ಪ್ರಧಾನಿ ಮೋದಿ 
ರಾಜ್ಯ

ನವೀಕೃತಗೊಂಡ ರಾಜ್ಯದ 4 ರೈಲ್ವೆ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ

ಅಮೃತ ಭಾರತ್‌ ನಿಲ್ದಾಣ ಯೋಜನೆಯಡಿ ನವೀಕೃತಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಕೊಪ್ಪಳ, ಧಾರವಾಡ ಜಿಲ್ಲೆಯ ಅಳ್ನಾವರ ಮತ್ತು ಬಾಗಲಕೋಟೆಯ ಬಾದಾಮಿ ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು.

ಬೆಂಗಳೂರು: ಅಮೃತ ಭಾರತ್ ನಿಲ್ದಾಣ ಯೋಜನೆ(ABSS) ಅಡಿಯಲ್ಲಿ ನವೀಕೃತಗೊಂಡ ರಾಜ್ಯದ ನಾಲ್ಕು ರೈಲು ನಿಲ್ದಾಣಗಳು ಸೇರಿ ದೇಶಾದ್ಯಂತ ಒಟ್ಟು 75 ರೈಲ್ವೆ ಸ್ಟೇಷನ್​​ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವರ್ಚುವಲ್​​ ಮೂಲಕ ಉದ್ಘಾಟಿಸಿದರು.

ಅಮೃತ ಭಾರತ್‌ ನಿಲ್ದಾಣ ಯೋಜನೆಯಡಿ ನವೀಕೃತಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಕೊಪ್ಪಳ, ಧಾರವಾಡ ಜಿಲ್ಲೆಯ ಅಳ್ನಾವರ ಮತ್ತು ಬಾಗಲಕೋಟೆಯ ಬಾದಾಮಿ ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ಮೋದಿ ಇಂದು ಪಂಜಾಬ್​ನ ಜಲಂಧರ್​ ಕಂಟೋನ್ಮೆಂಟ್​​ ರೈಲು ನಿಲ್ದಾಣದಿಂದ​ ಉದ್ಘಾಟಿಸಿದರು.

ನೈಋತ್ಯ ರೈಲ್ವೆ(SWR) ಬಂಟ್ವಾಳದಲ್ಲಿ 26.18 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಆಧುನೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ನವೀಕರಿಸಿದ ನಿಲ್ದಾಣವು ಪುರುಷರು ಮತ್ತು ಮಹಿಳೆಯರಿಗೆ ವೇಟಿಂಗ್ ಕೊಠಡಿಗಳು, ಶಿಶು ಶುಶ್ರೂಷಾ ಕ್ಯುಬಿಕಲ್, ಅಡುಗೆಮನೆಯೊಂದಿಗೆ ಕೆಫೆಟೇರಿಯಾ, ಅಡುಗೆ ಮಳಿಗೆಗಳು, ಬುಕಿಂಗ್ ಕೌಂಟರ್‌ಗಳು, ಆಸನ ವ್ಯವಸ್ಥೆಗಳು, ರಿಫ್ರೆಶ್‌ಮೆಂಟ್ ಕೊಠಡಿ, ಪ್ರವೇಶ ದ್ವಾರಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ದಕ್ಷಿಣ ಕನ್ನಡದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೋಡೆಗಳ ಮೇಲೆ ವರ್ಣಚಿತ್ರಗಳು ಮತ್ತು ವಾಸ್ತುಶಿಲ್ಪದೊಂದಿಗೆ 400 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ಶೆಲ್ಟರ್‌ಗಳು, ಪ್ರಯಾಣಿಕರ ಮಾರ್ಗದರ್ಶನವನ್ನು ಸುಧಾರಿಸಲು, ಕೋಚ್ ಸೂಚನಾ ಫಲಕಗಳು, ರೈಲು ಸೂಚನಾ ಫಲಕಗಳು, ನಿಲ್ದಾಣದ ಗಡಿಯಾರಗಳೊಂದಿಗೆ ಆಧುನೀಕರಣಗೊಳಿಸಲಾಗಿದೆ.

ಬಾದಾಮಿ ರೈಲು ನಿಲ್ದಾಣ

ಅಮೃತ್ ಭಾರತ್ ಯೋಜನೆಯಡಿ ಬಾದಾಮಿ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ ನೀಡಲಾಗಿದ್ದು, 15.10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗಿದೆ. 2 ಫ್ಲಾಟ್​​ಫಾರಂಗಳ ಸಂಖ್ಯೆಯನ್ನು 3ಕ್ಕೆ ಏರಿಸಲಾಗಿದ್ದು, ಟಿಕೆಟ್​​ ಕೌಂಟರ್​​ಗಳ ಸಂಕ್ಯೆಯೂ ಒಂದರಿಂದ ನಾಲ್ಕಕ್ಕೆ ಹೆಚ್ಚಿಸಲಾಗಿದೆ.

ವಿಕಲಚೇತನರಿಗೆ, ದೃಷ್ಟಿಹೀನರಿಗಾಗಿ ಪ್ರತ್ಯೇಕ ಟಿಕೆಟ್ ಕೌಂಟರ್ ನಿರ್ಮಿಸಲಾಗಿದೆ. ನಿಲ್ದಾಣದಲ್ಲಿ 200 ಚಮೀ ಹೊಸ ಕಟ್ಟಡ ನಿರ್ಮಿಸಲಾಗಿದ್ದು, 12 ಮೀಟರ್​​ ಅಗಲದ ಮೇಲ್ಸೇತುವೆ, ಮುಂಭಾಗದಲ್ಲಿ ದೀಪಾಲಂಕಾರ, ದಿವ್ಯಾಂಗ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿ ಸೌಲಭ್ಯ, ಕುಡಿಯುವ ನೀರಿನ ಬೂತ್, ದೃಷ್ಟಿಹೀನರಿಗೆ ಸ್ಪರ್ಷಮಾರ್ಗಗಳು, ಕಾಯ್ದಿರಿಸಿದ ಪಾರ್ಕಿಂಗ್, ವಿಶೇಷ ಶೌಚಾಲಯಗಳು, 2 ಪ್ರಯಾಣಿಕರ ಲಿಫ್ಟ್​​ಗಳು, ತಾಯಂದಿರಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ಒಳಗೊಂಡಂತೆ 1 ಹವಾನಿಯಂತ್ರಿತ ಕಾಯುವ ಕೊಠಡಿ ಸೇರಿ ಒಟ್ಟು ಐದು ಕಾಯುವ ಕೊಠಡಿಗಳು, ಸೋಲಾರ್ ವ್ಯವಸ್ಥೆ, ವೈಫೈ ಸೌಲಭ್ಯ ಸೇರಿ ಹಲವು ಆಧುನಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಕೊಪ್ಪಳ ರೈಲು ನಿಲ್ದಾಣಕ್ಕೆ ಹೈಟೆಕ್​​ ಸ್ಪರ್ಶ

21.14 ಕೋಟಿ ವೆಚ್ಚದಲ್ಲಿ ಕೊಪ್ಪಳ ರೈಲು ನಿಲ್ದಾಣವನ್ನು ನವೀಕರಣಗೊಳಿಸಲಾಗಿದ್ದು, ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು 1508 ಚದರ ಮೀಟರ್ ವಿಸ್ತೀರ್ಣದ ಜಿ+1 ಹೊಸ ನಿಲ್ದಾಣ ಕಟ್ಟಡ ನಿರ್ಮಿಸಲಾಗಿದೆ.ಟಿಕೆಟ್ ಬುಕ್ಕಿಂಗ್ ಕಚೇರಿ, ನಿರೀಕ್ಷಣಾ ಕೊಠಡಿಗಳು, 600 ಚದರ ಮೀಟರ್ ವ್ಯಾಪ್ತಿಯ ಸುತ್ತಾಟ ಪ್ರದೇಶ ಅಭಿವೃದ್ಧಿಪಡಿಸಲಾಗಿದೆ. ಪ್ಲಾಟ್‌ಫಾರ್ಮ್‌ಗಳಲ್ಲಿ ಶೆಲ್ಟರ್ ನಿರ್ಮಾಣ, 12 ಮೀಟರ್ ಅಗಲದ ಹೊಸ ಕೇಂದ್ರ ಫುಟ್ ಓವರ್ ಬ್ರಿಡ್ಜ್ , ಪ್ರಯಾಣಿಕರ ಓಡಾಟಕ್ಕೆ 2 ಲಿಫ್ಟ್‌ಗಳು ಮತ್ತು 2 ಎಸ್ಕಲೇಟರ್‌ಗಳ ಸೌಲಭ್ಯ, ರೈಲು ನಿಲ್ದಾಣ ಹಾಗೂ ಸುತ್ತಲೂ ಎಲ್‌ಇಡಿ ಆಧಾರಿತ ಬೆಳಕಿನ ವ್ಯವಸ್ಥೆ, ಸುಲಭ್ ಶೌಚಾಲಯ, ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ, ಹವಾನಿಯಂತ್ರಿತ ಕಾಯುವ ಕೋಣೆ, ಡಿಜಿಟಲ್ ಲಾಕರ್, ಶಿಶು ಆಹಾರ ಕೋಣೆಗಳ ಸೌಲಭ್ಯಗಳು ಈ ನಿಲ್ದಾಣದಲ್ಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಂಜಾಬ್ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕ ಮನೀಶ್ ತಿವಾರಿಗೆ ಬಿಜೆಪಿ ಗಾಳ? Video

ದೀದಿಗೆ ಗಾಯದ ಮೇಲೆ ಬರೆ: ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಮೂವರು TMC ಮಾಜಿ ಸಂಸದರು ಮತ್ತೆ ರಾಜ್ಯಸಭೆಗೆ ಅವಿರೋಧ ಆಯ್ಕೆ!

ಅಕ್ರಮ ಸಂಬಂಧಕ್ಕೆ ಅಡ್ಡಿ: ದೇವಸ್ಥಾನಕ್ಕೆಂದು ಕರೆದೊಯ್ದು ಪತಿಯನ್ನೇ ಕೊಂದ ಪಾಪಿ ಪತ್ನಿ!

'ಜುಲೈ 20ರ ನಂತರ ನಿಮ್ಮನ್ನು ದೆವ್ವವಾಗಿ ಕಾಡುತ್ತೇನೆ': ವಿದ್ಯಾರ್ಥಿಗಳಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾದ ವಾಂಗ್‌ಚುಕ್!

ರಷ್ಯಾದಿಂದ ತೈಲ ಖರೀದಿ: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸುವ ಮಸೂದೆ, 60 ಯುಎಸ್ ಸೆನೆಟರ್‌ಗಳ ಬೆಂಬಲ!