೊಂದಿಗೆ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಮೈಸೂರಿನ ಮಾಜಿ ಬಸ್ ಕಂಡಕ್ಟರ್, ಪುಸ್ತಕ ಪ್ರೇಮಿ ಅಂಕೇಗೌಡಗೆ 'ಪದ್ಮಶ್ರೀ' ಪ್ರಶಸ್ತಿ!

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆಟೋ ನಾಗನ ಬರ್ಬರ ಹತ್ಯೆ

CCL 2026: ಭೋಜ್‌ಪುರಿ ದಬಾಂಗ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ಗೆ 18 ರನ್‌ಗಳ ರೋಚಕ ಜಯ, ಸೆಮಿಫೈನಲ್‌ಗೆ ಎಂಟ್ರಿ!

SCROLL FOR NEXT