ಬೆಂಗಳೂರು: ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ; ಕೆಲಕಾಲ ಸೇವೆಯಲ್ಲಿ ವ್ಯತ್ಯಯ!

ಬಿಎಂಆರ್‌ಸಿಎಲ್ (BMRCL) ಹೇಳಿಕೆ ಪ್ರಕಾರ, ನಿಲ್ದಾಣದ ನಿಯಂತ್ರಕರು ಮತ್ತು ಭದ್ರತಾ ಸಿಬ್ಬಂದಿ ನಿಗದಿತ ತುರ್ತು ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ ತಕ್ಷಣವೇ ಸ್ಪಂದಿಸಿದರು.
Namma metro
ನಮ್ಮ ಮೆಟ್ರೋ (ಪ್ರಾತಿನಿಧಿಕ ಚಿತ್ರ)
Updated on

ಬೆಂಗಳೂರು: ಇಲ್ಲಿನ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಶನಿವಾರ ಮಹಿಳೆಯೊಬ್ಬರು ಹಳಿ ಮೇಲೆ ಜಿಗಿದಿದ್ದರಿಂದ, 'ಗ್ರೀನ್ ಲೈನ್' ಮೆಟ್ರೋ ಸೇವೆಯಲ್ಲಿ ಸ್ವಲ್ಪ ಕಾಲ ವ್ಯತ್ಯಯ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ಮಧ್ಯಾಹ್ನ ಸುಮಾರು 12.25ರ ಸುಮಾರಿಗೆ ಸಂಭವಿಸಿದೆ.

ಅಧಿಕಾರಿಗಳ ಪ್ರಕಾರ, ಮಹಿಳೆ ಸಮೀಪಿಸುತ್ತಿರುವ ರೈಲಿನ ಮುಂದೆ ಹಳಿಗೆ ಹಾರಿದ್ದಾರೆ. ಇದನ್ನು ನೋಡಿದ ಕೂಡಲೇ ಎಚ್ಚೆತ್ತ ರೈಲು ಚಾಲಕ ತಕ್ಷಣವೇ ಬ್ರೇಕ್ ಹಾಕಿದ್ದಾರೆ ಮತ್ತು ತುರ್ತು ಟ್ರಿಪ್ ಸಿಸ್ಟಮ್ (ಇಟಿಎಸ್) ಸಕ್ರಿಯಗೊಂಡ ನಂತರ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಸದ್ಯ ಯಾವುದೇ ಗಾಯಗಳಾಗಿಲ್ಲ.

ಬಿಎಂಆರ್‌ಸಿಎಲ್ (BMRCL) ಹೇಳಿಕೆ ಪ್ರಕಾರ, ನಿಲ್ದಾಣದ ನಿಯಂತ್ರಕರು ಮತ್ತು ಭದ್ರತಾ ಸಿಬ್ಬಂದಿ ನಿಗದಿತ ತುರ್ತು ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ ತಕ್ಷಣವೇ ಸ್ಪಂದಿಸಿದರು.

'ಪ್ರಯಾಣಿಕರನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ರಕ್ಷಿಸಲಾಯಿತು. ಈ ಘಟನೆಯಿಂದಾಗಿ ಮೆಟ್ರೋ ಸೇವೆಗಳಲ್ಲಿ ಸುಮಾರು 10 ನಿಮಿಷಗಳ ವಿಳಂಬವಾಯಿತು' ಎಂದು ಅದು ತಿಳಿಸಿದೆ.

Namma metro
ನಮ್ಮ ಮೆಟ್ರೋ ನಿಲ್ದಾಣದ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ನೇರಳೆ ಮಾರ್ಗ ಸಂಚಾರದಲ್ಲಿ ವ್ಯತ್ಯಯ

ಹಳಿಗಳನ್ನು ತೆರವುಗೊಳಿಸಿ, ನಿಗದಿತ ಎಲ್ಲ ಸುರಕ್ಷತಾ ಕ್ರಮಗಳನ್ನು ಪೂರೈಸಿದ ನಂತರ ಮಧ್ಯಾಹ್ನ 12.34ಕ್ಕೆ ರೈಲು ಸಂಚಾರವು ಎಂದಿನಂತೆ ಪುನರಾರಂಭಗೊಂಡಿತು ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com