ಎಸ್ ಐಆರ್  
ರಾಜ್ಯ

ಮತದಾರರ ಪಟ್ಟಿಯಿಂದ 84 ಲಕ್ಷ ಹೆಸರು ಡಿಲೀಟ್? ಸ್ಪಷ್ಟನೆ ಕೊಟ್ಟ CEO, ಹೇಳಿದ್ದೇನು..?

ಮೃತರಾಗಿರುವವರು ಹಾಗೂ ಈಗಾಗಲೇ ಬೇರೆಡೆ ನೋಂದಣಿಯಾಗಿರುವ (ಡುಪ್ಲಿಕೇಟ್) ಮತದಾರರ ಹೆಸರುಗಳನ್ನು ಮಾತ್ರ ಸೂಕ್ತ ಮಹಜರ್ ಹಾಗೂ ಪರಿಶೀಲನೆಯ ಬಳಿಕ ಪಟ್ಟಿಯಿಂದ ತೆಗೆದುಹಾಕಲಾಗುವುದು.

ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವೇಳೆ ಮತದಾರರ ಹೆಸರುಗಳನ್ನು ದೊಡ್ಡ ಪ್ರಮಾಣದಲ್ಲಿ ಅಳಿಸಲಾಗುತ್ತಿದೆ ಎಂಬ ರಾಜಕೀಯ ಪಕ್ಷಗಳು ಹಾಗೂ ಕಾರ್ಯಕರ್ತರ ಆತಂಕದ ನಡುವೆಯೇ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (ಸಿಇಒ) ವಿ. ಅನ್ಬುಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಗೈರು, ಸ್ಥಳಾಂತರ, ಮೃತ, ನಕಲು ಹಾಗೂ ಇತರೆ (ASDDO) ವರ್ಗದಲ್ಲಿ ಗುರುತಿಸಲಾಗಿರುವ ಸುಮಾರು 84 ಲಕ್ಷ ಮತದಾರರ ಹೆಸರುಗಳನ್ನು ತಕ್ಷಣವೇ ಮತದಾರರ ಪಟ್ಟಿಯಿಂದ ಅಳಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಮೃತರಾಗಿರುವವರು ಹಾಗೂ ಈಗಾಗಲೇ ಬೇರೆಡೆ ನೋಂದಣಿಯಾಗಿರುವ (ಡುಪ್ಲಿಕೇಟ್) ಮತದಾರರ ಹೆಸರುಗಳನ್ನು ಮಾತ್ರ ಸೂಕ್ತ ಮಹಜರ್ ಹಾಗೂ ಪರಿಶೀಲನೆಯ ಬಳಿಕ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ತಿಳಿಸಿದ್ದಾರೆ.

ಗೈರು ಹಾಜರಿರುವವರು, ಸ್ಥಳಾಂತರಗೊಂಡವರು ಹಾಗೂ ಇತರೆ ವರ್ಗದಲ್ಲಿ ಗುರುತಿಸಲ್ಪಟ್ಟವರು ಆಗಸ್ಟ್ 8ರವರೆಗೆ ನಡೆಯುವ ಮನೆ-ಮನೆಗೆ ಭೇಟಿ ಪರಿಶೀಲನೆ (House-to-House Verification) ಅವಧಿಯಲ್ಲಿ ತಮ್ಮ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ಅಥವಾ ನಮೂನೆಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ.

ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು ಮತದಾರರ ನೋಂದಣಿ ಅಧಿಕಾರಿಗಳು (ERO) ಪರಿಶೀಲನೆಯ ಬಳಿಕ ಮತದಾರರ ವಿವರಗಳನ್ನು ತಿದ್ದುಪಡಿ ಮಾಡಲಿದ್ದು, ಅಗತ್ಯವಿದ್ದರೆ ನಮೂನೆಗಳು ಡಿಜಿಟಲೀಕರಣಗೊಂಡ ಬಳಿಕವೂ ಬದಲಾವಣೆಗಳನ್ನು ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮತದಾರರ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಈವರೆಗೆ ಸಹಿ ಮಾಡಲಾದ ಯಾವುದೇ ದೂರು ತಮ್ಮ ಕಚೇರಿಗೆ ಬಂದಿಲ್ಲ. ಮತದಾರರ ಹೆಸರು ಅಳಿಸಿರುವ ಬಗ್ಗೆ ಅಧಿಕೃತ ದೂರು ಕೂಡ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಜುಲೈ 29ರವರೆಗಿನ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 84,31,612 ಮತದಾರರು ASDDO ಪಟ್ಟಿಯಲ್ಲಿದ್ದಾರೆ. ಇವರಲ್ಲಿ 14,99,799 ಮಂದಿ ಮೃತರು, 51,74,968 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 5,62,572 ಮಂದಿ ಈಗಾಗಲೇ ಬೇರೆಡೆ ನೋಂದಾಯಿಸಿಕೊಂಡಿರುವವರು (ಡುಪ್ಲಿಕೇಟ್), 11,61,231 ಮಂದಿ ಗೈರುಹಾಜರಿರುವವರು ಹಾಗೂ 33,042 ಮಂದಿ ಇತರೆ ವಿಭಾಗದಲ್ಲಿ ಗುರುತಿಸಲ್ಪಟ್ಟಿದ್ದಾರೆ.

ಜೂನ್ 16, 2026ರಂದು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಗಣತಿ ನಮೂನೆ (Enumeration Form) ನೀಡಲಾಗುವುದಿಲ್ಲ. ಹಾಗೆಯೇ ಮತದಾರ ಅಥವಾ ಅವರ ಪ್ರತಿನಿಧಿಯ ಸಹಿ ಇಲ್ಲದ ನಮೂನೆಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದಿಲ್ಲ.

ಒಬ್ಬ ಮತದಾರ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರೆ ಮತ್ತು ಕರ್ನಾಟಕದಲ್ಲಿ ಅರ್ಹ ಮತದಾರರಾಗಿದ್ದರೆ ಹೊಸ ವಿಳಾಸದಲ್ಲಿ ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸಬಹುದು. ಹಿಂದಿನ ವಿಳಾಸದಲ್ಲಿ ಪತ್ತೆಯಾಗದ ಕಾರಣ ಅವರಿಗೆ ನಮೂನೆ ಸಿಗದಿದ್ದರೂ, ಅದರಿಂದ ಅವರ ಹೆಸರು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದರು.

ಸಿಇಒ ಕಚೇರಿ ಅಂಕಿಅಂಶಗಳ ಪ್ರಕಾರ, ಜುಲೈ 29ರವರೆಗೆ ರಾಜ್ಯದಲ್ಲಿ 4,26,75,861 (92.2%) ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಸುಮಾರು ಶೇ.15ರಷ್ಟು ಮತದಾರರನ್ನು ASDDO ವಿಭಾಗದಲ್ಲಿ ಗುರುತಿಸಲಾಗಿದ್ದು, ಶೇ.4.80ರಷ್ಟು ನಮೂನೆಗಳ ಡಿಜಿಟಲೀಕರಣ ಇನ್ನೂ ಬಾಕಿಯಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಡಿಜಿಟಲೀಕರಣ ತಡವಾಗಿರುವ ಬಗ್ಗೆ ಮಾತನಾಡಿ, ಮತದಾರರು ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ಬಿಎಲ್‌ಒಗಳು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದರು.

ಜಿಬಿಎ ವ್ಯಾಪ್ತಿಯಲ್ಲಿ ಇದುವರೆಗೆ 47,92,579 (46.13%) ನಮೂನೆಗಳು ಡಿಜಿಟಲೀಕರಣಗೊಂಡಿವೆ. ಅಲ್ಲದೆ 39,38,202 (37.91%) ಮತದಾರರನ್ನು ASDDO ಪಟ್ಟಿಯಲ್ಲಿ ಗುರುತಿಸಲಾಗಿದೆ. ಇವರಲ್ಲಿ 28,39,794 ಮಂದಿ ಶಾಶ್ವತ ಸ್ಥಳಾಂತರಗೊಂಡವರು, 7,39,828 ಮಂದಿ ಗೈರುಹಾಜರಿರುವವರು, 2,95,066 ಮಂದಿ ಮೃತರು, 47,531 ಮಂದಿ ಡುಪ್ಲಿಕೇಟ್ ಹಾಗೂ 15,983 ಮಂದಿ ಇತರೆ ವಿಭಾಗದಲ್ಲಿದ್ದಾರೆ.

ಈ ASDDO ಪಟ್ಟಿಯನ್ನು ಬೂತ್ ಮಟ್ಟದ ಏಜೆಂಟ್‌ಗಳಿಗೆ (BLA) ನೀಡಲಾಗಿದ್ದು, ಪರಿಶೀಲಿಸಿ ಅಗತ್ಯ ತಿದ್ದುಪಡಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷಾಂತರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್: DCC ಅಧ್ಯಕ್ಷರ ನೇಮಕಕ್ಕೆ ಹೊಸ ತಂತ್ರ, ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಫುಲ್ ಕಂಟ್ರೋಲ್...!

ಇನ್ನಿಬ್ಬರು DCM ನೇಮಕಕ್ಕೆ ಕಾಂಗ್ರೆಸ್ ಕಸರತ್ತು? 'ನನಗೂ ಅವಕಾಶ ಸಿಗುವ ವಿಶ್ವಾಸವಿದೆ' ಎಂದ ಸತೀಶ್ ಜಾರಕಿಹೊಳಿ..!

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ: ಶಾ ಅವರೇ ಆದೇಶ ನೀಡಿದ್ದಾರೆ, ಇಲ್ಲವೇ ಅವರು ಅಸಮರ್ಥ; ವಜಾಗೊಳಿಗೊಳಿಸಿ- ಪ್ರಧಾನಿಗೆ ರಾಹುಲ್ ಒತ್ತಾಯ

CWRC ಆದೇಶದ ವಿರುದ್ಧ ಮೇಲ್ಮನವಿ: ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ ಅರಿಯಲು ಸಿಎಂ ವಿಜಯ್ ಗೆ ಹೆಲಿಕಾಪ್ಟರ್ ವ್ಯವಸ್ಥೆ- ಸಿಎಂ ಡಿಕೆ ಶಿವಕುಮಾರ್!

ಕಾವೇರಿ ನೀರು ಬಿಡುಗಡೆ ಸಮಿತಿಯ ಆದೇಶವು 'ಅವೈಜ್ಞಾನಿಕ', ಕರ್ನಾಟಕಕ್ಕೆ 'ಮಾರಕ': ಕೇಂದ್ರ ಸಚಿವ ಕುಮಾರಸ್ವಾಮಿ