ರಾಜ್ಯ

200 ಬಾರಿ I Will Never Speak Kannada ಬರೆಯುವ ಶಿಕ್ಷೆ: ಖಾಸಗಿ ಶಾಲೆ ವಿರುದ್ಧ ಭುಗಿಲೆದ್ದ ಆಕ್ರೋಶ; Video

ಶಾಲಾ ಆವರಣದಲ್ಲಿ ವಿದ್ಯಾರ್ಥಿಯೊಬ್ಬ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಕ್ರೂರ ಶಿಕ್ಷೆ ನೀಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೆಂಗೇರಿಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

ಬೆಂಗಳೂರು: ಶಾಲಾ ಆವರಣದಲ್ಲಿ ವಿದ್ಯಾರ್ಥಿಯೊಬ್ಬ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಕ್ರೂರ ಶಿಕ್ಷೆ ನೀಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೆಂಗೇರಿಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ I Will Never Speak Kannada In This Campus ಎಂದು ನೋಟ್‌ಬುಕ್‌ನಲ್ಲಿ ಎಂದು 200 ಬಾರಿ ಬರೆಯುವಂತೆ ಮಗುವಿನ ಮೇಲೆ ಒತ್ತಡ ಹೇರಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿವೆ.

ಶಾಲಾ ಸಮಯದಲ್ಲಿ ಮಗು ಕನ್ನಡ ಮಾತನಾಡಿದ್ದಕ್ಕೆ ಶಿಕ್ಷಕರು, ಆತನಿಗೆ ಮಾನಸಿಕ ಹಿಂಸೆ ನೀಡಿ ಇಂಗ್ಲಿಷ್‌ನಲ್ಲೇ ಮಾತನಾಡುವಂತೆ ಬಲವಂತ ಮಾಡಿದ್ದಾರೆ. ಬೆಂಗಳೂರು ಇಂದು ಕೇವಲ ಕನ್ನಡಿಗರಿಗಷ್ಟೇ ಸೀಮಿತವಾಗಿಲ್ಲ, ದೇಶದ ಎಲ್ಲೆಡೆಯಿಂದ ಬಂದು ಜೀವನ ಕಟ್ಟಿಕೊಂಡಿದ್ದಾರೆ. ಕೆಲವು ಆಫೀಸ್‌ಗಳು, ಶಾಲೆ-ಕಾಲೇಜುಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ನಮ್ಮದೇ ನೆಲದಲ್ಲಿ ಕನ್ನಡ ಮಾತನಾಡಲು ನಮ್ಮ ಮಕ್ಕಳು ಭಯಪಡಬೇಕಾದ ಪರಿಸ್ಥಿತಿ ಬಂದಿದೆಯೇ? ಎಂದು ಕನ್ನಡಪರ ಸಂಘಟನೆಗಳು ಶಾಲೆಯ ವಿರುದ್ಧ ಕಿಡಿಕಾರಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿಗೆ ದಿನಕ್ಕೊಂದು ಶಾಕ್; ನಂದೀಗ್ರಾಮದ ಬಳಿಕ ಕೈಕೊಟ್ಟ ರೆಜಿನಗರ ಉಪಚುನಾವಣೆ ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ; ನಾಮಪತ್ರ ವಾಪಸ್

ವಿದೇಶಿ ನೌಕರರ ನೇಮಕಾತಿಗೆ ಅಮೆರಿಕ ಕತ್ತರಿ: H-1B ವೀಸಾ ನಿರ್ಬಂಧ ಮತ್ತೊಂದು ವರ್ಷಕ್ಕೆ ಮುಂದುವರಿಕೆ..!

UPI MDR: ಗ್ರಾಹಕರಿಗೆ ಮತ್ತೊಂದು ತಲೆ ಬಿಸಿ; ಇನ್ನು ಮುಂದೆ ಪೆಟ್ರೋಲ್ ಪಂಪ್ ಗಳಲ್ಲಿ 2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿ ಬಂದ್!

ಕನ್ನಡ ವರ್ಣಮಾಲೆ ಬರೆಯಲು ಬಾರದ ವಿದ್ಯಾರ್ಥಿಗಳ ಕಂಡು ಪ್ರದೀಪ್ ಈಶ್ವರ್ ಶಾಕ್: ಶಾಸಕರ ಸೂಚನೆಯಂತೆ 180 ಶಿಕ್ಷಕರಿಗೆ BEO ನೋಟಿಸ್!

ಪರೀಕ್ಷೆಯ ವೇಳೆ ChatGPT ಬಳಕೆ: ಸಿಕ್ಕಿ ಬಿದ್ದ IIT ವಿದ್ಯಾರ್ಥಿ ಆತ್ಮಹತ್ಯೆ