ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಸ್ಕೂಟರ್ ಕಳ್ಳತನ ತನಿಖೆಯಲ್ಲಿ ಬಯಲಾಯ್ತು ಅಂತರರಾಜ್ಯ SUV ಕಳ್ಳತನ ಜಾಲ!

ಜನವರಿ 4 ರಂದು ಸ್ಕೂಟರ್ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸುವಾಗ, ಮರುದಿನ ಇಂದಿರಾ ಕ್ಯಾಂಟೀನ್ ಬಳಿ ಪೊಲೀಸರು ಸೈಯದ್ ನಿಜಾಮ್‌ನನ್ನು ಬಂಧಿಸಿ ವಶಕ್ಕೆ ಪಡೆದರು.

ಬೆಂಗಳೂರು: ದ್ವಿಚಕ್ರ ವಾಹನ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ಗೋವಿಂದಪುರ ಪೊಲೀಸರು ದೆಹಲಿಯಲ್ಲಿ ದುಬಾರಿ ಬೆಲೆಯ ಎಸ್‌ಯುವಿ ಕಾರುಗಳನ್ನು ಕದ್ದು ದಕ್ಷಿಣ ಭಾರತದಲ್ಲಿ ನಕಲಿ ದಾಖಲೆಗಳನ್ನು ಬಳಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಗೋವಿಂದಪುರ ಪೊಲೀಸರು ಬಯಲಿಗೆಳೆದಿದ್ದಾರೆ.

ಇಬ್ಬರನ್ನು ಬಂಧಿಸಿರುವ ಪೊಲೀಸರು 2.31 ಕೋಟಿ ಮೌಲ್ಯದ ಒಂಬತ್ತು ಕಾರುಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಫ್ರೇಜರ್ ಟೌನ್ ನಿವಾಸಿ ಮತ್ತು ಹೈದರಾಬಾದ್ ಮೂಲದ ಸೈಯದ್ ನಿಜಾಮ್ (37) ಮತ್ತು ತೆಲಂಗಾಣದ ಗೋಲ್ಕೊಂಡ ನಿವಾಸಿ ಮೊಹಮ್ಮದ್ ಮುಜಾಫರ್ (26) ಎಂದು ಗುರುತಿಸಲಾಗಿದೆ. ಇಬ್ಬರೂ ಕಾರು ಚಾಲಕರು ಮತ್ತು ಡೀಲರ್‌ಗಳಾಗಿದ್ದಾರೆ.

ಜನವರಿ 4 ರಂದು ಸ್ಕೂಟರ್ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸುವಾಗ, ಮರುದಿನ ಇಂದಿರಾ ಕ್ಯಾಂಟೀನ್ ಬಳಿ ಪೊಲೀಸರು ಸೈಯದ್ ನಿಜಾಮ್‌ನನ್ನು ಬಂಧಿಸಿ ವಶಕ್ಕೆ ಪಡೆದರು. ವಿಚಾರಣೆಯ ಸಮಯದಲ್ಲಿ, ದೆಹಲಿಯಲ್ಲಿರುವ ತನ್ನ ಸ್ನೇಹಿತ ಕಾರುಗಳನ್ನು ಕದ್ದು ದಕ್ಷಿಣ ಭಾರತದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲು ತನಗೆ ಒಪ್ಪಿಸುತ್ತಿದ್ದ ಎಂದು ಅವನು ಬಹಿರಂಗಪಡಿಸಿದ್ದಾನೆ.

ಜನವರಿ 14 ರಂದು ಹೈದರಾಬಾದ್‌ನಲ್ಲಿ ಬಂಧಿಸಲ್ಪಟ್ಟ ತನ್ನ ಸಹಚರ ಮೊಹಮ್ಮದ್ ಮುಜಾಫರ್‌ನ ಪಾತ್ರವನ್ನು ಅವನು ತಿಳಿಸಿದ್ದಾನೆ. ಕದ್ದ ಕಾರುಗಳನ್ನು ನಕಲಿ ದಾಖಲೆಗಳನ್ನು ಬಳಸಿ ಮಾರಾಟ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ದೆಹಲಿ ಮೂಲದ ಗ್ಯಾಂಗ್, ಗಾಜು ಒಡೆದು, ಕಾರುಗಳನ್ನು ಸ್ಟಾರ್ಟ್ ಮಾಡಲು ಅತ್ಯಾಧುನಿಕ ಯಂತ್ರಗಳನ್ನು ಬಳಸುವ ಮೂಲಕ ವಾಹನಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ನಂತರ ವಾಹನಗಳನ್ನು ಬೆಂಗಳೂರಿಗೆ ರಸ್ತೆ ಮೂಲಕ ಸಾಗಿಸಲಾಯಿತು. ನಗರದ HBR ಮತ್ತು HBCS ಲೇಔಟ್‌ಗಳಲ್ಲಿನ ಖಾಲಿ ಜಾಗಗಳಲ್ಲಿ ಒಂಬತ್ತು ಕಾರುಗಳನ್ನು ನಿಲ್ಲಿಸಲಾಗಿತ್ತು, ಅವುಗಳನ್ನು ದ್ವಿಚಕ್ರ ವಾಹನದೊಂದಿಗೆ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಾಹನಗಳ ಒಟ್ಟು ಮೌಲ್ಯ 2.31 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ದೆಹಲಿಯಲ್ಲಿ ಕಾರುಗಳನ್ನು ಕಳವು ಮಾಡಲಾಗಿದ್ದು, ಅಲ್ಲಿ FIR ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರ ಪೊಲೀಸರು ಆರೋಪಿಗಳು ಮತ್ತು ಇತರ ವಿವರಗಳ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಂಗನ ಜ್ವರಕ್ಕೆ ಈ ವರ್ಷ ಮೊದಲ ಸಾವು: ಶಿವಮೊಗ್ಗದಲ್ಲಿ 29 ವರ್ಷದ ಯುವಕ ಬಲಿ, ಆರೋಗ್ಯ ಇಲಾಖೆಗೆ ಮುನ್ನೆಚ್ಚರಿಕೆ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ 'ಸ್ಕ್ಯಾಮ್ ಲಾರ್ಡ್' ಪೋಸ್ಟ್: ಬಿಜೆಪಿ ವಿರುದ್ಧ ಕಾಂಗ್ರೆಸ್ ದೂರು ದಾಖಲು

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ 'ಗಾಮೋಸಾ' ಧರಿಸದೆ ಈಶಾನ್ಯಕ್ಕೆ ಅಗೌರವ: ಅಮಿತ್ ಶಾ

AIADMK ಭ್ರಷ್ಟಾಚಾರವನ್ನು ನಿಮ್ಮ ವಾಶಿಂಗ್ ಮೆಷಿನ್ ನಲ್ಲಿ ಸ್ವಚ್ಛಗೊಳಿಸಿದ್ದೀರಾ? ಬಿಜೆಪಿಗೆ ಎಂ.ಕೆ ಸ್ಟಾಲಿನ್ ಟಾಂಗ್

ಕೃತಕ ಬುದ್ಧಿಮತ್ತೆ, ಸಾಮಾಜಿಕ ಮಾಧ್ಯಮ ಜವಾಬ್ದಾರಿಯುತ ಬಳಕೆಗೆ ಜಾರಿಗೆ ತರಬೇಕಾದ ಕ್ರಮಗಳ ಕುರಿತು ಸಮಾಲೋಚನೆ: ಸಚಿವ ಪ್ರಿಯಾಂಕ್ ಖರ್ಗೆ

SCROLL FOR NEXT