ತಿಪಟೂರು ಸಮೀಪದ ನೊಣವಿನಕೆರೆಯಲ್ಲಿರುವ ವೀರ ಗಂಗಾಧರ ಅಜ್ಜಯ್ಯರ ಜೊತೆ ಡಿ ಕೆ ಶಿವಕುಮಾರ್  
ರಾಜ್ಯ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೀವನದಲ್ಲಿ ಅಜ್ಜಯ್ಯರ ಸ್ಥಾನ ಎಷ್ಟು ವಿಶೇಷ?

ತುಮಕೂರು ಜಿಲ್ಲೆಯ ತಿಪಟೂರು ಸಮೀಪದ ನೊಣವಿನಕೆರೆಯಲ್ಲಿರುವ ಈ ಮಠವು ವೀರಶೈವ-ಲಿಂಗಾಯತ ಪರಂಪರೆಗೆ ಸೇರಿದ್ದು, ಈ ಭಾಗದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.

ಬೆಂಗಳೂರು: ಶ್ರೀ ಕಾಡಸಿದ್ದೇಶ್ವರ ಮಠದ ಭಕ್ತರಿಂದ ಆರಾಧಿಸಲ್ಪಡುವ ಸಂತ ವೀರ ಗಂಗಾಧರ ಅಜ್ಜಯ್ಯರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೃದಯ ಮತ್ತು ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ.

ಜನಪ್ರಿಯವಾಗಿ ಅಜ್ಜಯ್ಯ ಮಠ ಎಂದು ಕರೆಯಲ್ಪಡುವ ಈ ಮಠದ ದೀರ್ಘಕಾಲದ ಭಕ್ತರಾಗಿರುವ ಡಿ ಕೆ ಶಿವಕುಮಾರ್ ಅವರು ತಮ್ಮ ರಾಜಕೀಯ ಜೀವನದ ಅತ್ಯುನ್ನತ ಹಂತವನ್ನು ತಲುಪಿದ ಬಳಿಕ ಅಜ್ಜಯ್ಯರ ಹೆಸರನ್ನು ಸ್ಮರಿಸಿರುವುದು ಅವರನ್ನು ಸಮೀಪದಿಂದ ಬಲ್ಲವರಿಗೆ ಆಶ್ಚರ್ಯಕರ ಸಂಗತಿಯಲ್ಲ. ಏಕೆಂದರೆ, ತಮ್ಮ ರಾಜಕೀಯ ಬದುಕಿನ ಪ್ರಮುಖ ಸಂದರ್ಭಗಳಲ್ಲೆಲ್ಲಾ ಅವರು ಇದೇ ಸಂಪ್ರದಾಯವನ್ನು ಅನುಸರಿಸುತ್ತ ಬಂದಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರು ಸಮೀಪದ ನೊಣವಿನಕೆರೆಯಲ್ಲಿರುವ ಈ ಮಠವು ವೀರಶೈವ-ಲಿಂಗಾಯತ ಪರಂಪರೆಗೆ ಸೇರಿದ್ದು, ಈ ಭಾಗದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.

ಪ್ರಮುಖ ಒಕ್ಕಲಿಗ ನಾಯಕನಾಗಿರುವ ಡಿ.ಕೆ. ಶಿವಕುಮಾರ್ ಅವರು ಅಜ್ಜಯ್ಯರ ಮೇಲಿನ ತಮ್ಮ ಅಪಾರ ಭಕ್ತಿಯ ಬಗ್ಗೆ ಹಲವು ಬಾರಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ತಮ್ಮ ಜೀವನದ ಮಾರ್ಗದರ್ಶಕ ಶಕ್ತಿಯಾಗಿ ಅಜ್ಜಯ್ಯರನ್ನು ಅವರು ಪರಿಗಣಿಸುತ್ತಾರೆ.

ರಾಜಕೀಯ ಜೀವನದ ಮಹತ್ವದ ಘಟ್ಟಗಳಲ್ಲಿ ಡಿ ಕೆ ಶಿವಕುಮಾರ್ ಅವರು ತುಮಕೂರಿನ ಮಠಕ್ಕೆ ಮಾತ್ರವಲ್ಲದೆ, ಬೆಂಗಳೂರಿನಲ್ಲಿರುವ ಅದರ ಶಾಖಾ ಮಠಕ್ಕೂ ನಿಯಮಿತವಾಗಿ ಭೇಟಿ ನೀಡುತ್ತಿದ್ದರು.

ವೈಯಕ್ತಿಕ ಹಾಗೂ ರಾಜಕೀಯ ಸವಾಲುಗಳನ್ನು ಎದುರಿಸಿ ಹೊರಬರಲು ಅಜ್ಜಯ್ಯರ ಆಶೀರ್ವಾದವೇ ಶಕ್ತಿ ನೀಡಿದೆ ಎಂದು ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ತಮ್ಮ ಜೀವನದ ಯಶಸ್ಸು ಮತ್ತು ಸಂಕಷ್ಟಗಳಿಂದ ಪಾರಾಗುವಲ್ಲಿ ಅಜ್ಜಯ್ಯರ ಕೃಪೆ ಪ್ರಮುಖ ಪಾತ್ರ ವಹಿಸಿದೆ ಎಂಬ ನಂಬಿಕೆಯನ್ನು ಶಿವಕುಮಾರ್ ಹೊಂದಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿರುವ ಈ ಮಹತ್ವದ ಸಂದರ್ಭದಲ್ಲಿ ಸಹ ಅವರು ಅಜ್ಜಯ್ಯರನ್ನು ಸ್ಮರಿಸಿರುವುದು, ಆ ಸಂತನ ಮೇಲಿನ ಅವರ ಅಚಲ ಭಕ್ತಿ ಮತ್ತು ನಂಬಿಕೆಯನ್ನು ಮತ್ತೊಮ್ಮೆ ಪ್ರತಿಬಿಂಬಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆ ಅಸಮಾಧಾನ: ಖಮೇನಿ ಭೇಟಿಗೆ ಟ್ರಂಪ್ ಒಲವು, ಇರಾನ್ ಕಡೆ ಸ್ನೇಹದ ಹಸ್ತ..?

ಹಿಜ್ಬುಲ್ಲಾಗೆ ಕಟ್ಟುನಿಟ್ಟಿನ ಕಡಿವಾಣ: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಇಸ್ರೇಲ್-ಲೆಬನಾನ್ ಮಹತ್ವದ ಒಪ್ಪಂದ, ಅಮೆರಿಕಾ ಮಧ್ಯಸ್ಥಿಕೆ..!

ಮುಂದಿನ ಶತಮಾನ ಯಾರಿಗೆ ಸೇರಿದ್ದು? ನಿರ್ಧರಿಸುವುದು R&D ಮೇಲಿನ ಹೂಡಿಕೆ! (ಹಣಕ್ಲಾಸು)

ಅಮೆರಿಕದಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ: ‘F* India’ ಘೋಷಣೆ ಕೂಗಿ, ಬಾವುಟ ಹರಿದು ಹೀನ ಕೃತ್ಯ, ಭಾರೀ ಆಕ್ರೋಶ..!

ಬಿಹಾರ: ಮುಜಫರ್‌ಪುರ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: ಮೂವರ ಸಾವು, 20ಕ್ಕೂ ಹೆಚ್ಚು ರೋಗಿಗಳಿಗೆ ಗಾಯ

SCROLL FOR NEXT