ರೇಣುಕಾಸ್ವಾಮಿ ಮತ್ತು ದರ್ಶನ್ Online Desk
ರಾಜ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್; ಮೂವರು ಬಂಧಿತರಿಗೆ ಜಾಮೀನು ನೀಡಿದ ಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ದರ್ಶನ್ ಗ್ಯಾಂಗ್‌ನ ಸುಹಾಸ್, ವೈಭವ್ ಮತ್ತು ಪುನೀತ್ ಎಂಬ ಮೂವರು ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅಂಡ್ ಟೀಂಗೆ ಸಿಹಿ ಸುದ್ದಿ ಸಿಕ್ಕಿದೆ.! ಯಾಕಂದ್ರೆ, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ದರ್ಶನ್ ಗ್ಯಾಂಗ್‌ನ ಸುಹಾಸ್, ವೈಭವ್ ಮತ್ತು ಪುನೀತ್ ಎಂಬ ಮೂವರು ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ನಟ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು, ಈ 3 ಆರೋಪಿಗಳು ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ತುಮಕೂರಿನ ಬಾರ್ ಮಾಲೀಕ ಹಾಗೂ ಸಿಸಿಟಿವಿ ಡಿವಿಆರ್ ಸೀಜ್‌ಗೆ ಸಂಬಂಧಿಸಿದ ಸಾಕ್ಷಿ ಸಂದೀಪ್ ಎಂಬುವವರಿಗೆ ಆರೋಪಿಗಳ ಪರವಾಗಿ ಸುಳ್ಳು ಸಾಕ್ಷಿ ಹೇಳುವಂತೆ ಆಮಿಷವೊಡ್ಡಿ, ವಾಟ್ಸಾಪ್ ಕರೆಗಳ ಮೂಲಕ ಹೆದರಿಸಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಅದರಂತೆ, ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಈ ಮೂವರನ್ನು ಅರೆಸ್ಟ್ ಮಾಡಿ, ವಿಚಾರಣೆ ನಡೆಸಿ ಜೈಲಿಗಟ್ಟಿದ್ದರು. ಜೊತೆಗೆ ತನಿಖೆಯ ಭಾಗವಾಗಿ ಇವರ ಮೊಬೈಲ್‌ಗಳನ್ನು ವಶಪಡಿಸಿಕೊಂಡು FSL ಪರೀಕ್ಷೆಗೂ ಕಳುಹಿಸಲಾಗಿತ್ತು.

ಏತನ್ಮಧ್ಯೇ, ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರಿನ 59ನೇ CCH ನ್ಯಾಯಾಲಯವು, ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ದರ್ಶನ್ ಕಥೆ ಏನು?

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂಕೋರ್ಟ್ ಈಗಾಗಲೇ ರದ್ದುಗೊಳಿಸಿದ್ದು, ಪ್ರಸ್ತುತ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ ಮುಖ್ಯ ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಕೂಡ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬರದ ನಡುವೆ ರಾಜ್ಯಕ್ಕೆ ಮತ್ತೊಂದು ಹೊರೆ: ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡಲು CWRC ಆದೇಶ!

ರಾಹುಲ್ ಗಾಂಧಿಗೆ ಮದ್ವೆ ಆಗುವಂತೆ ಮನವೊಲಿಸಿ: CJP ವೈರಲ್ ಪ್ರತಿಭಟನಾಕಾರನ ಬಳಿ ಪ್ರಿಯಾಂಕಾ ಗಾಂಧಿ ಮನವಿ!

NEET ಪ್ರತಿಭಟನೆ: 18 ವರ್ಷದೊಳಗಿನ ವಿದ್ಯಾರ್ಥಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ; ಸಾಕ್ಷ್ಯ ಸಂರಕ್ಷಣೆಗೆ ಸೂಚನೆ..!

ಎಲ್ಲಕ್ಕೂ AI ಇರುವಾಗ 'ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳೇಕೆ 10 ವರ್ಷ ವ್ಯಯಿಸಬೇಕು? ನೀಟ್‌ಗೆ ಏಕೆ ತಯಾರಿ ನಡೆಸಬೇಕು?: Ramgopal Verma

ಮಧ್ಯರಾತ್ರಿ ‘ಸೆಲ್ಫಿ ವಿಡಿಯೋ’ ಎಫೆಕ್ಟ್: ಇನ್​​ಸ್ಟಾಗ್ರಾಂನಲ್ಲಿ ಮೋದಿ ಹೊಸ ದಾಖಲೆ; 105 ಮಿಲಿಯನ್ ದಾಟಿದ ಫಾಲೋವರ್ಸ್!