ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರಿನ ಪ್ರತಿಷ್ಠಿತ IPS ಲೇಔಟ್‌ನ ಸರ್ವಿಸ್ ವಿಲ್ಲಾದಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ದಾಳಿ: ಮೂವರ ಬಂಧನ

ಸರ್ವಿಸ್ ವಿಲ್ಲಾವೊಂದರಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ವಿಭಾಗವು ಮೂವರನ್ನು ಬಂಧಿಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ವಾಸಿಸುವ ಪ್ರತಿಷ್ಠಿತ ಎಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನ ಐಪಿಎಸ್ ಲೇಔಟ್‌ನಲ್ಲಿ ಮಧ್ಯ ರಾತ್ರಿ ನಡೆದ ಭರ್ಜರಿ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಸರ್ವಿಸ್ ವಿಲ್ಲಾವೊಂದರಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ವಿಭಾಗವು ಮೂವರನ್ನು ಬಂಧಿಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಅನುಮತಿಯಿಲ್ಲದೆ ಪಾರ್ಟಿ ಆಯೋಜಿಸಿದ್ದಕ್ಕಾಗಿ ಮತ್ತು ನಿಷೇಧಿತ ಹುಕ್ಕಾ ಉತ್ಪನ್ನಗಳು ಹಾಗೂ ಎಲೆಕ್ಟ್ರಾನಿಕ್ ಸಿಗರೇಟ್‌ಗಳ ಬಳಕೆಗೆ ಅವಕಾಶ ನೀಡಿದ್ದಕ್ಕಾಗಿ ಮೂವರನ್ನು ಬಂಧಿಸಲಾಗಿದೆ.

ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಬಂಧಿತ ಆರೋಪಿಗಳನ್ನು ದೀಕ್ಷಿತ್, ವೇದಾಂತ್ ಪಂಡಿತ್ ಮತ್ತು ಶಂಕರ್ ಎಂದು ಗುರುತಿಸಲಾಗಿದೆ.

ಆರೋಪಿಗಳು, ಸುಮಾರು 20,000 ರೂ.ಗೆ ವಿಲ್ಲಾವನ್ನು ಬುಕ್ ಮಾಡಿದ್ದರು ಮತ್ತು ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೆ ಪಾರ್ಟಿ ಆಯೋಜಿಸಿದ್ದರು ಎಂದು ಆರೋಪಿಸಲಾಗಿದೆ.

ಸಿಸಿಬಿಯ ಮಹಿಳಾ ಮತ್ತು ಮಾದಕ ದ್ರವ್ಯ ನಿಗ್ರಹ ದಳವು ತಮಗೆ ಬಂದ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಟ್ಸಾಪ್ ಗ್ರೂಪ್, ಆ್ಯಪ್ ಮೂಲಕ ಯುವಕ-ಯುವತಿಯರಿಗೆ ಆಹ್ವಾನ

ಸಾಮಾನ್ಯ ಹೌಸ್ ಪಾರ್ಟಿ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿ ಯುವಕ-ಯುವತಿಯರನ್ನು ಆಹ್ವಾನಿಸಲಾಗುತ್ತಿತ್ತು. ಅಲ್ಲದೆ, Amigos ಆ್ಯಪ್ ಮೂಲಕವೂ ಪಾರ್ಟಿಗೆ ಎಂಟ್ರಿ ನೀಡಲು ಆಹ್ವಾನಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಪಾರ್ಟಿಗೆ ಪ್ರವೇಶ ಶುಲ್ಕವನ್ನೂ ನಿಗದಿ ಮಾಡಲಾಗಿತ್ತು. ಯುವಕರಿಗೆ 1,099 ರೂಪಾಯಿ ಹಾಗೂ ಯುವತಿಯರಿಗೆ 499 ರೂಪಾಯಿ ಶುಲ್ಕ ಪಡೆದು ವೀಕೆಂಡ್‌ಗಳಲ್ಲಿ ಮದ್ಯ, ಹುಕ್ಕಾ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

‘ಪ್ರಜಾಪ್ರಭುತ್ವದ ಕರಾಳ ದಿನ’, 'ತಲೆ ಬಾಗಲ್ಲ, ಯಾರಿಗೂ ಶರಣಾಗಲ್ಲ'; ಮಮತಾ ಬ್ಯಾನರ್ಜಿ ಕೆಂಡಾಮಂಡಲ

ನವಜಾತ ಶಿಶುಗಳಿಗೆ ಒಂದು ಗ್ರಾಂ ಚಿನ್ನದ ಉಂಗುರ ಉಡುಗೊರೆ ಯೋಜನೆ: ಸೆ. 28 ರಂದು ಸಿಎಂ ವಿಜಯ್ ಅಧಿಕೃತವಾಗಿ ಚಾಲನೆ!

ತುಳು ಭಾಷೆಗೆ ಸಿಕ್ತು ಅಧಿಕೃತ ಸ್ಥಾನಮಾನ: ಕರ್ನಾಟಕದ 2ನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ, ಕರಾವಳಿಗೆ ಹೊಸ ಟೂರಿಸಂ ನೀತಿ! Video