ಸಚಿವ ಹೆಚ್.ಕೆ.ಪಾಟೀಲ್ 
ರಾಜ್ಯ

"ಚಾರಿತ್ರ್ಯವಧೆ ನಿಲ್ಲಿಸಿ, ಬಹಿರಂಗ ಕ್ಷಮೆ ಕೇಳಿ": ಬೊಮ್ಮಾಯಿ ವಿರುದ್ಧ ಎಚ್.ಕೆ ಪಾಟೀಲ್ ಆಕ್ರೋಶ; ಹಾಸ್ಯಾಸ್ಪದ ಎಂದ ಮಾಜಿ ಸಿಎಂ

ಬೊಮ್ಮಾಯಿ ಅವರ ಆರೋಪಕ್ಕೆ ಭಾನುವಾರ ಗದಗದಲ್ಲಿ ಭರ್ಜರಿ ಕೌಂಟರ್ ನೀಡಿದ ಎಚ್.ಕೆ. ಪಾಟೀಲ್, ತಮ್ಮದೇ ಹೆಸರು ಮತ್ತು ತಂದೆಯ ಹೆಸರನ್ನು ಹೊಂದಿರುವ ಇಬ್ಬರು ಸ್ಥಳೀಯ ನಾಗರಿಕರನ್ನು ಮಾಧ್ಯಮಗಳ ಮುಂದೆ ಖುದ್ದಾಗಿ ಹಾಜರುಪಡಿಸಿದರು.

ಬೆಂಗಳೂರು: ಗದಗ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಎಚ್.ಕೆ. ಪಾಟೀಲ್ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ನಡುವಿನ ರಾಜಕೀಯ ಜಟಾಪಟಿ ತೀವ್ರಗೊಂಡಿದೆ.

ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ಬೊಮ್ಮಾಯಿ ಬಹಿರಂಗ ಕ್ಷಮೆ ಕೇಳಬೇಕು ಎಂಬ ಎಚ್.ಕೆ. ಪಾಟೀಲ್ ಆಗ್ರಹವನ್ನು ಮಾಜಿ ಸಿಎಂ ಬೊಮ್ಮಾಯಿ ತಳ್ಳಿಹಾಕಿದ್ದು, "ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ಅವರ ಬೇಡಿಕೆ ಹಾಸ್ಯಾಸ್ಪದ" ಎಂದು ತಿರುಗೇಟು ನೀಡಿದ್ದಾರೆ.

ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ, ಗದಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಗದಗ ಶಾಸಕ ಹಾಗೂ ಸಚಿವ ಎಚ್.ಕೆ. ಪಾಟೀಲ್ (ಹನುಮಂತಗೌಡ ಕೃಷ್ಣಗೌಡ ಪಾಟೀಲ್) ಅವರ ಹೆಸರು ಮೂರು ಬಾರಿ ದಾಖಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಬೊಮ್ಮಾಯಿ ಅವರ ಆರೋಪಕ್ಕೆ ಭಾನುವಾರ ಗದಗದಲ್ಲಿ ಭರ್ಜರಿ ಕೌಂಟರ್ ನೀಡಿದ ಎಚ್.ಕೆ. ಪಾಟೀಲ್, ತಮ್ಮದೇ ಹೆಸರು ಮತ್ತು ತಂದೆಯ ಹೆಸರನ್ನು ಹೊಂದಿರುವ ಇಬ್ಬರು ಸ್ಥಳೀಯ ನಾಗರಿಕರನ್ನು ಮಾಧ್ಯಮಗಳ ಮುಂದೆ ಖುದ್ದಾಗಿ ಹಾಜರುಪಡಿಸಿದರು.

ಮೂವರ ಆಧಾರ್ ಕಾರ್ಡ್‌ಗಳನ್ನು ಪ್ರದರ್ಶಿಸಿದ ಸಚಿವರು, "ಮತದಾರರ ಪಟ್ಟಿಯಲ್ಲಿರುವುದು ಕಳ್ಳ ಹೆಸರಲ್ಲ. ಅವರೂ ಸಹ ನಮ್ಮ ಕ್ಷೇತ್ರದ ಗೌರವಾನ್ವಿತ ನಾಗರಿಕರು. ಬಸವರಾಜ ಬೊಮ್ಮಾಯಿ ಅನುಭವಿ ಮತ್ತು ಬುದ್ಧಿವಂತ ರಾಜಕಾರಣಿ. ಆದರೂ ನನ್ನ ವ್ಯಕ್ತಿತ್ವ ಹರಣ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿರುವುದು ಆಶ್ಚರ್ಯ ತಂದಿದೆ. ಇಂತಹ ಕೀಳು ಮಟ್ಟದ ರಾಜಕೀಯಕ್ಕಾಗಿ ನನ್ನ ಚಾರಿತ್ರ್ಯ ವಧೆ ಮಾಡಲು ಯತ್ನಿಸಿದ್ದಾರೆ. ತಮ್ಮ ಗೌರವವನ್ನು ಉಳಿಸಿಕೊಳ್ಳಬೇಕೆಂದರೆ ಗದಗ ಹಾಗೂ ಕರ್ನಾಟಕದ ಜನರ ಬಳಿ ಕ್ಷಮೆ ಕೇಳಬೇಕು ಒತ್ತಾಯಿಸಿದರು.

ಈ ನಡುವೆ ಸಚಿವರ ಕ್ಷಮಾಪಣೆಯ ಬೇಡಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿದ ಬಸವರಾಜ ಬೊಮ್ಮಾಯಿ, ನಾನು ಹೊಂದಿದ್ದ ದಾಖಲೆಗಳ ಆಧಾರದ ಮೇಲೆಯೇ ಹೇಳಿಕೆ ನೀಡಿದ್ದೇನೆ. ಯಾವುದೇ ವೈಯಕ್ತಿಕ ಆರೋಪ ಮಾಡಿಲ್ಲ. ಹೀಗಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ.

ಗದಗ ಕ್ಷೇತ್ರದಲ್ಲಿ 2,365 ಹಾಗೂ ರೋಣ ಕ್ಷೇತ್ರದಲ್ಲಿ 3,804 ದ್ವಿಪ್ರತಿ (ಡ್ಯೂಪ್ಲಿಕೇಟ್) ಮತದಾರರ ಹೆಸರುಗಳು ಇವೆ" ಎಂದು ಹೊಸ ಬಾಂಬ್ ಸಿಡಿಸಿದರು. ಅಲ್ಲದೆ, ರಾಜ್ಯದ ಮತದಾರರ ಪಟ್ಟಿಯಲ್ಲಿನ ಈ ಲೋಪದೋಷಗಳ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳು ತಕ್ಷಣವೇ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕು ಎಂದೂ ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!

ಮಹಾ ದುರಂತಕ್ಕೆ ರೋಚಕ ಟ್ವಿಸ್ಟ್: ಐಫೋನ್​ EMI ಅನ್ನೋದೇ ಕಟ್ಟು ಕಥೆ; ಬೆಟ್ಟದಿಂದ ಬಿದ್ದು ಪ್ರಾಣಬಿಟ್ಟ ಮೂವರ ಬಗ್ಗೆ ಸಂಬಂಧಿ ಸ್ಫೋಟಕ ಹೇಳಿಕೆ!

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ CJP ಸಜ್ಜು; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ