ಹೆಚ್ ವಿಶ್ವನಾಥ್  
ರಾಜ್ಯ

ಮಹಿಳೆಯರಿಂದ ಶೋಷಣೆಗೆ ಒಳಗಾಗುವ ಪುರುಷರ ರಕ್ಷಣೆಗೆ ಪುರುಷ ಆಯೋಗ ರಚಿಸಬೇಕು: H ವಿಶ್ವನಾಥ್

ಹೆಣ್ಣು ಮಕ್ಕಳಿಗೆ ತೊಂದರೆ ಆದರೆ ಪೊಲೀ ಸರು ಬರ್ತಾರೆ. ಹೆಣ್ಮಕ್ಕಳ ರಕ್ಷಣೆಗೆ ಕಾನೂನು ಇದೆ. ತ್ವರಿತವಾಗಿ ಬಂಧಿಸುವ ಕೆಲಸ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಪುರುಷರ ಮೇಲೂ ದೌರ್ಜನ್ಯ ಆಗುತ್ತಿದೆ ಎಂದರು.

ಮೈಸೂರು: ಇತ್ತೀಚಿನ ದಿನಗಳಲ್ಲಿ ಹಲವು ಕಡೆ ಮಹಿಳೆಯರಿಂದ ಪುರುಷರ ಮೇಲೂ ದೌರ್ಜನ್ಯ ಆಗುತ್ತಿದೆ. ಪುರುಷರ ರಕ್ಷಣೆಗೆ ಕಾನೂನಿಗೆ ಪುರುಷ ಅಯೋಗ ರಚನೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ತೊಂದರೆ ಆದರೆ ಪೊಲೀ ಸರು ಬರ್ತಾರೆ. ಹೆಣ್ಮಕ್ಕಳ ರಕ್ಷಣೆಗೆ ಕಾನೂನು ಇದೆ. ತ್ವರಿತವಾಗಿ ಬಂಧಿಸುವ ಕೆಲಸ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಪುರುಷರ ಮೇಲೂ ದೌರ್ಜನ್ಯ ಆಗುತ್ತಿದೆ ಎಂದರು.

ಪೊಲೀಸ್ ಠಾಣೆಯಲ್ಲಿ ಪುರುಷರ ದೂರುಗಳಿಗೆ ಬೆಲೆ ಕೊಡುತ್ತಿಲ್ಲ. ಪುರುಷರಿಗಾಗಿಯೇ ಪುರುಷ ರಕ್ಷಣಾ ವೇದಿಕೆ ಸ್ಥಾಪಿಸಿದ್ದೇವೆ. ಪುರುಷರಿಗೆ ಆಗುವ ದೌರ್ಜನ್ಯವನ್ನ ತಡೆಯುವುದು ಈ ಸಂಘಟನೆಯ ಉದ್ದೇಶವಾಗಿದೆ, ಇದರಲ್ಲಿ ಮಹಿಳೆಯರೂ ಇದ್ದಾರೆ. ಪುರು ಷರ ಮೇಲಿನ ದೌರ್ಜನ್ಯ ತಡೆಯಲು ಈ ಸಮಿತಿ ಇರುತ್ತದೆ. ಇದನ್ನು ಕಾನೂನಾತ್ಮಕವಾಗಿಯೇ ನಾವು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಮಹಿಳಾ ಕಾನೂ ನುಗಳನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪುರುಷರಿಗೂ ಈಗ ರಕ್ಷಣೆ ಸಿಗಬೇ ಕಿದೆ. ಕೆಲ ಕಾನೂನುಗಳು ತಿದ್ದುಪಡಿ ಆಗಬೇಕು. ಮಹಿಳೆಯರಿಗೆ ಮಹಿಳಾ ಆಯೋಗ ಇದೆ. ಅದೇ ರೀತಿ ಪುರುಷರ ಆಯೋಗ ಕೂಡ ಆಗಬೇಕು. ಅದು ಕಾನೂನಾತ್ಮಕವಾಗಿಯೇ ಆಗಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್