ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದುರ್ಗಾ ಸ್ಟಾಲಿನ್ 
ರಾಜ್ಯ

ಪತಿ-ಪುತ್ರನಿಂದ ಸನಾತನ ಧರ್ಮ ನಾಶದ ಹೇಳಿಕೆ: ಚಾಮುಂಡಿ ಬೆಟ್ಟದಲ್ಲಿ ದುರ್ಗಾ ಸ್ಟಾಲಿನ್ ವಿಶೇಷ ಪೂಜೆ! ಜಿಟಿಡಿ ದಂಪತಿಗಳಿಂದ ಆಶೀರ್ವಾದ, Video

ಕರ್ನಾಟಕದ ಪ್ರಸಿದ್ಧ ದೇವಾಲಯಗಳಾದ ಮೈಸೂರಿನ ಚಾಮುಂಡಿಬೆಟ್ಟ ಹಾಗೂ ಮಂಡ್ಯದ ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ‌.

ಮೈಸೂರು: ತಮಿಳುನಾಡಲ್ಲಿ ಮಾಜಿ ಸಿಎಂ ಎಂಕೆ ಸ್ಟಾಲಿನ್ ಪುತ್ರ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ , ಅವರ ತಾಯಿ ಹಿಂದೂ ದೇಗುಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹೌದು.. ತಮಿಳುನಾಡು ಮಾಜಿ ಸಿಎಂ ಎಂಕೆ ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಅಪಾರ ದೈವಭಕ್ತರು. ಮೈಸೂರು-ಮಂಡ್ಯದ ದೇವಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ‌.

ಕರ್ನಾಟಕದ ಪ್ರಸಿದ್ಧ ದೇವಾಲಯಗಳಾದ ಮೈಸೂರಿನ ಚಾಮುಂಡಿಬೆಟ್ಟ ಹಾಗೂ ಮಂಡ್ಯದ ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ‌.

ಮಡಿಲು ತುಂಬಿಸುವ ಉಡಿಸೇವೆ ನಡೆಸಿ, ಬಳೆ, ರೇಷ್ಮೆಸೀರೆಯ ಉಡಿ ಸಲ್ಲಿಸಿದ್ದಾರೆ. ಮಗನ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ತಾಯಿಯ ಈ ದೈವಭಕ್ತಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಜಿಟಿಡಿ ಮನೆಗೂ ದುರ್ಗಾ ಸ್ಟಾಲಿನ್ ಭೇಟಿ

ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರ ನಿವಾಸಕ್ಕೆ ಅಚ್ಚರಿ ಭೇಟಿ ನೀಡಿದ ದುರ್ಗಾ ಸ್ಟಾಲಿನ್ ಅವರು ದಂಪತಿಯ ಆಶೀರ್ವಾ ಪಡೆದಿದ್ದಾರೆ. ಈ ಕುರಿತ ವಿಡಿಯೋ ಕೂಡ ವ್ಯಾಪಕ ವೈರಲ್ ಆಗುತ್ತಿದೆ.

ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದಿದ್ದ ಉದಯನಿಧಿ ಸ್ಟಾಲಿನ್

ಇನ್ನು ತಮಿಳುನಾಡಲ್ಲಿ ನೂತನವಾಗಿ ವಿಜಯ್ ಸರಕಾರ ಆಡಳಿತಕ್ಕೆ ಬಂದ ಬಳಿಕ, 2ನೇ ದಿನದ ಆಡಳಿತದಲ್ಲಿ ಮಾಜಿ ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರು 'ಸನಾತನ ಧರ್ಮ ಜನರನ್ನು ವಿಭಜಿಸುತ್ತದೆ. ಇದನ್ನು ನಿರ್ಮೂಲನೆ ಮಾಡಬೇಕು ಎಂದಿದ್ದರು.

ಇದಕ್ಕೂ‌ ಮೊದಲು ನಡೆದ ಸಮಾವೇಶವೊಂದರಲ್ಲಿ ಸನಾತನ ಧರ್ಮವಬ್ನು ವಿರೋಧಿಸಿದರೆ ಸಾಲದು, ನಿರ್ಮೂಲನೆ ಮಾಡಬೇಕು . ಡೆಂಗ್ಯೂ, ಸೊಳ್ಳೆ ,ಮಲೇರಿಯಾ, ಕೊರೊನಾವನ್ನು ನಿರ್ಮೂಲನೆ ಮಾಡಿದ ರೀತಿ ಮಾಡಬೇಕು, ಸನಾತನ ಜಾತಿಯ ಆಧಾರದಲ್ಲಿ ನಿರ್ಮೂಲನೆ ಮಾಡುತ್ತದೆ ಎಂದಿದ್ದರು.

ಉದಯನಿಧಿ ಅವರ ಈ ಮಾತಿಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ನಟ ಅರ್ಜುನ್ ಸರ್ಜಾ ಕೂಡಾ ವಿರೋಧಿಸಿ ಸನಾತನ ಧರ್ಮವೇ ಬೇಡ ಅಂತಾದ್ರೆ, ಅಂತಹವರು ತಮ್ಮ ತಂದೆ ತಾಯಿಯನ್ನೂ ದೂರ ಮಾಡಬೇಕು ಇದು ಸಾಧ್ಯವೇ ಎಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: 'ಉದರನಿಮಿತ್ತಂ ಬಹುಕೃತ ವೇಷಂ' ಕರ್ನಾಟಕ ನನ್ನ ಕರ್ಮ ಭೂಮಿ- ಅನಂತ್ ನಾಗ್ ಭಾವುಕ ಮಾತು!

ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ!

ಅಕ್ರಮ ಆಸ್ತಿ ಗಳಿಕೆ: ರಾಜ್ಯಾದ್ಯಂತ ಎಂಟು ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಒಟ್ಟು 29.61 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ!

ಪಶ್ಚಿಮ ಬಂಗಾಳ ಪ್ರವೇಶಿಸಲು ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಹಾಯ: ಭಾರತೀಯ ಯೋಧನ ಬಂಧನ