ಮೆಟ್ರೋದಲ್ಲಿ ಹಾಡು ಹಾಡಿದ ಯುವತಿಯರು(ಸಂಗ್ರಹ ಚಿತ್ರ) 
ರಾಜ್ಯ

Namma Metro: ಮೆಟ್ರೋ ಪ್ರಯಾಣಿಕರೇ ಹುಷಾರ್; ಹುಚ್ಚಾಟ ಆಡಿದ್ರೆ ಬೀಳುತ್ತೆ 5 ರಿಂದ 25 ಸಾವಿರ ರೂ.ವರೆಗೆ ದಂಡ!

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ನಂತರ, ನಮ್ಮ ಮೆಟ್ರೋದಲ್ಲಿ ಪರಿಷ್ಕೃತ ದಂಡವನ್ನು ಜಾರಿಗೊಳಿಸಲಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಹುಚ್ಚಾಟ ಆಡುವ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಲು ಬಿಎಂಆರ್‌ಸಿಎಲ್(BMRCL) ದಂಡವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ನಂತರ, ನಮ್ಮ ಮೆಟ್ರೋದಲ್ಲಿ ಪರಿಷ್ಕೃತ ದಂಡವನ್ನು ಜಾರಿಗೊಳಿಸಲಾಗಿದೆ.

ಮೆಟ್ರೋ ರೈಲುಗಳ ಒಳಗೆ ಅಥವಾ ನಿಲ್ದಾಣದ ಆವರಣದಲ್ಲಿ ಹೆಡ್‌ಫೋನ್‌ಗಳನ್ನು ಬಳಸದೆ ಜೋರಾಗಿ ಸಂಗೀತ ಅಥವಾ ವಿಡಿಯೋಗಳನ್ನು ನೋಡುವ ಪ್ರಯಾಣಿಕರಿಗೆ 2,500 ರೂ. ವರೆಗೆ ದಂಡ ವಿಧಿಸುವುದಾಗಿ ಬಿಎಂಆರ್ ಸಿಎಲ್ ಘೋಷಿಸಿದೆ.

ಮೆಟ್ರೋ ಟ್ರ್ಯಾಕ್​ಗೆ ಜಿಗಿಯುವುದು, ಟ್ರ್ಯಾಕ್ ಮೇಲೆ ಓಡಾಡುವುದು, ಟಿಕೆಟ್, ಪಾಸ್ ದುರ್ಬಳಕೆ ಮಾಡಿಕೊಂಡ್ರೆ 5 ರಿಂದ 25 ಸಾವಿರ ರೂ. ವರೆಗೆ ವಿಧಿಸಲು ಬಿಎಂಆರ್ ಸಿಎಲ್ ಮುಂದಾಗಿದೆ.

ಅಲ್ಲದೇ ಮೆಟ್ರೋ ರೈಲು ಮತ್ತು ಸ್ಟೇಷನ್​ನಲ್ಲಿ ಅನುಮತಿ ಇಲ್ಲದೆ ವ್ಯಾಪಾರ ಮಾಡಿದ್ರೆ, ರೀಲ್ಸ್ ಮಾಡುವುದು, ಊಟ, ತಿಂಡಿ ಸೇವನೆ, ನೆಲದ ಮೇಲೆ ಕುಳಿತುಕೊಳ್ಳುವುದು, ಲೌಡ್ ಮ್ಯೂಸಿಕ್ ಹಾಕಿ ಪ್ರಯಾಣಿಕರಿಗೆ ತೊಂದರೆ ನೀಡಿದ್ರೆ, 500 ರೂಪಾಯಿ ಮಾತ್ರ ದಂಡ ವಿಧಿಸುತ್ತಿದ್ದ ನಮ್ಮ ಮೆಟ್ರೋ ಇದೀಗ 2500 ರಿಂದ 10,000 ರೂಪಾಯಿ ವರೆಗೆ ದಂಡ ವಿಧಿಸಲು ನಿರ್ಧರಿಸಿದೆ.

ಇದಷ್ಟೇ ಅಲ್ಲದೇ ನಮ್ಮ ಮೆಟ್ರೋ ಸ್ಟೇಷನ್​ ಗೋಡೆಗಳ ಮೇಲೆ ಬರೆಯುವುದು, ಪೋಸ್ಟರ್ ಅಂಟಿಸುವುದು, ಚಿತ್ರ ಬಿಡಿಸುವುದು ಮಾಡಿದ್ರೆ ಈ ಹಿಂದೆ ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು, ಇದೀಗ ಈ ನಿಯಮ ಬದಲಾಗಿದ್ದು ಇನ್ಮುಂದೆ ಬಿಎಂಆರ್​ಸಿಎಲ್​ 10,000 ಸಾವಿರ ರೂಪಾಯಿ ದಂಡ ವಿಧಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಮೆಟ್ರೋ ಹಳಿಗಳ ಮೇಲೆ ಅನಧಿಕೃತವಾಗಿ ಓಡಾಡುವುದು ಅಥವಾ ಟ್ರ್ಯಾಕ್ ಮೇಲೆ ಜಿಗಿಯುವುದು ಮಾಡಿದರೆ ಈ ಹಿಂದೆ ಕಡಿಮೆ ಇದ್ದ ದಂಡದ ಮೊತ್ತವನ್ನು ಇನ್ಮುಂದೆ 5,000 ರೂ.ನಿಂದ 25,000 ರೂ.ವರೆಗೆ ಏರಿಕೆ ಮಾಡಲಾಗಿದೆ.

ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ಸಾರ್ವಜನಿಕರ ಸುರಕ್ಷತೆ ಕಾಯ್ದುಕೊಳ್ಳಲು ಮತ್ತು ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ಮೆಟ್ರೋ ಸುರಕ್ಷತೆಗೆ ಧಕ್ಕೆ ತರುವಂತಹ ಗಂಭೀರ ತಪ್ಪುಗಳಿಗೆ ಇನ್ಮುಂದೆ ಅತ್ಯಂತ ದುಬಾರಿ ದಂಡ ತೆರಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನವೀಕೃತಗೊಂಡ ರಾಜ್ಯದ 4 ರೈಲ್ವೆ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ

ದೀದಿಗೆ ಗಾಯದ ಮೇಲೆ ಬರೆ: ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಮೂವರು TMC ಮಾಜಿ ಸಂಸದರು ಮತ್ತೆ ರಾಜ್ಯಸಭೆಗೆ ಅವಿರೋಧ ಆಯ್ಕೆ!

ಪಂಜಾಬ್ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕ ಮನೀಶ್ ತಿವಾರಿಗೆ ಬಿಜೆಪಿ ಗಾಳ? Video

ಅಕ್ರಮ ಸಂಬಂಧಕ್ಕೆ ಅಡ್ಡಿ: ದೇವಸ್ಥಾನಕ್ಕೆಂದು ಕರೆದೊಯ್ದು ಪತಿಯನ್ನೇ ಕೊಂದ ಪಾಪಿ ಪತ್ನಿ!

'ಜುಲೈ 20ರ ನಂತರ ನಿಮ್ಮನ್ನು ದೆವ್ವವಾಗಿ ಕಾಡುತ್ತೇನೆ': ವಿದ್ಯಾರ್ಥಿಗಳಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾದ ವಾಂಗ್‌ಚುಕ್!