ಹತ್ಯೆಗೀಡಾದ ಯುವತಿ ಲಾವಣ್ಯ, ಆರೋಪಿ ಚೇತನ್ 
ರಾಜ್ಯ

ಬಂಟ್ವಾಳ: ಬಸ್ ನಿಲ್ದಾಣದಲ್ಲಿ ಮಚ್ಚಿನಿಂದ ಯುವತಿ ಹತ್ಯೆಗೈದ ಯುವಕನ ಬಂಧನ; ವಿಷ ಸೇವನೆಯಿಂದ ಪರಿಸ್ಥಿತಿ ಗಂಭೀರ! Video

ಬಂಟ್ವಾಳ ತಾಲೂಕಿನ ಕಕ್ಕೆಪದವು ನಿವಾಸಿಯಾಗಿದ್ದ ಹಾಗೂ ಕಲ್ಲಡ್ಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಲಾವಣ್ಯ ಅವರನ್ನು ಚೇತನ್ ಗುರುವಾರ ಸಂಜೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದನು.

ಮಂಗಳೂರು: ಹಾಡಹಗಲೇ ಯುವತಿಯ ಕಗ್ಗೊಲೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಬೆಚ್ಚಿ ಬಿದ್ದಿದೆ. ಬಂಟ್ವಾಳದ ಬಿ.ಸಿ. ರೋಡ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಲಾವಣ್ಯ (21) ಎಂಬ ಯುವತಿಯನ್ನು ಹತ್ಯೆಗೈದ ಆರೋಪಿ ಚೇತನ್ (22) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿಯ ಒಡಿಲ್ನಾಳ ನಿವಾಸಿಯಾಗಿರುವ ಚೇತನನನ್ನು ಶುಕ್ರವಾರ ಮಂಗಳೂರಿನ ಪಚ್ಚನಾಡಿಯ ಬಳಿ ತನ್ನ ಕಾರಿನ ಪಕ್ಕದಲ್ಲಿ ಕುಳಿತಿದ್ದಾಗ ಬಂಧಿಸಲಾಯಿತು. ಘಟನೆಯ ನಂತರ ಆತ ಇಲಿ ಪಾಷಾಣ (ವಿಷ) ಸೇವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಆತನನ್ನು ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂಟ್ವಾಳ ತಾಲೂಕಿನ ಕಕ್ಕೆಪದವು ನಿವಾಸಿಯಾಗಿದ್ದ ಹಾಗೂ ಕಲ್ಲಡ್ಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಲಾವಣ್ಯ ಅವರನ್ನು ಚೇತನ್ ಗುರುವಾರ ಸಂಜೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದನು. ಸಂತ್ರಸ್ತೆಯ ದೂರದ ಸಂಬಂಧಿಯಾಗಿದ್ದ ಚೇತನ್ ಆಕೆಯನ್ನು ಪ್ರೀತಿಸುತ್ತಿದ್ದನು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದೇ ವೇಳೆ, ಅವರಿಬ್ಬರೂ ಹಿಂದೆ ಪ್ರೇಮ ಸಂಬಂಧ ಹೊಂದಿದ್ದರು ಆದರೆ ಸುಮಾರು 4 ವರ್ಷಗಳ ಹಿಂದೆ ಬೇರ್ಪಟ್ಟಿದ್ದರು ಎಂದು ಆಕೆಯ ಸಂಬಂಧಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಿ.ಸಿ. ರೋಡ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಚೇತನ್ ಲಾವಣ್ಯ ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ, ಆರೋಪಿಯನ್ನು ಪತ್ತೆಹಚ್ಚಲು ಬಂಟ್ವಾಳ ನಗರ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದರು. ಬಳಿಕ ಆತನನ್ನು ಮಂಗಳೂರಿನ ಪಚ್ಚನಾಡಿಯಲ್ಲಿ ಬಂಧಿಸಲಾಯಿತು. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)2023ರ ಸೆಕ್ಷನ್ 78, 103 ಮತ್ತು 106ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜುಲೈ 20ರ ನಂತರ ನಿಮ್ಮನ್ನು ದೆವ್ವವಾಗಿ ಕಾಡುತ್ತೇನೆ: ವಿದ್ಯಾರ್ಥಿಗಳಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾದ ವಾಂಗ್‌ಚುಕ್!

VIDEO: ವಾರಣಾಸಿಯಲ್ಲಿ ವಿಚಿತ್ರ ಕ್ರೌರ್ಯ; ಅರೆ ಬೆತ್ತಲಾಗಿ ಮನೆಗಳಿಗೆ ನುಗ್ಗಿ, ಜನರಿಗೆ ಕಚ್ಚಿದ ವಿದೇಶಿ ಪ್ರಜೆ!

ಸುರತ್ಕಲ್: ಸಮುದ್ರದ ಅಲೆಗಳ ಹೊಡೆತಕ್ಕೆ ಮೀನುಗಾರಿಕಾ ದೋಣಿ ಪಲ್ಟಿ; ಕೂದಲೆಳೆ ಅಂತರದಲ್ಲಿ 6 ಮೀನುಗಾರರ ರಕ್ಷಣೆ

ಅಮೆರಿಕದ ದಾಳಿಯಿಂದ ಇರಾನ್‌ನ ಚಬಹಾರ್ ಬಂದರಿಗೆ ಹಾನಿ; ಕುಸಿಯುತ್ತಿರುವ ಕಣ್ಗಾವಲು ಟವರ್, ಫೋಟೋ ಹಂಚಿಕೊಂಡ ಪೀಟ್ ಹೆಗ್ಸೆತ್!

ಮೊದಲು ನಿಮ್ಮ ಹೆಸರಿನಿಂದ ವೈದ್ಯ ಪದವನ್ನು ಕಿತ್ತು ಬಿಸಾಕಿ: ಡಾಕ್ಟರ್​ಗೆ ಸುಪ್ರೀಂ ಕೋರ್ಟ್ ಚೀಮಾರಿ; ಇಲ್ಲಿದೆ ಕಾರಣ...