ರಸ್ತೆಗಳಲ್ಲಿ ಬಿದ್ದಿರುವ ಅನಾಥವಾಹನಗಳಿಗೆ ನೋಟಿಸ್ ಅಂಟಿಸಿದ ಸಚಿವ ಕೃಷ್ಣ ಬೈರೇಗೌಡ 
ರಾಜ್ಯ

5,133 ಅನಾಥ ವಾಹನಗಳ ಪೈಕಿ ಕೇವಲ 54 ಮಾತ್ರ ತೆರವು! GBA ಕಾರ್ಯಾಚರಣೆಯ ನಿಧಾನಗತಿಗೆ ಟೀಕೆ

ಎರಡು ವಾರಗಳ ಹಿಂದೆ ಈ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದ್ದು, ಕಳೆದ ವಾರದಿಂದ ವಾಹನಗಳನ್ನು ಟೋಯಿಂಗ್ ಮಾಡುವ ಪ್ರಕ್ರಿಯೆ ಶುರುವಾಗಿದೆ. ಆದರೆ ಐದು ನಗರ ನಿಗಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

ಬೆಂಗಳೂರು: ಸಾರ್ವಜನಿಕ ರಸ್ತೆಗಳಲ್ಲಿ ವರ್ಷಗಳಿಂದ ಅನಾಥವಾಗಿ ಬಿದ್ದಿರುವ ವಾಹನಗಳನ್ನು ತೆರವುಗೊಳಿಸುವ ಅಭಿಯಾನ ಆರಂಭಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಇದುವರೆಗೆ ಗುರುತಿಸಿರುವ 5,133 ವಾಹನಗಳ ಪೈಕಿ ಕೇವಲ 54 ವಾಹನಗಳನ್ನು ಮಾತ್ರ ತೆರವುಗೊಳಿಸಲು ಯಶಸ್ವಿಯಾಗಿದೆ.

ಎರಡು ವಾರಗಳ ಹಿಂದೆ ಈ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದ್ದು, ಕಳೆದ ವಾರದಿಂದ ವಾಹನಗಳನ್ನು ಟೋಯಿಂಗ್ ಮಾಡುವ ಪ್ರಕ್ರಿಯೆ ಶುರುವಾಗಿದೆ. ಆದರೆ ಐದು ನಗರ ನಿಗಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

ಜಿಬಿಎ ಮುಖ್ಯ ಆಯುಕ್ತರ ಮಾಹಿತಿ ಪ್ರಕಾರ, ಬೆಂಗಳೂರು ಸಂಚಾರ ಪೊಲೀಸರು ಹಾಗೂ ಜಿಬಿಎ ಜಂಟಿ ಸಮೀಕ್ಷೆ, ಜೊತೆಗೆ ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಒಟ್ಟು 5,133 ಅನಾಥ ವಾಹನಗಳನ್ನು ಗುರುತಿಸಲಾಗಿದೆ.

ಜಿಬಿಎ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, "ಇದುವರೆಗೆ ಸುಮಾರು 1,300 ವಾಹನಗಳಿಗೆ ಎಚ್ಚರಿಕೆ ಸ್ಟಿಕ್ಕರ್ ಅಂಟಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿ ತೆರವುಗೊಳಿಸುವ ಕಾರ್ಯವನ್ನು ತೀವ್ರಗೊಳಿಸಲಾಗುತ್ತದೆ. ಪ್ರಸ್ತುತ ಎಸ್‌ಐಆರ್ (SIR) ಸಂಬಂಧಿತ ಕೆಲಸಗಳಿಗೆ ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸಿರುವುದರಿಂದ ಈ ಕಾರ್ಯ ಸ್ವಲ್ಪ ನಿಧಾನವಾಗಿದೆ. ಶೀಘ್ರದಲ್ಲೇ ಗುರಿ ನಿಗದಿಪಡಿಸಿ ವಾಹನ ತೆರವು ಕಾರ್ಯಕ್ಕೆ ವೇಗ ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.

ASTRAM ಎಐ ತಂತ್ರಜ್ಞಾನದಿಂದಲೂ ವಾಹನಗಳ ಪತ್ತೆ

ಅಧಿಕಾರಿಗಳ ಮಾಹಿತಿ ಪ್ರಕಾರ, ಒಟ್ಟು ಪ್ರಕರಣಗಳ ಪೈಕಿ 2,367 ವಾಹನಗಳನ್ನು ಬೆಂಗಳೂರು ಸಂಚಾರ ಪೊಲೀಸರು ಮತ್ತು ಜಿಬಿಎ ನಡೆಸಿದ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ.

ಈ ಸಮೀಕ್ಷೆಯನ್ನು Actionable Intelligence for Sustainable Traffic Management (ASTRAM) ಎಂಬ ಎಐ ಆಧಾರಿತ ತಂತ್ರಜ್ಞಾನದ ಮೂಲಕ ನಡೆಸಲಾಗಿದ್ದು, ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಈ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ಉಳಿದ 2,766 ವಾಹನಗಳ ಕುರಿತು ಸಾರ್ವಜನಿಕರು ಜಿಬಿಎ ಹಾಗೂ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ.

15 ದಿನಗಳಲ್ಲಿ ಮಾಲೀಕರು ಬಾರದಿದ್ದರೆ ಹರಾಜು

ಈ ಹಿಂದೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಅನಾಥ ವಾಹನಗಳ ವಿರುದ್ಧ ಮೊದಲ ಬಾರಿ ₹500 ದಂಡ ವಿಧಿಸಲಾಗುವುದು. ಮರುಕಳಿಸಿದರೆ ದಂಡವನ್ನು ದ್ವಿಗುಣಗೊಳಿಸಲಾಗುವುದು ಎಂದು ಘೋಷಿಸಿದ್ದರು. ಅಲ್ಲದೆ, 15 ದಿನಗಳೊಳಗೆ ವಾಹನದ ಮಾಲೀಕರು ಮುಂದೆ ಬರದಿದ್ದರೆ, ಅಂತಹ ವಾಹನಗಳನ್ನು ಜಿಬಿಎ ಹರಾಜು ಹಾಕಲಿದೆ ಎಂದು ಅವರು ತಿಳಿಸಿದ್ದರು.

ಸಾರ್ವಜನಿಕರಿಂದ ಸ್ವಾಗತ

ಜಿಬಿಎ ಕೈಗೊಂಡಿರುವ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬೆಂಗಳೂರಿನ ನಿವಾಸಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಾರ್ವಜನಿಕ ರಸ್ತೆಗಳ ಮೇಲೆ ದೀರ್ಘಕಾಲದಿಂದ ಬಿದ್ದಿರುವ ಅನಾಥ ವಾಹನಗಳಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ಅಲ್ಲದೆ, ಇವು ನಗರದ ಸೌಂದರ್ಯ ಹಾಳು ಮಾಡುವುದರ ಜೊತೆಗೆ ಸ್ವಚ್ಛತೆ, ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಅನೇಕ ಕಡೆ ಇಂತಹ ವಾಹನಗಳು ಇಲಿ ಸೇರಿದಂತೆ ಕೀಟಗಳ ಆಶ್ರಯ ತಾಣಗಳಾಗಿದ್ದು, ಅಪಘಾತಗಳಿಗೆ ಕಾರಣವಾಗುವ 'ಬ್ಲ್ಯಾಕ್ ಸ್ಪಾಟ್'ಗಳಾಗಿಯೂ ಪರಿಣಮಿಸುತ್ತಿವೆ ಎಂಬ ಆತಂಕವನ್ನು ನಿವಾಸಿಗಳು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟೈಫಾಯ್ಡ್‌ಗೂ ಜಗ್ಗದ Dipke ಹೋರಾಟ; 'ಪ್ರಧಾನ್ ರಾಜೀನಾಮೆ ತನಕ ಪ್ರತಿಭಟನೆ ಮುಂದುವರಿಕೆ ಪಣ

"Jo Darr Gaya, Woh Mar Gaya": ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲದ ಬಳಿಕ Salman Khan ಕ್ರಿಪ್ಟಿಕ್ ಪೋಸ್ಟ್ ವೈರಲ್

CJP, ವಿದ್ಯಾರ್ಥಿಗಳ ಪ್ರತಿಭಟನೆ: 2 ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಇಲ್ಲ?

ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗಿನ ಮೇಲೆ ಭೀಕರ ದಾಳಿ; ಭಾರತೀಯ ನಾವಿಕ ಬಲಿ, ಭಾರತ ತೀವ್ರ ಖಂಡನೆ..!

26 ದಿನ ಉಪವಾಸ ಮಾಡಿದ್ದೇನೆ... ಇನ್ನೂ ನನ್ನ ಪ್ರಾಮಾಣಿಕತೆಗೆ ಸಾಕ್ಷಿ ಬೇಕೇ?; ಟೀಕಾಕಾರರಿಗೆ ಸೋನಂ ವಾಂಗ್ಚುಕ್ ತಿರುಗೇಟು