ಮಿಸ್ ಯೂನಿವರ್ಸ್ ಇಂಡಿಯಾ 2026  
ರಾಜ್ಯ

ಬೆಂಗಳೂರಿನಲ್ಲಿ Miss Universe India 2026: ಸ್ವಿಮ್‌ಸೂಟ್ ಸುತ್ತಿನಲ್ಲಿ ಮಿಂಚಿದ 52 ಫೈನಲಿಸ್ಟ್‌ಗಳು..!

ಸ್ವಿಮ್‌ಸೂಟ್ ಸುತ್ತು ಸ್ಪರ್ಧೆಯ ಪ್ರಮುಖ ಹಂತಗಳಲ್ಲಿ ಒಂದಾಗಿದ್ದು, ಸ್ಪರ್ಧಿಗಳ ಆತ್ಮವಿಶ್ವಾಸ, ವ್ಯಕ್ತಿತ್ವ, ವೇದಿಕೆ ಮೇಲಿನ ನಡಿಗೆ ಹಾಗೂ ಒಟ್ಟಾರೆ ಪ್ರಸ್ತುತಿಯನ್ನು ತೀರ್ಪುಗಾರರು ಸೂಕ್ಷ್ಮವಾಗಿ ಪರಿಶೀಲಿಸಿದರು.

ಬೆಂಗಳೂರು: ಮಿಸ್ ಯೂನಿವರ್ಸ್ ಇಂಡಿಯಾ 2026 ಸ್ಪರ್ಧೆಯ ಸ್ವಿಮ್‌ಸೂಟ್ ಸುತ್ತು ಬುಧವಾರ ಬೆಂಗಳೂರಿನ ವಂಡರ್‌ಲಾದಲ್ಲಿ ಅದ್ದೂರಿಯಾಗಿ ನಡೆಯಿತು.

ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿರುವ 52 ಫೈನಲಿಸ್ಟ್‌ಗಳು ಪೂಲ್‌ಸೈಡ್ ರ್ಯಾಂಪ್‌ನಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿ ತೀರ್ಪುಗಾರರ ಗಮನ ಸೆಳೆದರು.

ಗ್ರ್ಯಾಂಡ್ ಫಿನಾಲೆಗೂ ಮುನ್ನ ಸ್ಪರ್ಧೆ ನಿರ್ಣಾಯಕ ಹಂತ ತಲುಪಿದ್ದು, ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳ ಮಾನದಂಡಗಳ ಆಧಾರದ ಮೇಲೆ ಸ್ಪರ್ಧಿಗಳ ಪ್ರದರ್ಶನವನ್ನು ಮೌಲ್ಯಮಾಪನ ಮಾಡಲಾಯಿತು.

ಸ್ವಿಮ್‌ಸೂಟ್ ಸುತ್ತು ಸ್ಪರ್ಧೆಯ ಪ್ರಮುಖ ಹಂತಗಳಲ್ಲಿ ಒಂದಾಗಿದ್ದು, ಸ್ಪರ್ಧಿಗಳ ಆತ್ಮವಿಶ್ವಾಸ, ವ್ಯಕ್ತಿತ್ವ, ವೇದಿಕೆ ಮೇಲಿನ ನಡಿಗೆ ಹಾಗೂ ಒಟ್ಟಾರೆ ಪ್ರಸ್ತುತಿಯನ್ನು ತೀರ್ಪುಗಾರರು ಸೂಕ್ಷ್ಮವಾಗಿ ಪರಿಶೀಲಿಸಿದರು.

ಸ್ವಿಮ್‌ಸೂಟ್ ರೌಂಡ್

ಈ ಬಾರಿ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿರುವ ಸ್ಪರ್ಧಿಗಳು ಭಾಗವಹಿಸಿದ್ದು, ಭಾರತದ ಸಾಂಸ್ಕೃತಿಕ ವೈವಿಧ್ಯತೆಯೂ ಕಾರ್ಯಕ್ರಮದಲ್ಲಿ ಪ್ರತಿಬಿಂಬಿತವಾಯಿತು.

ಇದಕ್ಕೂ ಮುನ್ನ ಸ್ಯಾಶಿಂಗ್ ಸಮಾರಂಭ, ಪರಿಚಯಾತ್ಮಕ ರ್ಯಾಂಪ್ ವಾಕ್, ಭಾಷಣ ಸುತ್ತು ಹಾಗೂ ಗಾಲಾ ಡಿನ್ನರ್ ಸೇರಿದಂತೆ ಹಲವು ಸುತ್ತುಗಳು ಯಶಸ್ವಿಯಾಗಿ ನಡೆದಿದ್ದವು.

ಗ್ರ್ಯಾಂಡ್ ಫಿನಾಲೆಗೂ ಮುನ್ನ ಇನ್ನೂ ಹಲವು ಮೌಲ್ಯಮಾಪನ ಸುತ್ತುಗಳು ನಡೆಯಲಿದ್ದು, ಬಳಿಕ ಎಲ್ಲ ಫೈನಲಿಸ್ಟ್‌ಗಳು ಆಗಸ್ಟ್ 23ರಂದು ಜೈಪುರದಲ್ಲಿ ನಡೆಯಲಿರುವ ಅಂತಿಮ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ.

ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟ ಗೆಲ್ಲುವ ಸ್ಪರ್ಧಿಗೆ ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!