ಹಳದಿ ಮಾರ್ಗ, ಸಾಂದರ್ಭಿಕ ಚಿತ್ರ 
ರಾಜ್ಯ

ಮೆಟ್ರೋ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ; ಮೃತದೇಹ ಹೊರತೆಗೆಯಲು ಸಿಬ್ಬಂದಿ ಹರಸಾಹಸ; ಕೆಲಕಾಲ ರೈಲು ಸಂಚಾರ ಸ್ಥಗಿತ

ಇಂದು ಸಂಜೆ ಯೆಲ್ಲೋ ಲೈನ್ ನ ಹುಸ್ಕೂರ್ ರೋಡ್ ಮೆಟ್ರೋ ಸ್ಟೇಷನ್ ನಲ್ಲಿ ಈ ಘಟನೆ ನಡೆದಿದ್ದು, ‌35 ವರ್ಷದ ವ್ಯಕ್ತಿಯೋರ್ವ ರೈಲು ಬರುತ್ತಿರುವುದನ್ನು ಗಮನಿಸಿ ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಆತ್ಮಹತ್ಯೆ ಹಾಗೂ ಆತ್ಮಹತ್ಯೆ ಯತ್ನ ಪ್ರಕರಣಗಳು ಹೆಚ್ಚುತ್ತಿದ್ದು, ಸೋಮವಾರ ಯೆಲ್ಲೋ ಲೈನ್ ಹಳಿಗೆ ಜಿಗಿದು ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಇಂದು ಸಂಜೆ ಯೆಲ್ಲೋ ಲೈನ್ ನ ಹುಸ್ಕೂರ್ ರೋಡ್ ಮೆಟ್ರೋ ಸ್ಟೇಷನ್ ನಲ್ಲಿ ಈ ಘಟನೆ ನಡೆದಿದ್ದು, ‌35 ವರ್ಷದ ವ್ಯಕ್ತಿಯೋರ್ವ ರೈಲು ಬರುತ್ತಿರುವುದನ್ನು ಗಮನಿಸಿ ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವ್ಯಕ್ತಿ ರೈಲ್ವೆ ಹಳಿಗೆ ಹಾರಿದ್ದನ್ನು ಗಮನಿಸಿದ ಸ್ಟೇಷನ್ ಕಂಟ್ರೋಲರ್ ಕೂಡಲೇ ಪವರ್ ಆಫ್ ಮಾಡಿದ್ದಾರೆ. ಆದರೆ ರೈಲಿನ ಕೆಳಗೆ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದು, ಮೃತದೇಹ ಹೊರ ತೆಗೆಯಲು ಹರಸಾಹಸ ಪಟ್ಟರು.

ಘಟನೆಯಿಂದ ಯೆಲ್ಲೋ ಲೈನ್ ಮಾರ್ಗ ಸೇವೆ ಕೆಲಕಾಲ ಸ್ಥಗಿತಗೊಂಡಿದೆ. ಆರ್.ವಿ. ರಸ್ತೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಕಾರ್ಯಾಚರಣೆ ನಡೆಸುತ್ತಿದೆ.

ಸ್ಥಳಕ್ಕೆ ಹೆಬ್ಬುಗೋಡಿ ಪೊಲೀಸರು ಭೇಟಿ ನೀಡಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ವಿಜಯ್‌ಗೆ ತೀವ್ರ ಹಿನ್ನಡೆ: ಕರೂರ್ ಕಾಲ್ತುಳಿತದ ಸಂತ್ರಸ್ತರಿಗೆ ಉದ್ಯೋಗ ನೀಡುವ TVK ಸರ್ಕಾರದ ಆದೇಶ ರದ್ದು!

ಒಪ್ಪಂದ ಮುರಿದು ನಮ್ ಮೇಲೆ ಕೇಸ್ ಹಾಕ್ತಿದ್ದೀರಾ, ಮತ್ತೆ ಪ್ರತಿಭಟನೆ ಮಾಡ್ಬೇಕಾ? ಕೇಂದ್ರಕ್ಕೆ CJP ಎಚ್ಚರಿಕೆ

ನನ್ನನ್ನು ನೆಮ್ಮದಿಯಾಗಿರಲು ಬಿಡಿ: ಅಶ್ಲೀಲ ಟ್ರೋಲಿಗರ ವಿರುದ್ಧ ದೂರು ದಾಖಲಿಸಿದ ನಟ ಧ್ರುವಂತ್

ಸ್ಪೀಕರ್ ಮಧ್ಯಸ್ಥಿಕೆ ಬಳಿಕ ಪಕ್ಷಗಳ ಒಪ್ಪಿಗೆ: 'ಪ್ರಶ್ನೆ ಪತ್ರಿಕೆ ಸೋರಿಕೆ ತಡೆ' ಮಸೂದೆ ಕುರಿತು ನಾಳೆ ಲೋಕಸಭೆಯಲ್ಲಿ ಚರ್ಚೆ ಸಾಧ್ಯತೆ!

ಮಂಗಳೂರು: ಹಸಿರು ಸೀರೆ ಹಾಕೊಂಡು ಆಫೀಸ್​​ಗೆ ಬಾ ಎಂದ ಅಧಿಕಾರಿ; ಮಹಿಳಾ ಸಿಬ್ಬಂದಿ ಹಿಂದೆ ಬಿದ್ದವನಿಗೆ ಚಳಿ ಬಿಡಿಸಿದ ಗ್ರೀನ್​ ಗ್ಯಾಂಗ್!