ಜಗದೀಶ್ ಶೆಟ್ಟರ್ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್ 
ರಾಜ್ಯ

ಹಿರಿಯರ ಅನುಭವ, ಮಾರ್ಗದರ್ಶನ ಬೇಕು; ಸಮಯ ಕೊಟ್ಟರೆ ಕುಮಾರಸ್ವಾಮಿ ಭೇಟಿ ಮಾಡುವೆ: ಡಿ.ಕೆ ಶಿವಕುಮಾರ್

ಈ ನಾಯಕರು ರಾಜ್ಯದ ಹಿತಕ್ಕೆ ಕೆಲಸ ಮಾಡಿದವರು. ಪ್ರತಿಯೊಬ್ಬರೂ ಜನರ ಹಿತಕ್ಕಾಗಿ ನಿರ್ಧಾರ ಕೈಗೊಂಡಿದ್ದಾರೆ. ಉದಾಹರಣೆಗೆ ಸದಾನಂದ ಗೌಡರು ಸಕಾಲ ಜಾರಿಗೆ ತಂದಿದ್ದಾರೆ.

ಬೆಂಗಳೂರು: ರಾಜ್ಯಕ್ಕೆ ಸೇವೆ ಮಾಡಿರುವ ಹಿರಿಯರ ಅನುಭವ ಹಾಗೂ ಮಾರ್ಗದರ್ಶನ ಕೇಳಬೇಕು" ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನಲ್ಲಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಅವರ ನಿವಾಸಕ್ಕೆ ಶಿವಕುಮಾರ್ ಅವರು ಸೋಮವಾರ ಸಂಜೆ ಭೇಟಿ ನೀಡಿ ಆಶೀರ್ವಾದ ಪಡೆದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಭೇಟಿಯ ಬಗ್ಗೆ ಕೇಳಿದಾಗ, "ನಾನು ಮೊಯ್ಲಿ ಅವರನ್ನು ಮಾತ್ರವಲ್ಲ, ಜಗದೀಶ್ ಶೆಟ್ಟರ್, ಸದಾನಂದ ಗೌಡರು ಮತ್ತು ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವೆ. ಸಮಯ ಕೊಟ್ಟರೆ ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡುವೆ. ಇವರೆಲ್ಲರೂ ರಾಜ್ಯಕ್ಕೆ ಸೇವೆ ಮಾಡಿದ್ದು, ಅವರಿಗೆ ನೀಡಬೇಕಾದ ಗೌರವ ಕೊಡಲೇಬೇಕು" ಎಂದರು.

"ಈ ನಾಯಕರು ರಾಜ್ಯದ ಹಿತಕ್ಕೆ ಕೆಲಸ ಮಾಡಿದವರು. ಪ್ರತಿಯೊಬ್ಬರೂ ಜನರ ಹಿತಕ್ಕಾಗಿ ನಿರ್ಧಾರ ಕೈಗೊಂಡಿದ್ದಾರೆ. ಉದಾಹರಣೆಗೆ ಸದಾನಂದ ಗೌಡರು ಸಕಾಲ ಜಾರಿಗೆ ತಂದಿದ್ದಾರೆ. ಅವರು ನನಗಿಂತ ಹಿರಿಯರು. ಅವರ ಮಾರ್ಗದರ್ಶನ ಪಡೆಯಲು ಬಂದಿರುವೆ.

ನಮ್ಮ ನಡುವೆ ಪಕ್ಷ ಹಾಗೂ ಸೈದ್ದಾಂತಿಕ ಭಿನ್ನಾಭಿಪ್ರಾಯ ಇರುವುದು ಬೇರೆ ವಿಚಾರ" ಎಂದರು. ಇಂದು ನಡೆದ ಇಂಡಿಯಾ ಒಕ್ಕೂಟ ಸಭೆ ಬಗ್ಗೆ ಕೇಳಿದಾಗ, "ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲಿದ್ದು, ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆ ಮಾಡಬೇಕಿದೆ" ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ ಕುರಿತು ಮಿಮಿಕ್ರಿ, ದಿವಂಗತ ತಾಯಿಗೆ ಅಪಮಾನ: ‘ಅಸಭ್ಯ ಸಂಸ್ಕೃತಿಗೆ ರಾಹುಲ್ ಬೆಂಬಲ’; ಕಾಂಗ್ರೆಸ್ ವಿರುದ್ಧ BJP ವಾಗ್ದಾಳಿ

ಅಸಹ್ಯಕರವಾಗಿ ಫೋಟೋ ತೆಗೆಯುವವರಿಗೆ ಹೊಡೆಯಿರಿ: ಶರ್ಟ್ ಬಿಚ್ಚಿ ಪಾಪರಾಜಿಗಳ ವಿರುದ್ಧ ಸಲ್ಮಾನ್ ಖಾನ್ ಗರಂ!

ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭೀಕರ ಅಪಘಾತ; 75 ಅಡಿ ಕೆಳಗೆ ಬಿದ್ದ BMW ಕಾರು, 3 ವಿದ್ಯಾರ್ಥಿಗಳ ಸಾವು! Video

ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಪ್ರಮುಖ BRICS ಮಾರುಕಟ್ಟೆಗಳಿಗೆ ಭಾರತದ ರಫ್ತು ಶೇ 34ರಷ್ಟು ಏರಿಕೆ; ಚೀನಾಗೆ ಅತಿ ಹೆಚ್ಚು!

ಯಾರನ್ನೂ ಬಿಟ್ಟಿಲ್ಲ ವೈಫಲ್ಯ: "ಆ ದಿನ ನನ್ನ ವೃತ್ತಿ ಜೀವನ ಮುಗಿದೇ ಹೋಗಿತ್ತು ಎಂದುಕೊಂಡಿದ್ದೆ...": ಅಜಿತ್ ದೋವಲ್