ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಿವಾಸ ಹೊರಗೆ ಪತ್ತೆಯಾದ ಕೋಳಿ, ನಿಂಬೆಹಣ್ಣು 
ರಾಜ್ಯ

ಸಿಎಂ ಡಿ.ಕೆ ಶಿವಕುಮಾರ್ ನಿವಾಸ ಬಳಿ ವಾಮಚಾರ ಪ್ರಯೋಗ ಶಂಕೆ: ತನಿಖೆಗಿಳಿದ ಪೊಲೀಸರು

ಮುಖ್ಯಮಂತ್ರಿಗಳ ನಿವಾಸದ ಬಳಿ ಮೂರು ರಸ್ತೆ ಸೇರುವ ಬಳಿ ಕೋಳಿ ಬಲಿಯನ್ನು ಮಾಡಲಾಗಿರುವುದು ಪತ್ತೆಯಾಗಿದೆ.

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಹೊಸ ತಲೆನೋವು ಶುರುವಾಗಿದೆ. ಡಿ ಕೆ ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದ ಹಿಂದೆ ವಾಮಚಾರ ಪ್ರಯೋಗ ಮಾಡಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.

ಅವರು ಮುಖ್ಯಮಂತ್ರಿ ಆಗಿದ್ದನ್ನು ಸಹಿಸಿಕೊಳ್ಳದವರು, ವಾಮಾಚಾರವನ್ನು ಪ್ರಯೋಗಿಸಿದರೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಎರಡು ದಿನಗಳ ಹಿಂದೆ, ಅವರ ಸದಾಶಿವನಗರ ನಿವಾಸದ ಹಿಂದೆ ಕೋಳಿಯ ತಲೆ, ನಿಂಬೆಹಣ್ಣು ಪತ್ತೆಯಾಗಿದೆ.

ಸಿಎಂ ಸದಾಶಿವನಗರದ ಬಳಿ ಮಾಟಮಂತ್ರ ಪ್ರಯೋಗವಾಗಿದೆಯೇ?

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಹಿಂದೆ ಕೋಳಿಯ ತಲೆ ಮತ್ತು ಮೂರು ನಿಂಬೆಹಣ್ಣು ಪತ್ತೆಯಾಗಿದೆ. ಪೊಲೀಸರು ಈ ವಿಚಾರಕ್ಕೆ ಸಂಬಂಧಿಸಿದಂತೆ, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಆರಂಭಿಸಿದ್ದಾರೆ. ಎರಡು ದಿನಗಳ ಹಿಂದೆ ಇದು ಪತ್ತೆಯಾಗಿದ್ದು, ಮುಖ್ಯಮಂತ್ರಿಗಳ ನಿವಾಸದ ಬಳಿಯೇ ಯಾವ ಕಾರಣಕ್ಕಾಗಿ, ಕೋಳಿ ಬಲಿ ನಡೆದಿದೆ, ಇದರ ಹಿಂದೆ ಯಾರಿರಬಹುದು, ಇದರ ಹಿಂದಿನ ಉದ್ದೇಶವೇನು ಎನ್ನುವುದನ್ನು ಅರಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೂರು ರಸ್ತೆ ಸೇರುವಲ್ಲಿ ಕೋಳಿ ತಲೆ, ನಿಂಬೆಹಣ್ಣು

ಮುಖ್ಯಮಂತ್ರಿಗಳ ನಿವಾಸದ ಬಳಿ ಮೂರು ರಸ್ತೆ ಸೇರುವ ಬಳಿ ಕೋಳಿ ಬಲಿಯನ್ನು ಮಾಡಲಾಗಿರುವುದು ಪತ್ತೆಯಾಗಿದೆ. ಪೊಲೀಸರು ಸತ್ತ ಕೋಳಿ ಮತ್ತು ನಿಂಬೆಹಣ್ಣನ್ನು ಕಂಡು ತೆರವುಗೊಳಿಸಿದ್ದಾರೆ.

ಅಪಾರ ದೈವಭಕ್ತ ಡಿ.ಕೆ ಶಿವಕುಮಾರ್

ಹೇಳಿಕೇಳಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಪಾರ ದೈವಭಕ್ತಿ ಹೊಂದಿರುವವರು. ತಮ್ಮ ಜೀವನದ ಪ್ರತಿಯೊಂದು ಗಳಿಗೆ ನಿರ್ಧಾರಗಳನ್ನು ಜ್ಯೋತಿಷಿಗಳಲ್ಲಿ ಕೇಳಿ ಅರ್ಚಕರನ್ನು ಕರೆಸಿ ಪೂಜೆ ಮಾಡಿಸುತ್ತಾರೆ. ತುಮಕೂರಿನ ನೊಣವಿನಕೆರೆ ಅಜ್ಜಯ್ಯನ ಅಣತಿಯಂತೆಯೇ ನಡೆಯುವವರು, ಇದೀಗ ಅವರ ನಿವಾಸದ ಹಿಂದೆ ಈ ರೀತಿ ಕಾಣಿಸಿಕೊಂಡಿದ್ದು ಡಿ ಕೆ ಶಿವಕುಮಾರ್ ಕುಟುಂಬಸ್ಥರಿಗೆ ಮತ್ತು ಅವರ ಅಭಿಮಾನಿಗಳಿಗೆ ಆತಂಕಕ್ಕೀಡುಮಾಡಿದೆ. ಆದರೆ ಡಿಕೆಶಿಯವರದ್ದು, ದೈವಭಕ್ತ ಮತ್ತು ಸಾಂಪ್ರದಾಯಿಕವಾಗಿ ಬದುಕುವ ಕುಟುಂಬವಾಗಿದೆ. ಹಾಗಾಗಿ, ಅವರಿಗೆ ಇಂತಹ ವಾಮಾಚಾರ ಪ್ರಯೋಗ ನಡೆದಿರುವ ಸಾಧ್ಯತೆ ಕಮ್ಮಿ ಎಂಬ ವಿಶ್ವಾಸ ಕೂಡ ಅಭಿಮಾನಿಗಳದ್ದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!