ಬಿಎಂಟಿಸಿ ಬಸ್ ಹಿಂಭಾಗ ಜಖಂ 
ರಾಜ್ಯ

ಬೆಂಗಳೂರು: ರಿವರ್ಸ್ ತೆಗೆದುಕೊಳ್ಳುವಾಗ ರೈಲಿಗೆ ಡಿಕ್ಕಿ ಹೊಡೆದ ಬಸ್! ಹಿಂಭಾಗ ಜಖಂ

ಬಸ್ ನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಸಂಭಾವ್ಯ ದುರಂತ ತಪ್ಪಿದಂತಾಗಿದೆ. ಘಟಕ 51ರ ಕಾಡುಗೋಡಿ ಬಿಎಂಟಿಸಿ ಬಸ್ ಗೆ ಈ ರೀತಿ ಹಾನಿಯಾಗಿದೆ.

ಬೆಂಗಳೂರು: ಬಿಎಂಟಿಸಿ ಬಸ್‌ ರಿವರ್ಸ್‌ ತೆಗೆಯುವಾಗ ರೈಲಿಗೆ ಗುದ್ದಿದ ಪರಿಣಾಮ ಬಸ್ ನ ಹಿಂಭಾಗ ನಜ್ಜುಗುಜ್ಜಾಗಿರುವ ಘಟನೆ ನಗರದ ಸಾದರಮಂಗಲದಲ್ಲಿ ನಡೆದಿದೆ.

ಬಸ್ ನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಸಂಭಾವ್ಯ ದುರಂತ ತಪ್ಪಿದಂತಾಗಿದೆ. ಘಟಕ 51ರ ಕಾಡುಗೋಡಿ ಬಿಎಂಟಿಸಿ ಬಸ್ ಗೆ ಈ ರೀತಿ ಹಾನಿಯಾಗಿದೆ.

ಸಾದರಮಂಗಲದ ಬಿಎಂಟಿಸಿ ಘಟಕದಿಂದ ಸೋಮವಾರ ಬೆಳಗ್ಗೆ 9-15ರ ವೇಳೆಗೆ ಕಾಡುಗೋಡಿಗೆ ಬಸ್ ಹೊರಟಿತ್ತು.

ಅಲ್ಲೇ ಮುಂದೆ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಬಸ್ ಹಿಂದಕ್ಕೆ ತೆಗೆಯುವಾಗ ಚಾಲಕನ ನಿರ್ಲಕ್ಷ್ಯದಿಂದಾಗಿ ಬಸ್ ಹಳಿ ಕಡೆಗೆ ಹೆಚ್ಚು ಹಿಂದಕ್ಕೆ ಸಾಗಿದೆ. ಅದೇ ಸಮಯದಲ್ಲಿ ಎಸ್ಎಂವಿಟಿ ಬೆಂಗಳೂರು-ಟಾಟಾ ನಗರ (ಜಾರ್ಖಂಡ್) ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಬಂದಿದ್ದು, ಬಸ್ ಗೆ ಗುದ್ದಿದೆ. ಇದರಿಂದಾಗಿ ಹಿಂಭಾಗ ನಜ್ಜು ಗುಜ್ಜಾಗಿದೆ.

ಬಿಎಂಟಿಸಿ ವಿಭಾಗೀಯ ನಿರ್ವಾಹಕ ಇಂಜಿನಿಯರ್ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. ಸುರಕ್ಷತೆಗೆ ಅಪಾಯ ತರುವ ಘಟನೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಸಂಘರ್ಷ: ಚಿಂತೆ ಬೇಡ.. Hormuz ನಲ್ಲಿ ಭಾರತಕ್ಕೆ ತೊಂದರೆ ಇಲ್ಲ: ಜೈಶಂಕರ್ ಗೆ Araghchi ಭರವಸೆ!

ವಿದೇಶ ಪ್ರವಾಸಕ್ಕೆ ತೆರಿಗೆ: ಸತ್ಯಾಂಶವೇ ಇಲ್ಲ.. ವರದಿ ತಳ್ಳಿಹಾಕಿದ ಪ್ರಧಾನಿ ಮೋದಿ

ಬಾಂಗ್ಲಾದೇಶ ವಿರುದ್ಧ ಸೋತ ಪಾಕಿಸ್ತಾನಕ್ಕೆ ಬರೆ ಹಾಕಿದ ICC, ಶೇ.40ರಷ್ಟು ದಂಡ, 8 WTC ಅಂಕ ಕಡಿತ

ಶಾಕಿಂಗ್: ರೈಲು ಢಿಕ್ಕಿಯಿಂದ ಮಕ್ಕಳ ರಕ್ಷಿಸಲು ದೇಹವನ್ನೇ ಗುರಾಣಿಯಾಗಿಸಿದ ಮಹಿಳೆ, Video

NEET-UG 2026 ಪ್ರಶ್ನೆ ಪತ್ರಿಕೆ ಲೀಕ್ ಕಿಂಗ್ ಪಿನ್, ಪುಣೆಯ ಕೆಮಿಸ್ಟ್ರಿ 'ಲೆಕ್ಚರರ್' ಬಂಧಿಸಿದ ಸಿಬಿಐ!

SCROLL FOR NEXT