ರಾಜ್ಯ

ಜೀರೋ ಟ್ರಾಫಿಕ್ ತಪ್ಪಿಸಲು ಭಾನುವಾರ ಸಾರ್ವಜನಿಕ ಸಾರಿಗೆಗೆ ಆದ್ಯತೆ: ಸಿಎಂ ಡಿ.ಕೆ. ಶಿವಕುಮಾರ್ ಮೆಟ್ರೋ ಪ್ರಯಾಣ-Video

ಮೊದಲು ಸಾರ್ವಜನಿಕರಿಗೆ ತೊಂದರೆ ಆಗಬಹುದಾಗ ಜೀರೋ ಟ್ರಾಫಿಕ್ ಕಾರು ಪ್ರಯಾಣ ತಪ್ಪಿಸಲು ವಿಧಾನಸೌಧದ ಮೆಟ್ರೋ ಸ್ಟೇಷನ್‌ನಿಂದ ಕನಕಪುರ ರಸ್ತೆವರೆಗೂ ಮೆಟ್ರೋದಲ್ಲಿ ಪ್ರಯಾಣಿಸಿ ಸಾರ್ವಜನಿಕರೊಂದಿಗೆ ಬೆರೆತು ಮಾತುಕತೆ ನಡೆಸಿದರು.

ಬೆಂಗಳೂರು: ಸಿಎಂ ಆದ ಬಳಿಕ ಡಿ.ಕೆ. ಶಿವಕುಮಾರ್ ಅವರು ಇಂದು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಆದ ಬಳಿಕ ಸ್ವಕ್ಷೇತ್ರ ಕನಕಪುರಕ್ಕೆ ಮೊದಲ ಬಾರಿ ಇಂದು ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್​ ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನಲ್ಲಿ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾದಲಿದ್ದಾರೆ.

ಅದಕ್ಕೂ ಮೊದಲು ಸಾರ್ವಜನಿಕರಿಗೆ ತೊಂದರೆ ಆಗಬಹುದಾಗ ಜೀರೋ ಟ್ರಾಫಿಕ್ ಕಾರು ಪ್ರಯಾಣ ತಪ್ಪಿಸಲು ವಿಧಾನಸೌಧದ ಮೆಟ್ರೋ ಸ್ಟೇಷನ್‌ನಿಂದ ಕನಕಪುರ ರಸ್ತೆವರೆಗೂ ಮೆಟ್ರೋದಲ್ಲಿ ಪ್ರಯಾಣಿಸಿ ಸಾರ್ವಜನಿಕರೊಂದಿಗೆ ಬೆರೆತು ಮಾತುಕತೆ ನಡೆಸಿದರು.

ಸಾಮಾನ್ಯವಾಗಿ ಮುಖ್ಯಮಂತ್ರಿ ನಿವಾಸ ಸದಾಶಿವನಗರದಿಂದ ಕನಕಪುರ ರಸ್ತೆವರೆಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಜಾರಿಗೊಳಿಸಿದರೆ ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದನ್ನು ಪರಿಗಣಿಸಿ, ಜನಸ್ನೇಹಿ ಕ್ರಮವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.

ಕನಕಪುರ ರಸ್ತೆ ತಲುಪಿದ ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ತಮ್ಮ ಪ್ರವಾಸ ಮುಂದುವರೆಸಲಿದ್ದಾರೆ. ಪ್ರವಾಸ ಮುಗಿಸಿ ಇಂದು ರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಸಿಎಂ ಭೇಟಿ ಹಿನ್ನೆಲೆ ಕ್ಷೇತ್ರಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾತೆ ಹಂಚಿಕೆ ಕಿತ್ತಾಟ: ಆರಂಭದಲ್ಲೇ ಅಸಮಾಧಾನದ ಅಲೆ: ಡಿಕೆಶಿ ಸರ್ಕಾರಕ್ಕಿದು ಆರಂಭಿಕ ಆಘಾತವೋ, ದೊಡ್ಡ ಸಂಕಷ್ಟದ ಮುನ್ಸೂಚನೆಯೋ?

ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ: ಗೃಹಬಳಕೆ ಸಿಲಿಂಡರ್‌ ದರ ಮತ್ತೆ ಏರಿಕೆ, ಬರೋಬ್ಬರಿ 29 ರೂ. ಹೆಚ್ಚಳ..!

ಶ್ರೇಯಸ್ ಅಯ್ಯರ್‌ಗೆ ಟಿ20 ನಾಯಕತ್ವ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ Suryakumar Yadav ನಿವೃತ್ತಿ? ಎಕ್ಸ್ ಪೋಸ್ಟ್ ವೈರಲ್!

'ಮಲ್ಲಘಟ್ಟ ಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ನನಗೆ ಮನ:ಶಾಂತಿ ಸಿಗುತ್ತದೆ:ಡಿ ಕೆ ಶಿವಕುಮಾರ್ ರೋಡ್‌ಶೋ; ಬೆಂಬಲಿಗರ ಸಂಭ್ರಮ-Video

ಬರನಾಡಿನ ಭಗೀರಥ: 200 ಕೆರೆ-3,000 ಕೊಳವೆ ಬಾವಿಗಳಿಗೆ ಮರುಜೀವ; ಗದಗದ ‘ಜಲಯೋಧ’ನ ಪ್ರೇರಣಾದಾಯಕ ಯಶೋಗಾಥೆ..!

SCROLL FOR NEXT