ಸಂಗ್ರಹ ಚಿತ್ರ 
ರಾಜ್ಯ

ಯಾದಗಿರಿ: ಕ್ವಾರಿಯಲ್ಲಿ ಬಟ್ಟೆ ತೊಳೆಯುವಾಗ ಕಾಲು ಜಾರಿ ಇಬ್ಬರು ಬಾಲಕಿಯರು ಸೇರಿ ಮೂವರು ಸಾವು

ಯಾದಗಿರಿಯ ವಡಗೇರ ತಾಲೂಕಿನ ಬಸವನಗರ ಬಳಿಯಲ್ಲಿರುವ ಕ್ವಾರಿಗೆ ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲು ಜಾರಿಬಿದ್ದು ಇಬ್ಬರು ಬಾಲಕಿಯರೂ ಸೇರಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಯಾದಗಿರಿ: ಯಾದಗಿರಿಯ ವಡಗೇರ ತಾಲೂಕಿನ ಬಸವನಗರ ಬಳಿಯಲ್ಲಿರುವ ಕ್ವಾರಿಗೆ ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲು ಜಾರಿಬಿದ್ದು ಇಬ್ಬರು ಬಾಲಕಿಯರೂ ಸೇರಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತರನ್ನು 35 ವರ್ಷದ ಗುಂಡಮ್ಮ, 11 ವರ್ಷದ ಸುಜಾತಾ ಮತ್ತು 9 ವರ್ಷದ ಶಿವಕಾಂತಾ ಎಂದು ಗುರುತಿಸಲಾಗಿದೆ.

ಬಟ್ಟೆ ತೊಳೆಯುವಾಗ ಕ್ವಾರಿಗೆ ಇಬ್ಬರು ಬಾಲಕಿಯರು ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಗುಂಡಮ್ಮ ತನ್ನದೇ ಸೀರೆಯನ್ನು ಕೊಟ್ಟಿದ್ದಾರೆ. ನೀರಿನಿಂದ ಮೇಲೆ ಬರುವ ಆತುರದಲ್ಲಿ ಬಾಲಕಿಯರು ಸೀರೆಯನ್ನು ಜೋರಾಗಿ ಎಳೆದಿದ್ದರಿಂದ ಗುಂಡಮ್ಮ ಸಹ ನೀರಿಗೆ ಬಿದ್ದಿದ್ದು ಮೂವರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ವಡಗೇರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

DKS ಸಿಎಂ ಆದ ಬೆನ್ನಲ್ಲೇ ಹಲವು ಅಧಿಕಾರಿಗಳ ವರ್ಗ: ಧರ್ಮಸ್ಥಳ ಕೇಸ್ ತನಿಖೆ ನಡೆಸಿದ್ದ ಪ್ರಣಬ್ ಮೊಹಂತಿ CID ಡಿಜಿಪಿಯಾಗಿ ನೇಮಕ!

ಬೆಂಗಳೂರಿಗೆ ಜೂ. 9ರಂದು Red Alert, ಬಿರುಗಾಳಿ ಸಹಿತ ಭಾರೀ ಮಳೆ: ರಾಜ್ಯದಲ್ಲಿ ಮುಂದಿನ 8 ದಿನ ಮಳೆಯಾಘಾತ; IMD ಎಚ್ಚರಿಕೆ!

Conspiracy Was Hatched: ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಬಗ್ಗೆ ಗೆಹ್ಲೋಟ್ ಸ್ಫೋಟಕ ಹೇಳಿಕೆ!

DRDO ವಿಜ್ಞಾನಿ ನೇಮಕಾತಿ 2026: 33 ಹುದ್ದೆಗಳಿಗೆ ಅರ್ಜಿ ಆಹ್ವಾನ; ಗರಿಷ್ಠ ವೇತನ, ವಯೋ ಮಿತಿ ಬಗ್ಗೆ ಇಲ್ಲಿದೆ ಮಾಹಿತಿ

Matching Bracelets! ಸಿರಾಜ್ ಅಲ್ಲ, ಅಭಿಷೇಕ್ ಶರ್ಮಾ ಜೊತೆಗೆ ಮಹಿರಾ ಶರ್ಮಾ ಡೇಟಿಂಗ್?

SCROLL FOR NEXT