ಪ್ರತಾಪ್ ಸಿಂಹ 
ರಾಜ್ಯ

'ಜಿರಳೆಗಳನ್ನು ಇಟ್ಟುಕೊಂಡು ಕ್ರಾಂತಿ ಮಾಡ್ತೀವಿ ಎಂದು ವಾಂತಿ ಮಾಡ್ತಿದ್ದೀರ; ಮೋದಿ ಯಾರಿಗೂ ಸಲಾಂ ಹೊಡೆಯಲ್ಲ; ಅವರನ್ನ ಮಟ್ಟ ಹಾಕೋದು ಗೊತ್ತಿದೆ'

ಮೋದಿ ಅವರು ಯಾರಿಗೂ ಸಲಾಂ ಹೊಡೆಯುತ್ತಿಲ್ಲ. ಅಮೆರಿಕಾದ ಏಕಸ್ವಾಮ್ಯತೆಗೆ ಸೆಡ್ದು ಹೊಡಿತಿದ್ದಾರೆ. ಅಂತ ಮೋದಿ ಅವರನ್ನು ಬಗ್ಗು ಬಡಿಯಬೇಕು ಎಂದು ಅಮೆರಿಕಾ ಯೋಚನೆ ಮಾಡುತ್ತಿದ್ದಾರೆ.

ಮೈಸೂರು: ನೀವು ಈ ಜಿರಳೆಗಳನ್ನು ಇಟ್ಟುಕೊಂಡು ಕ್ರಾಂತಿ ಮಾಡ್ತೀವಿ ಅಂತಾ ಹೇಳಿ ವಾಂತಿ ಮಾಡ್ತಿದ್ದೀರಾ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ನೀಟ್ ಪರೀಕ್ಷೆ ಸಂಬಂಧಿತ ಪ್ರತಿಭಟನೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು ಮೋದಿ ಅವರು ಯಾರಿಗೂ ಸಲಾಂ ಹೊಡೆಯುತ್ತಿಲ್ಲ. ಅಮೆರಿಕಾದ ಏಕಸ್ವಾಮ್ಯತೆಗೆ ಸೆಡ್ದು ಹೊಡಿತಿದ್ದಾರೆ. ಅಂತ ಮೋದಿ ಅವರನ್ನು ಬಗ್ಗು ಬಡಿಯಬೇಕು ಎಂದು ಅಮೆರಿಕಾ ಯೋಚನೆ ಮಾಡುತ್ತಿದ್ದಾರೆ.

ದೇಶದ ಜನ ಮೋದಿ ಬೆನ್ನಿಗೆ ಇದ್ದಾರೆ, ನೀವು ಈ ಜಿರಳೆಗಳನ್ನು ಇಟ್ಟುಕೊಂಡು ಕ್ರಾಂತಿ ಮಾಡ್ತೀವಿ ಅಂತಾ ಹೇಳಿ ವಾಂತಿ ಮಾಡ್ತಿದ್ದೀರ, ಅವರನ್ನು ಯಾವ ರೀತಿ ಮಟ್ಟ ಹಾಕಬೇಕು ಎಂಬುದು ಮೋದಿ ಅವರಿಗೆ ಗೊತ್ತಿದೆ ಎಂದಿದ್ದಾರೆ.ಕಾಂಗ್ರೆಸ್ ನವರು ಜನರ ವೋಟು ತಗೊಂಡು ಅಧಿಕಾರಕ್ಕೆ ಬರೋದಕ್ಕೆ ಆಗೋದಿಲ್ಲ, ಅದಕ್ಕೆ ಅಮೆರಿಕಾದ ಏಜೆಂಟ್ ಆಗಿ ಈ ಪ್ರಯತ್ನಕ್ಕೆ ಕೈ ಹಾಕಿದ್ಜೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ದೇಶದ ಪ್ರತಿಯೊಬ್ಬರಿಗೂ ನೋವಿನ ಸಂಗತಿ ಎಂದು ಹೇಳಿದರೂ, ಈ ಪ್ರಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲವೆಂದು ಸ್ಪಷ್ಟಪಡಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕೇಂದ್ರ ಸರ್ಕಾರ ಈಗಾಗಲೇ ಕಠಿಣ ಕ್ರಮ ಕೈಗೊಂಡಿದ್ದು, ತಪ್ಪಿತಸ್ಥರನ್ನ ಪತ್ತೆಹಚ್ಚಿ ಜೈಲಿಗೆ ಕಳುಹಿಸುವ ಕಾರ್ಯ ನಡೆದಿದೆ ಎಂದು ಅವರು ಹೇಳಿದರು. ಅಕ್ರಮ ಎಸಗಿದವರ ವಿರುದ್ಧ ಯಾವುದೇ ರಾಜಿ ಇಲ್ಲದೆ ಕ್ರಮ ಜರುಗಿಸಲಾಗುತ್ತಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಈ ವೇಳೆ ಕಾಂಗ್ರೆಸ್ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು. "ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಅನೇಕ ಹಗರಣಗಳು ನಡೆದಿದ್ದವು. ಆಗ ಇಷ್ಟೊಂದು ಆಕ್ರೋಶ ವ್ಯಕ್ತವಾಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಲೋಪ ನಡೆದರೂ ಅದನ್ನ ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ" ಎಂದು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CJP Protest: ಹೊಸ ಮಾತುಕತೆಯ ಪ್ರಸ್ತಾಪ ಮುಂದಿಟ್ಟ ಕೇಂದ್ರ ಸರ್ಕಾರ, ಪ್ರತಿಭಟನಾಕಾರರು ಎಲ್ಲಿ ಹೇಳ್ತಾರೋ ಅಲ್ಲಿಯೇ ಚರ್ಚೆಗೆ ಸಿದ್ಧ- ಜೀತೇಂದ್ರ ಸಿಂಗ್!

ಮೋದಿ ಪ್ರತಿಕ್ರಿಯೆಗೆ ಕಾಕ್ರೋಚ್ ಕೆಂಡಾಮಂಡಲ; ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ - CJP

ಜು. 26 ರಂದು ಮುಂಬೈಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ: ಅಡ್ಡಿಗೆ ಯತ್ನಿಸಿದರೆ ಒದೆ ಬೀಳುತ್ತೆ- ವಾರ್ನಿಂಗ್ ಕೊಟ್ಟ ರಾಜ್ ಠಾಕ್ರೆ!

India vs Australia: ಆಸ್ಟ್ರೇಲಿಯಾ ತಂಡದಲ್ಲಿ ಭಾರತ ಮೂಲದ ಇಬ್ಬರಿಗೆ ಸ್ಥಾನ; ಟೀಂ ಇಂಡಿಯಾ ವಿರುದ್ಧವೇ ಕಣಕ್ಕೆ!

ಹನಿಮೂನ್‌ ಹಂತಕಿಗೆ ಸುಪ್ರೀಂ ಕೋರ್ಟ್ ಶಾಕ್‌; ಸೋನಮ್‌ ರಘುವಂಶಿ ಜಾಮೀನು ರದ್ದು