Online Desk
ರಾಜ್ಯ

ಗೆಳತಿಯನ್ನ Pretty ಅಂತ ಕರೆದ್ರೆ ತಪ್ಪಲ್ಲ; ಇದು Gen Z ಭಾಷಾಶೈಲಿಯೇ ಹೊರತು ಅಪರಾಧವಲ್ಲ ಎಂದ ಕರ್ನಾಟಕ ಹೈಕೋರ್ಟ್

ಇಂದಿನ ಯುವಕರಲ್ಲಿ ಅದರಲ್ಲೂ Gen-Z ಗಳಲ್ಲಿ ತಮ್ಮ ಗೆಳತಿಯನ್ನ Pretty ಎಂದು ಕರೆಯುವುದು ಸಾಮಾನ್ಯವಾಗಿದೆ. ಆದರೆ, ಇದನ್ನೇ ತಪ್ಪು ತಿಳಿದ ಪೋಷಕರೊಬ್ಬರು, ತಮ್ಮ ಪುತ್ರಿಯನ್ನು Pretty ಎಂದು ಕರೆದ ಯುವಕನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಇಂದಿನ ಯುವಕರಲ್ಲಿ ಅದರಲ್ಲೂ Gen-Z ಗಳಲ್ಲಿ ತಮ್ಮ ಗೆಳತಿಯನ್ನ Pretty ಎಂದು ಕರೆಯುವುದು ಸಾಮಾನ್ಯವಾಗಿದೆ. ಆದರೆ, ಇದನ್ನೇ ತಪ್ಪು ತಿಳಿದ ಪೋಷಕರೊಬ್ಬರು, ತಮ್ಮ ಪುತ್ರಿಯನ್ನು Pretty ಎಂದು ಕರೆದ ಯುವಕನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಇನ್ನೂ, ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಮಹತ್ವದ ತೀರ್ಪು ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಬೆಂಗಳೂರಿನ ಕಾಲೇಜೊಂದರ 20 ವರ್ಷದ ಯುವಕ, ತನ್ನ ಗೆಳತಿಯ ಇನ್‌ಸ್ಟಾಗ್ರಾಮ್ ಫೋಟೋಗೆ Pretty ಎಂದು ಮೆಸೇಜ್ ಕಳುಹಿಸಿದ್ದನು. ಇದಕ್ಕೆ ಪ್ರತಿಯಾಗಿ, ಹುಡುಗಿಯು ಥ್ಯಾಂಕ್ಸ್ ಎಂದು ರಿಪ್ಲೇ ಮಾಡಿದ್ದಾಳೆ.

ಆದರೆ, ಕರ್ನಾಟಕ ಕೆಡರ್‌ನ ಹಿರಿಯ ಐಪಿಎಸ್ ಅಧಿಕಾರಿ ಆಗಿರುವ ಹುಡುಗಿಯ ತಂದೆ, ಈ ಮೆಸೇಜ್ ನೋಡಿ, ಯುವಕನ ವಿರುದ್ಧ, ಮಹಿಳೆಯನ್ನು ಹಿಂಬಾಲಿಸಿದ್ದಕ್ಕಾಗಿ, ಆಕೆಯ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಐಟಿ ಕಾಯ್ದೆಯ ಸೆಕ್ಷನ್ 66E (ಗೌಪ್ಯತೆಯ ಉಲ್ಲಂಘನೆ) ಅಡಿಯಲ್ಲಿ ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೊತೆಗೆ ಹುಡುಗನ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದರು.

ಹೈಕೋರ್ಟ್ ಹೇಳಿದ್ದೇನು?

ಮುಂದುವರೆದು, ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠವು, ಯುವಕನ ಮೇಲಿನ FIR ರದ್ದುಗೊಳಿಸಿ ಇದು ಇಂದಿನ ಯುವ ಪೀಳಿಗೆ (Gen Z) ಸಂವಹನ ನಡೆಸಲು ಇಂತಹ ಸಾಮಾನ್ಯ ಅನೌಪಚಾರಿಕ ರೀತಿಯ ಭಾಷೆಯನ್ನು ಬಳಸುತ್ತಾರೆ. ಹಾಗಾಗಿ, ಖಾಸಗಿಯಾದ ಚಾಟ್‌ನಲ್ಲಿ ತನ್ನ ಸಹಪಾಠಿಯೊಬ್ಬರನ್ನು ಸುಂದರಿ (Pretty) ಎಂದು ಕರೆಯುವುದು ಮಹಿಳೆಯ ಶೀಲಭಂಗ ವ್ಯಾಪ್ತಿಗೆ ಬರುವುದಿಲ್ಲ. ಇದು ಇಬ್ಬರ ನಡುವಿನ ವೈಯಕ್ತಿಕ ಸಂಭಾಷಣೆಯಾಗಿದ್ದು, ಸಾರ್ವಜನಿಕವಾಗಿ ಮಾಡಿದ ಕಾಮೆಂಟ್ ಅಲ್ಲ. ಹಾಗಾಗಿ, ಇಂತಹ ಸಣ್ಣ ವಿಷಯಗಳಿಗೆ ಕ್ರಿಮಿನಲ್ ಕಾನೂನನ್ನು ಬಳಸುವುದು ಯುವಕರ ಭವಿಷ್ಯವನ್ನು ಹಾಳು ಮಾಡುತ್ತದೆ ಜೊತೆಗೆ ಇದು ಕಾನೂನಿನ ಸ್ಪಷ್ಟ ದುರ್ಬಳಕೆಯಾಗಿದೆ ಎಂದು ತಿಳಿಸಿದೆ.

ಒಟ್ಟಾರೆಯಾಗಿ, ಯುವಕನ ವಿರುದ್ಧದ ತನಿಖೆಯನ್ನು ಕೈಬಿಟ್ಟ ನ್ಯಾಯಾಲಯ, ಪೊಲೀಸರ ವಶದಲ್ಲಿದ್ದ ಆತನ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಅನ್ನು ತಕ್ಷಣವೇ ಹಿಂತಿರುಗಿಸುವಂತೆ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ನಾವು ಕೈ ಜೋಡಿಸೋಣ": ಗಲ್ವಾನ್ ಸಂಘರ್ಷದ ಬಳಿಕ ಮೊದಲ ಮಾತುಕತೆ ವೇಳೆ Narendra Modi ಗೆ Xi Jinping ಸಂದೇಶ; ಭಾರತದೆದುರು ಮಂಡಿಯೂರಿದ ಚೀನಾ?

ಪ್ರಶ್ನೆ ಪತ್ರಿಕೆ ಸೋರಿಕೆ ಸಹಿಸಲ್ಲ: KPSC ವಿರುದ್ಧ ಹೋರಾಟಕ್ಕೆ CJP ಎಂಟ್ರಿ: ನೊಂದ ಅಭ್ಯರ್ಥಿಗಳಿಗೆ ನ್ಯಾಯದ ಭರವಸೆ

ಮೈಸೂರಿನ 'ಪೇಟೆ ರೌಡಿ' ಪೊಲೀಸ್ ಠಾಣೆಗೆ ನುಗ್ಗಿದ್ರೆ ನಾನು ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುತ್ತೇನೆ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನ್

ಚೀನಾ ಇದ್ದರೂ ಬ್ರಿಕ್ಸ್‌ ಸದಸ್ಯತ್ವಕ್ಕಾಗಿ 3 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ರೂ ಅವಕಾಶ ಸಿಕ್ಕಿಲ್ಲ: ಪಾಕ್ ಗೋಳಾಟ!

ಬಳ್ಳಾರಿ ನಂತರ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತೊಂದು ಪಾದಯಾತ್ರೆ; ಸೆಪ್ಟೆಂಬರ್ 15 ರಿಂದ ರಾಜ್ಯಾದ್ಯಂತ ಹೋರಾಟ